ಮುಂಬೈ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರನ್ನು ರಾಜ್ಯಪಾಲರ ಕೋಟಾದಡಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲು ಶಿವಸೇನೆ ಮುಂದಾಗಿದೆ. 

ಪೋರ್ನ್‌ ನಟಿ ಭಾಗ 2; ರೇಪ್ ಬೇರೆ, ಸಂಭೋಗ ಬೇರೆ.. ಫಿಲ್ಟರ್ ಬಿಟ್ಟು ಕಂಗನಾ ಏಟು! 

ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ ಸಂಜಯ್‌ ರಾವುತ್‌, ‘ಈ ಸಂಬಂಧ ಈಗಾಗಲೇ ಸಿಎಂ ಉದ್ಧವ್‌ ಠಾಕ್ರೆ ಮಾತೋಂಡ್ಕರ್‌ ಅವರ ಜೊತೆ ಸಮಾಲೋಚನೆ ನಡೆಸಿದ್ದು, ವಿಧಾನಪರಿಷತ್ತಿಗೆ ನಾಮನಿರ್ದೇಶನವಾಗಲು ಮಾತೋಂಡ್ಕರ್‌ ಸಹ ಒಪ್ಪಿದ್ದಾರೆ’ ಎಂದರು. 

ಮಹಾ ವಿಕಾಸ್‌ ಅಘಾಡಿ ಸರ್ಕಾರ ಮೇಲ್ಮನೆಗೆ ನಾಮ ನಿರ್ದೇಶನ ಮಾಡಲು ರಾಜ್ಯಪಾಲ ಕೋಶ್ಯಾರಿ ಅವರಿಗೆ 12 ಹೆಸರನ್ನು ಶಿಫಾರಸು ಮಾಡಬೇಕಿದೆ. ಬಳಿಕ ಮಾತೋಂಡ್ಕರ್‌ ಸಹ ಪಕ್ಷದ ವಕ್ತಾರರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.