Asianet Suvarna News Asianet Suvarna News

ಹೋಳಿ ಹಬ್ಬ: Shilpa Shetty ಎಡವಟ್ಟು- ಸುಮ್ನೆ ಬಿಡ್ತಾರಾ ಟ್ರೋಲಿಗರು?

ಹೋಳಿ ಹಬ್ಬದ ನಿಮಿತ್ತ ಹೋಲಿಕಾ ದಹನ ಆಚರಿಸಿರುವ ನಟಿ ಶಿಲ್ಪಾ ಶೆಟ್ಟಿ ಟ್ರೋಲ್​ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದೇನು? 
 

Shilpa Shetty trolled for burning holi with bamboo trolled by neteizens
Author
First Published Mar 7, 2023, 4:45 PM IST

ಈಗ ಎಲ್ಲೆಲ್ಲೂ ಹೋಳಿ ಹಬ್ಬದ ಸಂಭ್ರಮ.  ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ದೇಶಾದ್ಯಂತ  ಬಹು ಧರ್ಮೀಯರು ಇದನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.  ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.  ಛೋಟಿ ಹೋಳಿಯೆಂದು ಕರೆಯಲಾಗುವ ಹೋಲಿಕಾ ದಹನವನ್ನು (Holika Dahan) ಹೋಳಿಯ ಒಂದು ದಿನ ಮೊದಲು ನಡೆಸಲಾಗುತ್ತದೆ. ಹೋಲಿಕಾ ದಹನಕ್ಕೆ ಒಂದು ಕಥೆ ಇದೆ. ಅದೇನೆಂದರೆ,  ಪ್ರಹ್ಲಾದನು ವಿಷ್ಣುವಿನ ಪರಮ ಭಕ್ತನಾಗಿದ್ದನು. ಇದರಿಂದಾಗಿ ಪ್ರಹ್ಲಾದನ ತಂದೆ, ರಾಕ್ಷಸ ಹಿರಣ್ಯಕಶಿಪು ತನ್ನ ಮಗನ ಮೇಲೆ ಕೋಪಗೊಳ್ಳುತ್ತಾನೆ. ಯಾಕೆಂದರೆ ಹಿರಣ್ಯಕಶಿಪು ಭಗವಾನ್‌ ವಿಷ್ಣುವನ್ನು ತನ್ನ ಶತ್ರುವೆಂದು ಪರಿಗಣಿಸಿದ್ದನು. ತನ್ನ ಮಗನನ್ನೇ ಕೊಲ್ಲಲು ಮುಂದಾದ ಹಿರಣ್ಯಕಶಿಪು ತನ್ನ ಸಹೋದರಿ ಹೋಲಿಕಾಳ ಬಳಿ ನೀನು ನನ್ನ ಮಗನನ್ನು ನಿನ್ನ ತೊಡೆಯ ಮೇಲೆ ಕೂರಿಸಿಕೊಂಡು ಅಗ್ನಿ ಪ್ರವೇಶ ಮಾಡಬೇಕೆಂದು ಆದೇಶಿಸುತ್ತಾನೆ. ಅಸುರನ ಸಹೋದರಿ ಹೋಲಿಕಾಳು ಬೆಂಕಿಯಲ್ಲಿ ಸುಡಲು ಸಾಧ್ಯವಾಗದ ವರವನ್ನು ಹೊಂದಿದ್ದಳು, ಆದರೆ ಹೋಲಿಕಾಳು ಪ್ರಹ್ಲಾದನೊಂದಿಗೆ ಅಗ್ನಿಯನ್ನು ಪ್ರವೇಶಿಸಿದಾಗ, ಸ್ವತಃ ಹೋಲಿಕಾಳೆ ಅಗ್ನಿಯಲ್ಲಿ ಆಹುತಿಯಾಗುತ್ತಾಳೆ. ವಿಷ್ಣುವಿನ ಪವಾಡದಿಂದ ಪ್ರಹ್ಲಾದನಿಗೆ ಅಗ್ನಿಯಿಂದ ಕಿಂಚಿತ್ತು ತೊಂದರೆಯಾಗಲಿಲ್ಲ. ಇದರಿಂದಾಗಿ ಹೋಲಿಕಾ ದಹನವು ಆಚರಣೆಗೆ ಬಂದಿತು.

ದುಷ್ಟಶಕ್ತಿಯನ್ನು ನಿರ್ಮೂಲನ ಮಾಡುವ ಈ ಹೋಲಿಕಾ ದಹವನ್ನು  ಸೋಮವಾರ ರಾತ್ರಿ ನಟಿ ಶಿಲ್ಪಾ ಶೆಟ್ಟಿ ತಮ್ಮ ಕುಟುಂಬ ಸಹಿತರಾಗಿ ಆಚರಿಸಿದ್ದರು, ಆದರೆ ಅವರು ಮಾಡಿರುವ ಎಡವಟ್ಟು ಇದೀಗ ಭಾರಿ ಟ್ರೋಲ್​ಗೆ ಒಳಗಾಗಿದೆ. ಕುಟುಂಬ ಸಹಿತರಾಗಿ ಹೋಲಿಕಾ ದಹನ ಮಾಡಿರುವ ನಟಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​  ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ  ಶಿಲ್ಪಾ ಶೆಟ್ಟಿ (Shilpa Shetty) ಅವರು ತಮ್ಮ ಮಕ್ಕಳು ಮತ್ತು ತಾಯಿಯೊಂದಿಗೆ ಹೋಲಿಕಾ ದಹನದಲ್ಲಿ ಪಾಲ್ಗೊಂಡಿದ್ದನ್ನು ನೋಡಬಹುದು. ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಕೈ ಜೋಡಿಸಿ ಪ್ರಾರ್ಥಿಸಿದರು. ಅದರಲ್ಲಿ ಅವರು ನಾವು ಹೋಲಿಕಾ ದಹನ್ ಆಚರಿಸುತ್ತಿದ್ದೇವೆ. ನಾವೆಲ್ಲ ಚಿಕ್ಕ ಚಿಕ್ಕ ಚಿಟ್ ಗಳನ್ನು ಮಾಡಿ ಅದರಲ್ಲಿ ಋಣಾತ್ಮಕ ವಿಚಾರಗಳನ್ನು ಬರೆದು ಹೋಲಿಕಾ ಬೆಂಕಿಯಲ್ಲಿ  ಸುಡುತ್ತೇವೆ. ಇದು ನಾವು ಪ್ರತಿ ವರ್ಷವೂ ಮಾಡುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿ ಹೋಗುತ್ತದೆ.  ದೇವರು ಸದಾ ನಮ್ಮೊಂದಿಗಿದ್ದಾನೆ, ನಮ್ಮನ್ನು ರಕ್ಷಿಸುತ್ತಾನೆ ಮತ್ತು ದುಷ್ಟರನ್ನು ಸುಟ್ಟು ಬೂದಿ ಮಾಡುತ್ತಾನೆ ಎಂದು ನಮಗೆ ಭರವಸೆ ನೀಡುವ ಹಬ್ಬವಾಗಿದೆ ಎಂದಿದ್ದಾರೆ.

KD: 20 ವರ್ಷಗಳ ಬಳಿಕ ಮತ್ತೆ ಒಂದಾಗ್ತಿದ್ದಾರೆ ರವಿಚಂದ್ರನ್​- ಶಿಲ್ಪಾ ಶೆಟ್ಟಿ?

ಇವೆಲ್ಲವೂ ಸರಿ. ಆದರೆ ಶಿಲ್ಪಾ ಶೆಟ್ಟಿ ಅವರು ಬಿದಿರಿನ ಕೋಲುಗಳಿಂದ ದಹನ ಮಾಡಿರುವುದು ಟ್ರೋಲ್​ಗೆ  ಕಾರಣವಾಗಿದೆ. ಅಷ್ಟಕ್ಕೂ ಶಿಲ್ಪಾ ಮಾಡಿದ ತಪ್ಪು ಏನೆಂದರೆ, ಅವರು ಉರುವಲಿಗೆ ಬಿದಿರನ್ನು ಬಳಸುತ್ತಿದ್ದರು. ಅಸಲಿಗೆ ಬಿದಿರನ್ನು ದಹಿಸಲು ಬಳಸುವುದು ಹಿಂದೂ ಸಂಸ್ಕೃತಿಯಲ್ಲ. ಅದರಲ್ಲಿಯೂ ಇಂಥ ಹೋಲಿಕಾ ದಹನದಲ್ಲಿ ಅದನ್ನು ಬಳಸುವಂತೆ ಇಲ್ಲ. ಬದಲಿಗೆ  ಹೋಲಿಕಾ ದಹನ ಸಂದರ್ಭದಲ್ಲಿ ಹಸುವಿನ ಸಗಣಿಯಿಂದ ಮಾಡಿದ ಕಂದಗಳನ್ನು ಬಳಸುತ್ತಾರೆ, ಒಂದು ವೇಳೆ ಅದು ಸಿಗದೇ ಹೋದರೆ ಅಲಸಂದೆ ಮರದ ತುಂಡುಗಳನ್ನು ಬಳಸುತ್ತಾರೆ. ಆದರೆ ಇವುಗಳ ಅರಿವು ಇಲ್ಲದ ಶಿಲ್ಪಾ ಬಿದಿರಿನ ತುಂಡನ್ನು ಬಳಸಿದ್ದು, ಟ್ರೋಲ್​ಗೆ ಕಾರಣವಾಗಿದೆ.
 
'ಬಿದಿರನ್ನು ಸುಡುವುದನ್ನು ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದೆ.  ಬಿದಿರು (Bamboo) ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಅದಕ್ಕಾಗಿ ಹಿಂದೂ ಸಂಪ್ರದಾಯದಲ್ಲಿ ಇದು ನಿಷಿದ್ಧ. ಅಷ್ಟೇ ಅಲ್ಲದೇ  ಹೋಲಿಕಾಳನ್ನು  ಎಂದಿಗೂ ಮನೆಯ ಸಮೀಪ ಸುಡುವುದಿಲ್ಲ ಎಂದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶಿಲ್ಪಾರಿಗೆ ಬುದ್ಧಿ ಹೇಳುತ್ತಿದ್ದಾರೆ. ಇನ್ನೊಬ್ಬ ಬಳಕೆದಾಗ,  ಇಂದಿನಿಂದ ಗಂಡ ರಾಜ್​ ಕುಂದ್ರಾ ಅವರ (Raj Kundra) ಎಲ್ಲಾ ಮುಖವಾಡಗಳನ್ನು ಬೆಂಕಿಯಲ್ಲಿ ಸುಟ್ಟುಹಾಕಿ, ಅವರಿಗೆ ಸ್ವಾತಂತ್ರ್ಯ ನೀಡಿ ಎಂದು ಕಾಲೆಳೆದಿದ್ದಾರೆ. 

ನನ್ನ ಬ್ಯೂಟಿಫುಲ್ ಬೇಬಿ ಗರ್ಲ್; ಹೋಳಿ ಹಬ್ಬಕ್ಕೆ ಜೈಲಿನಿಂದನೇ ಜಾಕ್ವೆಲಿನ್‌ಗೆ ಲವ್ ಲೆಟರ್ ಬರೆದ ಸುಕೇಶ್

 

 

Follow Us:
Download App:
  • android
  • ios