ತಾಲೀಬಾನ್ ಅನಾಗರಿಕತೆ ಬಗ್ಗೆ ಅಂತಾರಾಷ್ಟ್ರೀಯ ಕಾರ್ಯಕರ್ತರ ಮೌನ ಪ್ರಶ್ನೆ ಮಾಡಿದ ನಟಿ ಶೆರ್ಲಿನ್ ಚೋಪ್ರಾ

ಅಮೆರಿಕ ತನ್ನ ಮಿಲಿಟರಿಯನ್ನು ಹಿಂಪಡೆದಿದ್ದೇ ತಡ, ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ರಕ್ಕಸರ ಅಟ್ಟಹಾಸ ಶುರುವಾಗಿದೆ. ಅಫ್ಘಾನಿಸ್ತಾನವನ್ನೇ ತಮ್ಮ ವಶಕ್ಕೆ ಪಡೆದಿರುವ ತಾಲೀಬಾನ್ ಉಗ್ರರು ಕೆಲವೇ ದಿನಗಳಲ್ಲಿ ಹಳ್ಳಿ ಹಳ್ಳಿಗಳನ್ನು ಆಕ್ರಮಿಸಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ತಾಲೀಬಾನ್ ಅಫ್ಘಾನ್ ವಶಕ್ಕೆ ಪಡೆದ ನಂತರ ವಿಡಿಯೋ, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ತಾಲೀಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಿಂದ ಬರುತ್ತಿರುವ ದೃಶ್ಯಗಳು ಭಯಾನಕ ಮತ್ತು ಹೃದಯ ವಿದ್ರಾವಕವಾಗಿವೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಪತಿ ರಾಜ್ ಕುಂದ್ರಾ ಬಂಧನದಿಂದ ಸುದ್ದಿಯಾಗುತ್ತಿರುವ ನಟಿ ಶೆರ್ಲಿನ್ ಚೋಪ್ರಾ ಅಫ್ಘಾನಿಸ್ತಾನ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಫ್ಘಾನಿಸ್ತಾನದ ನಾಗರಿಕರ ಪರವಾಗಿ ಮಾತನಾಡದ ಜಾಗತಿಕ ಕಾರ್ಯಕರ್ತರನ್ನು ಪ್ರಶ್ನೆ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ಜೊತೆ ಪೋರ್ನ್‌ನಲ್ಲಿ ಪೂನಂ, ಶೆರ್ಲಿನ್ ಚೋಪ್ರಾ!

ಈ ಬಗ್ಗೆ ಟ್ವಿಟ್ ಮಾಡಿದ ನಟಿ ಅಫ್ಘಾನಿಸ್ತಾನದ ಜನರಿಗೆ ಮೂಲಭೂತ ಹಕ್ಕುಗಳಿಲ್ಲವೇ? ತಾಲಿಬಾನ್‌ನಿಂದ ಅವರ ಮೂಲಭೂತ ಮಾನವ ಹಕ್ಕುಗಳು ಸಂಪೂರ್ಣವಾಗಿ ಉಲ್ಲಂಘನೆಯಾಗುತ್ತಿರುವಾಗ, ಜಾಗತಿಕ ಕಾರ್ಯಕರ್ತರು ತಾಲಿಬಾನ್‌ನ ಅನಾಗರಿಕತೆಯ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ? ಅವರು ಏನನ್ನು ಕಾಯುತ್ತಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ. ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಆಕೆಯ ಇನ್ನೊಂದು ಟ್ವೀಟ್‌ನಲ್ಲಿ, ತಾಲೀಬಾನಿಗಳು ತಲೆ ಮುಚ್ಚಿಕೊಳ್ಳದೆ ಸಾರ್ವಜನಿಕವಾಗಿರುವುದಕ್ಕಾಗಿ ಮಹಿಳೆಯನ್ನು ಹೇಗೆ ಕೊಂದರು ಎಂದು ಉಲ್ಲೇಖಿಸಿದ್ದಾರೆ. ತಾಲಿಬಾನ್ ನಿನ್ನೆ ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ ತಲೆ ಮುಚ್ಚಿಕೊಳ್ಳದೆ ಸಾರ್ವಜನಿಕವಾಗಿರುವುದಕ್ಕಾಗಿ ಮಹಿಳೆಯನ್ನು ಕೊಂದಿದೆ ಎಂದಿದ್ದಾರೆ.

Scroll to load tweet…