Asianet Suvarna News Asianet Suvarna News

ನಾನಿವತ್ತು ಏನಾಗಿದ್ದರೂ ಅದು ನಿನ್ನಿಂದ; ಅವಾರ್ಡ್ ಶೋನಲ್ಲಿ ಸಿದ್ಧಾರ್ಥ್ ನೆನೆದು ಶೆಹನಾಜ್ ಗಿಲ್ ಭಾವುಕ

ಫಿಲ್ಮ್‌ಫೇರ್  ಪ್ರಶಸ್ತಿ ಸಮಾರಂಭದಲ್ಲಿ ನಟಿ ಶೆಹನಾಜ್ ಗಿಲ್ ಗೆಳೆಯ ಸಿದ್ಧಾರ್ಥ್ ಶುಕ್ಲಾ ನೆನೆದು ಭಾವುಕರಾಗಿದ್ದಾರೆ. ಪ್ರಶಸ್ತಿಯನ್ನು ಸಿದ್ಧಾರ್ಥ್‌ಗೆ ಅರ್ಪಿಸಿದ್ದಾರೆ. 

Shehnaaz Gill pays tribute to Sidharth Shukla at award show sgk
Author
First Published Nov 20, 2022, 11:35 AM IST

ಹಿಂದಿ ಕಿರುತೆರೆ ಲೋಕದ ಖ್ಯಾತ ನಟ, ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ ಹಠಾತ್ ಅಗಲಿಕೆಯ ನೋವು ಇನ್ನೂ ಮಾಸಿಲ್ಲ. ಆಪ್ತರು ಹಾಗೂ ಕುಟುಂಬದವರು ಸಿದ್ಧಾರ್ಥ್ ನೆನಪಲ್ಲೇ ದಿನ ಕಳೆಯುತ್ತಿದ್ದಾರೆ. ಸಿದ್ಧಾರ್ಥ್ ನಿಧನ ಹೊಂದಿ ಒಂದು ವರ್ಷದ ಮೇಲಾಯಿತು. ಆದರೂ ಅಗಲಿಕೆಯ ನೋವು ಇನ್ನು ಹಸಿರಾಗಿಯೇ ಇದೆ. ಅದರಲ್ಲೂ ಸಿದ್ಧಾರ್ಥ್ ಶುಕ್ಲಾ ರೂಮರ್ ಗರ್ಲ್‌ಫ್ರೆಂಡ್ ಶೆಹನಾಜ್ ಗಿಲ್ ಆಗಾಗ ಗೆಳೆಯನ ನೆನೆದು ಕಣ್ಣೀರಾಕುತ್ತಿದ್ದಾರೆ. ಇತ್ತೀಚಿಗೆ ನಡೆದ ಅವಾರ್ಡ್ ಕಾರ್ಯಕ್ರಮದಲ್ಲೂ ಸೆಹನಾಜ್ ಗಿಲ್ ಪ್ರಶಸ್ತಿ ಎತ್ತಿ ಹಿಡಿದು ಗೆಳೆಯ ಸಿದ್ಧಾರ್ಥ್‌ಗೆ ಧನ್ಯವಾದ ಹೇಳಿದರು. ಶೆಹನಾಜ್ ಭಾವುಕ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಪ್ರಶಸ್ತಿ ಗೆದ್ದವರು ಕುಟುಂಬ, ಸ್ನೇಹಿತರು ಹಾಗೂ ತಂಡಕ್ಕೆ ಅರ್ಪಿಸುತ್ತಾರೆ. ಆದರೆ ಶೆಹನಾಜ್ ಗೆಳೆಯನಿಗೆ ಅರ್ಪಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. 

ಅಂದಹಾಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ದುಬೈನಲ್ಲಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಎಲ್ಲರ ಗಮನ ಸೆಳೆದರು. ಪ್ರಶಸ್ತಿ ಸ್ವೀಕಕರಿಸಲು ವೆದಿಕೆ ಏರಿದ ಶೆಹನಾಜ್ ನರ್ವಸ್ ಆಗಿದ್ದರು. ಬಳಿಕ ಮೈಕ್ ಹಿಡಿದು, 'ನಾನು ಯಾರಿಗಾದರೂ ಧನ್ಯವಾದ ಹೇಳಬೇಕೆಂದರೆ ಅದು ಒಬ್ಬರಿಗೆ ಮಾತ್ರ. ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು. ನಾನು ಇಂದು ಏನಾಗಿದ್ದರೂ ಅದಕ್ಕೆ ನೀನೆ ಕಾರಣ. ಇದು ನಿನಗಾಗಿ ಸಿದ್ಧಾರ್ಥ್ ಶುಕ್ಲಾ' ಎಂದು ಭಾವುಕರಾಗಿದರು. ಶೆಹನಾಜ್ ಮಾತಿನಿಂದ ನೆರೆದಿದ್ದವರು ಜೋರಾಗಿ ಚಪ್ಪಾಳೆ ತಟ್ಟಿ ಪ್ರಶಂಸಿದರು.  ಶೆಹನಾಜ್ ಮಾತಿನ ವಿಡಿಯೋ ಈಗ ಎಲ್ಲಾ ಹರೆದಾಡುತ್ತಿದೆ.

ಸಿದ್ಧಾರ್ಥ್ ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ಶೆಹನಾಜ್‌ಗೆ ಧನ್ಯವಾದ ತಿಳಿಸುತ್ತಿದ್ದಾರೆ. ಹೆಮ್ಮೆಯ ಕ್ಷಣ ಎಂದು ಹೇಳುತ್ತಿದ್ದಾರೆ. ತನ್ನ ರಾಜನಿಗೆ ಶಹನಾಜ್ ಅವಾರ್ಡ್ ಅರ್ಪಿಸಿದರು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

ರಾಘವ್ ಜುಯಲ್ ಜೊತೆಗಿನ ವದಂತಿಗಳ ಬಗ್ಗೆ ಶೆಹನಾಜ್ ಗಿಲ್ ಬಿಚ್ಚಿಟ್ರು ಸತ್ಯ

ಶೆಹನಾಜ್ ಗಿಲ್ ಬಗ್ಗೆ

ಶೆಹನಾಜ್ ಗಿಲ್ ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.  'ಶಿವ್ ದಿ ಕಿತಾಬ್' ಆಲ್ಬಂ ಹಾಡಿನ ಮೂಲಕ ಖ್ಯಾತಿ ಪಡೆದರು. 2015ರಲ್ಲಿ ಈ ಹಾಡು ರಿಲೀಸ್ ಆಗಿತ್ತು. ಬಳಿಕ 2017ರಲ್ಲಿ ಪಂಜಾಬಿ ಸಿನಿಮಾ 'ಸತ್ ಶ್ರೀ ಅಕಾಲ್ ಇಂಗ್ಲೆಂಡ್‌'ನಲ್ಲಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ  'ಕಲ ಶಾ ಕಲ' ಮತ್ತು 'ಡಾಕಾ' ಚಿತ್ರದಲ್ಲಿ ನಟಿಸಿದರು. ಆದರೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು ಬಿಗ್ ಬಾಸ್ ಸೀಸಸ್ 13. ಬಿಗ್ ಬಾಸ್ ಶೋ ಮೂಲಕ ಶೆಹನಾಜ್ ಎಲ್ಲರ ಹೃದಯ ಗೆದ್ದರು. ಈ ಶೋ ಮೂಲಕ ಶೆಹನಾಜ್‌ಗೆ ಸಿದ್ಧಾರ್ಥ್ ಶುಕ್ಲಾ ಪರಿಚಯವಾದರು. ಅವರ ಜೊತೆ ಕ್ಲೋಸ್ ಆದರು. ಅಭಿಮಾನಿಗಳು ಇಬ್ಬರನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು. ಇಬ್ಬರೂ ತುಂಬಾ ಆಪ್ತರಾಗಿದ್ದರು. ಆದರೆ 2021ರಲ್ಲಿ ಸಿದ್ಧಾರ್ಥ್ ಹಠಾತ್ ನಿಧನ ಹೊಂದಿದರು.  ಬಳಿಕ ಶೆಹನಾಜ್ ವಿಶೇಷ ಹಾಡಿನ ಮೂಲಕ ಗೌರವ ಸಲ್ಲಿಸಿದ್ದರು.  'ಬಿಗ್ ಬಾಸ್ 15' ಸೀಸನ್ ಫೈನಲ್‌ನಲ್ಲಿ ಹಾಡನ್ನು ರಿಲೀಸ್ ಮಾಡಿ ಗೌರವಿಸಿದ್ದರು. 

Shehnaaz Gill ಅವರ ಸ್ಟನ್ನಿಂಗ್‌ ಫೋಟೋಶೂಟ್‌ನ ಕಿಲ್ಲರ್‌ ಲುಕ್‌ ವೈರಲ್‌

ಪಂಜಾಬಿ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ಇದೀಗ ಸಲ್ಮಾನ್ ಖಾನ್ ಜೊತೆ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾ ಜೊತೆಗೆ ಸಾಜಿದ್ ಖಾನ್ ಅವರ '100%' ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ರಿತೇಶ್ ದೇಶಮುಖ್ ಮತ್ತು ನೋರಾ ಫತೇಹಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

Follow Us:
Download App:
  • android
  • ios