Asianet Suvarna News Asianet Suvarna News

shahrukh khan : ಪತ್ನಿ ಪರ್ಸೂ ನೋಡಲ್ಲ, ಪರ್ಮಿಷನ್ ಇಲ್ಲದೇ ಮಗಳ ರೂಂಗೂ ಎಂಟ್ರಿ ಆಗೋಲ್ಲ: ಗೌರವವೇ ಪ್ರೀತಿ ಎಂದ ಕಿಂಗ್ ಖಾನ್

ಬಾಲಿವುಡ್ ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಹೆಸರು ಪಡೆದಿರುವ ಶಾರುಕ್ ಖಾನ್, ಮಕ್ಕಳು, ಪತ್ನಿಗೆ ಹೆಚ್ಚು ಗೌರವ ನೀಡ್ತಾರೆ. ಹೆಣ್ಣು ಮಕ್ಕಳ ಜೊತೆ ಹೇಗಿರಬೇಕೆಂಬ ಸತ್ಯ ಅವರಿಗೆ ಗೊತ್ತಿದೆ. 
 

shah rukh khan who has never seen gauri khan purse even after thirty years of marriage roo
Author
First Published Aug 13, 2024, 3:20 PM IST | Last Updated Aug 13, 2024, 3:31 PM IST

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ (Bollywood Bad Shah Shahrukh Khan)  ರೋಮ್ಯಾನ್ಸ್ ನಲ್ಲಿ ಎತ್ತಿದ ಕೈ. ಶಾರುಕ್ ಖಾನ್, ವೃತ್ತಿ ಜೀವನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಸುದ್ದಿಯಲ್ಲಿರ್ತಾರೆ. ಇಬ್ಬರು ಮುದ್ದಾದ ಮಕ್ಕಳು ಹಾಗೂ ಮಡದಿ ಜೊತೆ ಸುಖ ಸಂಸಾರ ನಡೆಸ್ತಿರುವ ಶಾರುಕ್, ಕುಟುಂಬವನ್ನು ಹೇಗೆ ನಿರ್ವಹಿಸಬೇಕು, ಕುಟುಂಬ ಸದಸ್ಯರನ್ನು ಹೇಗೆ ಪ್ರೀತಿ (love) ಮಾಡ್ಬೇಕು ಎನ್ನುವ ಬಗ್ಗೆ ಮಾತನಾಡ್ತಿರುತ್ತಾರೆ. ಶಾರುಕ್ ಖಾನ್ ಪ್ರಕಾರ, ಗೌರವವಿಲ್ಲದ ಪ್ರೀತಿಗೆ ಮಹತ್ವ ಇಲ್ಲ. ಮದುವೆಯಾದ 30 ವರ್ಷಗಳಿಂದ ಗೌರಿ ಖಾನ್ (Gauri Khan) ಪರ್ಸ್ ನೋಡದ ಶಾರುಕ್, ಮಗಳು ಅಥವಾ ಪತ್ನಿ ರೂಮ್ ಗೆ ಹೋಗುವಾಗ್ಲೂ ಬಾಗಿಲನ್ನು ತಟ್ಟಿ, ಒಪ್ಪಿಗೆ ಪಡೆದು ಹೋಗ್ತೇನೆ ಎಂದಿದ್ದಾರೆ.

ಸಂಬಂಧಗಳನ್ನು ನ್ಯಾವಿಗೇಟ್ ಮಾಡುವುದು ಮತ್ತು ದೈನಂದಿನ ಜೀವನದಲ್ಲಿ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಈ ಹಿಂದೆ ಮಾತನಾಡಿದ್ದ ಶಾರುಕ್, ಗೌರವಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಗೌರವ ಇಲ್ಲದ ಜಾಗದಲ್ಲಿ ಪ್ರೀತಿ ಸಿಗಲು ಸಾಧ್ಯವಿಲ್ಲ ಎಂಬುದನ್ನು ಬಲವಾಗಿ ನಂಬುತ್ತಾರೆ. ಮಗನಿಗೆ ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಿ ಹೇಳುವ ಶಾರುಕ್, ಇದಕ್ಕೆ ಉದಾಹರಣೆ ರೂಪದಲ್ಲಿ ಗೌರಿ ಪರ್ಸ್ ಹಾಗೂ ಮಗಳ ರೂಮ್ ಬಗ್ಗೆ  ಹೇಳಿದ್ದಾರೆ.

ಬಸುರಿ ಬಯಕೆ ಕಾಡಿಲ್ಲ, ವರ್ಕೌಟ್ ಮಾಡೋದು ಬಿಟ್ಟಿಲ್ಲ…. ಪ್ರೆಗ್ನೆನ್ಸಿ ಜರ್ನಿ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಮಿಲನಾ

ಮದುವೆಯಾಗಿ ಮೂವತ್ತು ವರ್ಷ ಕಳೆದಿದೆ. ನಾನಿನ್ನೂ ಗೌರಿ ಪರ್ಸ್ ನಲ್ಲಿ ಏನಿರುತ್ತೆ ಎಂಬುದನ್ನು ನೋಡಿಲ್ಲ ಎಂದ ಶಾರುಕ್, ಗೌರಿ ಡ್ರೆಸ್ ಚೇಂಜ್ ಮಾಡ್ತಿದ್ದರೆ ನಾನೀಗ್ಲೂ ಅವರ ಡೋರ್ ನಾಕ್ ಮಾಡ್ತೇನೆ ಎಂದಿದ್ದಾರೆ ಶಾರುಕ್ ಖಾನ್. ಅಷ್ಟೇ ಅಲ್ಲ, ಮಗಳು ಸುಹಾನಾ ಖಾನ್ ರೂಮ್ ಗೆ ಹೋಗುವಾಗ ಕೂಡ ನಾನು ರೂಮ್ ನಾಕ್ ಮಾಡ್ತೇನೆ ಎನ್ನುತ್ತಾರೆ ಬಾದ್ ಶಾ. ಅವರಿಗೆ ನಾನೇ ಬಂದಿದ್ದು ಅಂತ ತಿಳಿದಿದ್ರೂ ಅದು ಅವರ ಜಾಗ. ಇದು ಬೇಸಿಕ್ ಮ್ಯಾನರ್ಸ್ ಹಾಗೂ ರಿಸ್ಪೆಕ್ಟ್ ಅನ್ನೋದು ಶಾರುಕ್ ಖಾನ್ ಅಭಿಪ್ರಾಯ. 

ತಮ್ಮ ಜೀವನದಲ್ಲಿ ಮಹಿಳೆಯರು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ ಎನ್ನುವ ಶಾರುಕ್ ಖಾನ್, ಅವರ ಬಗ್ಗೆ ಹತ್ತಿರದಿಂದ ತಿಳಿಯುವ ಪ್ರಯತ್ನ ನಡೆಸಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ನಾನು ಸುಂದರ ಮಹಿಳೆಯರ ಜೊತೆಯಲ್ಲಿ ಜೀವನ ನಡೆಸುತ್ತಿದ್ದೇನೆ. ಕಿಂಗ್ ಆಫ್ ರೋಮ್ಯಾನ್ಸ್ ಅಂತ ನನ್ನನ್ನು ಕರೆಯಲು ಅವರು ಕೂಡ ಕಾರಣರು ಎಂದಿದ್ದಾರೆ.  ಮಹಿಳೆಯರಿಂದ ಅನೇಕ ವಿಷ್ಯವನ್ನು ಕಲಿತಿದ್ದೇನೆ. ಆದ್ರೆ ಅವರಿಗೆ ಏನು ಇಷ್ಟ ಎಂಬುದು ನನಗೆ ಈಗ್ಲೂ ಗೊತ್ತಾಗಿಲ್ಲ ಎನ್ನುವ ಶಾರುಕ್, ನಾನು ಅವರ ಭಾವನೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಎನ್ನುತ್ತಾರೆ. 

ಮಹಿಳೆಯರನ್ನು ಹೇಗೆ ಇಮ್ಪ್ರೆಸ್ ಮಾಡ್ಬೇಕು ಎನ್ನುವ ಮಾತಿಗೆ, ಈ ಸಾಹಸಕ್ಕೆ ಹೋಗ್ಲೇ ಬೇಡಿ ಎನ್ನುತ್ತಾರೆ ಶಾರುಕ್. ಅವರ ಪ್ರಕಾರ, ಒಳ್ಳೆ ಡ್ರೆಸ್, ಸೆಂಟ್ ಅಥವಾ ಗಿಫ್ಟ್ ನಿಂದ ಮಹಿಳೆಯನ್ನು ಸೆಳೆಯಲು ಸಾಧ್ಯವಿಲ್ಲ. ಅವರು ಹೇಳುವ ಮಾತನ್ನು ಕೇಳಿ ಅಷ್ಟೇ ಸಾಕು ಎಂದು ಪುರುಷರಿಗೆ ಕಿವಿಮಾತು ಹೇಳಿದ್ದಾರೆ. ಅವರು ಹೇಳಿದ್ದನ್ನು ಕೇಳಿಸಿಕೊಳ್ಬೇಕು, ಅದಕ್ಕೆ ಸಲಹೆ ನೀಡಲು ಹೋಗ್ಬಾರದು ಎಂಬುದು ಶಾರುಕ್ ಅಭಿಪ್ರಾಯ. 

ಅವಕಾಶ ಸುಲಭವಾಗಿ ಸಿಕ್ಕಿಲ್ಲ; ಟೀಕಿಸಿದವರಿಗೆ ಎಷ್ಟು ಸಲ ರಿಜೆಕ್ಟ್‌ ಆಗಿದ್ದೀನಿ ಎಂದು ಮುಖಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ!

ತುಂಬಾ ದಿನಗಳ ನಂತ್ರ ಶಾರುಕ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ಸಿದ್ಧತೆ ಮಾಡಿಕೊಳ್ತಿದ್ದಾರೆ. ಮಗಳು ಸುಹಾನಾ ಖಾನ್ ಜೊತೆ ಕಿಂಗ್ ಖಾನ್, ಕಿಂಗ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್‌ನಲ್ಲಿ, ಕಿಂಗ್ ಚಿತ್ರದ ಬಗ್ಗೆ ಶಾರುಖ್ ಖಾನ್ ಅಧಿಕೃತ ಮಾಹಿತಿ ನೀಡಿದ್ದಾರೆ. 

Latest Videos
Follow Us:
Download App:
  • android
  • ios