ಬಾಲಿವುಡ್ ಬಾದ್ ಶಾ ಜೆಂಟಲ್ ಆಗಿ ವರ್ತಿಸುವ ರೀತಿಗೆ ಇಷ್ಟವಾಗುತ್ತಾರೆ. ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಪತ್ನಿಯ ಸೆರಗು ಹಿಡಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಬಾಲಿವುಡ್ ಬಾದ್‌ ಶಾ ಶಾರೂಕ್ ಖಾನ್ ಬಿ ಟೌನ್‌ನ ಜೆಂಟಲ್ ಮ್ಯಾನ್ ಅಂತಾನೇ ಕರೆಸಿಕೊಳ್ಳುವ ವ್ಯಕ್ತಿ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ, ರಿಯಲ್ ಲೈಫಲ್ಲೂ ಜೆಂಟಲ್ ಮ್ಯಾನ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. 

ಶಾರೂಕ್ ಖಾನ್ ಹಾಗೂ ಗೌರಿ ಖಾನ್ ನ್ಯಾಕಾ ಫ್ಯಾಷನ್ ಶೋಗೆ ಹೋಗಿದ್ದರು. ಆಗ ಗೌರಿ ಹಾಕಿಕೊಂಡಿದ್ದ ಸೀರೆ ತುಸು ಉದ್ದವಾಗಿದ್ದು, ನೆಲಕ್ಕೆ ಹಾಸುತ್ತಿತ್ತು. ಇದನ್ನು ಗಮನಿಸಿದ ಶಾರೂಕ್ ಕೂಡಲೇ ನೆಲಕ್ಕೆ ತಾಗದಂತೆ ಮೇಲಕ್ಕೆತ್ತಿ ನಡೆದುಕೊಂಡು ಹೋದರು. ಶಾರೂಕ್ ಸೆನ್ಸಿಟಿವಿಟಿ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾರೂಕ್ ಯಾವಾಗಲೂ ಜೆಂಟಲ್‌ ಮ್ಯಾನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

View post on Instagram

ಈ ಶೋನಲ್ಲಿ ಶಾರೂಕ್ - ಗೌರಿ ಮೋಸ್ಟ್ ಸ್ಟೈಲಿಶ್ ಕಪಲ್ ಆಫ್ ದಿ ಇಯರ್ ಅವಾರ್ಡ್ ಪಡೆದಿದ್ದಾರೆ. 

View post on Instagram