La Trobe ವಿಶ್ವವಿದ್ಯಾಲಯದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳಿಗೆ ಕೋಟ್‌ ಧರಿಸಲು ಸಹಕರಿಸಿದ ಬಾಲಿವುಡ್ ಬಾದ್ ಶಾ ಶಾರುಖ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್‌ ಲವರ್‌ ಬಾಯ್‌ ಆ್ಯಂಡ್ ಪರ್ಫೆಕ್ಟ್‌ ಮ್ಯಾನ್‌ ಶಾರುಖ್‌ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ, ಹೆಣ್ಣು ಮಕ್ಕಳು ಹಾಗೂ ನೆಟ್ಟಿಗರ ಮನ ಗೆದ್ದಿದೆ. 

ಇತ್ತೀಚಿಗೆ ಮುಂಬೈನ 'ಲಾ ಥ್ರೋಬ್‌ ವಿಶ್ವವಿದ್ಯಾಲಯ' Phd ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ಬಾಲಿವುಡ್‌ ನಟ ಶಾರುಖ್‌ ಮಹಿಳಾ ವಿದ್ಯಾರ್ಥಿನಿಯೊಬ್ಬರನ್ನು ಗೌರವಿಸುವ ವೇಳೆ ಕೋಟ್‌ ಹಾಕಿಕೊಳ್ಳಲು ಸಹಕರಿಸಿದ್ದಲ್ಲದೇ, ಆಕೆಯ ಕೂದಲನ್ನೂ ಸರಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟನ ಈ ನಡೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ವೇದಿಕೆ ಮೇಲೆ ಪತ್ನಿಯ ಸೆರಗು ಹಿಡಿದ ಬಾಲಿವುಡ್ 'ಜೆಂಟಲ್‌ಮ್ಯಾನ್'!

ಕೇರಳದ ಗೋಪಿಕಾ ಎಂಬ ಯುವತಿಯೇ ವಿದ್ಯಾರ್ಥಿ ವೇತನ ಪಡೆದು, ಶಾರುಖ್ ಖಾನ್ ಅವರಿಂದ ಕೋಟ್ ಸರಿ ಮಾಡಿಸಿಕೊಂಡವರು. 'ಗೋಪಿಕಾ 'ecology and science' ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವುದು ದೊಡ್ಡ ವಿಚಾರ. ಈ ಬಗ್ಗೆ ನಾನು ತಿಳಿದುಕೊಳ್ಳಲು ಹೋದರೆ ಅಷ್ಟೇ ಕಥೆ. ಆಕೆಗೆ ಒಳ್ಳೆಯದಾಗಲಿ ' ಎಂದು ಶಾರುಖ್‌ ಶುಭ ಕೋರಿದ್ದಾರೆ.

Scroll to load tweet…