ಬಾಲಿವುಡ್ನ ತಂದೆ ಮಗಳ ಜೋಡಿಯಲ್ಲಿ ಸೈಫ್-ಸಾರಾ ಫೇಮಸ್. ಇಬ್ಬರೂ ಬಾಲಿವುಡ್ನಲ್ಲಿ ಮಿಂಚುತಿದ್ದಾರೆ. ಇಬ್ಬರೂ ಕಾಫಿ ವಿತ್ ಕರಣ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ತಂದೆ ಮಗಳು ಮಾತುಕತೆ ಅಂದ್ರೆ ಸುಮ್ನೇನಾ..? ಇಂಟ್ರೆಸ್ಟಿಂಗ್ ಆಗಿತ್ತು.

ಇತ್ತೀಚೆಗೆ ಸಾರಾ ಅಲಿ ಖಾನ್ ತಂದೆ ಮತ್ತು ತಾನು ಯಾವ ವಿಷಯದ ಬಗ್ಗೆ ಹೆಚ್ಚು ಮಾತಾಡುತ್ತೇವೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ಗಿಂತ ಹೆಚ್ಚು ಇಬ್ಬರೂ ಚರಿತ್ರೆ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ ಸಾರಾ.

ಬಚ್ಚನ್‌ ಪಾಂಡೆ ಹೊಸ ಪೋಟೊ: ಅಕ್ಷಯ್ ಕಣ್ಣುಗಳು ಹೀಗ್ಯಾಕೆ..?

ಇಟಲಿಗೆ ತಂದೆಯ ಜೊತೆ ಹೋದ ಟ್ರಿಪ್ ಬಗ್ಗೆ ನೆನಪಿಸಿಕೊಂಡಿದ್ದಾರೆ ಸಾರಾ. ಅಲ್ಲಿ ಬರೀ ಫಿಝಾ, ಪಾಸ್ತಾ, ಸಂಸ್ಕೃತಿ, ಮ್ಯೂಸಿಯಂ, ಸಂಗೀತ, ಕ್ರೀಡೆಯ ಕುರಿತು ಇಬ್ಬರೂ ಮಾತನಾಡುತ್ತಾರಂತೆ.

ನಾವಿಬ್ಬರೂ ಚರಿತ್ರೆ ಇಷ್ಟಪಡುತ್ತೇವೆ. ಬಾಲಿವುಡ್ಗಿಂತ ಹೆಚ್ಚು ಹಿಟ್ಲರ್ ಸ್ಟಾಲಿನ್ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ.
ಸೈಫ್ ಅಲಿ ಖಾನ್ ಇತ್ತೀಚೆಗೆ ಕರೀನಾ ಜೊತೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಇದೀಗ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ ಸೈಫ್.