ಬಾಲಿವುಡ್ ನಟಿ ಕೃತಿ ಸನೋನ್ ಚಂದದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಅಕ್ಷಯ್ ಕುಮಾರ್‌ನ ಬಹುನಿರೀಕ್ಷಿತ ಸಿನಿಮಾ ಬಚ್ಚನ್ ಪಾಂಡೆಯ ಲುಕ್.

ಬೆಲ್‌ಬಾಟಂ, ಲಕ್ಷಿ ಸೇರಿ ಕೊರೋನಾ ಕಾಲದಲ್ಲೇ ಹೈ ಸಿನಿಮಾಗಳ ಶೂಟಿಂಗ್ ಮುಗಿಸಿದ ಅಕ್ಷಯ್ ಬಚ್ಚನ್ ಪಾಂಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಮಧುಚಂದ್ರದ ಗುಂಗಿನಲ್ಲಿರುವ ಕೃಷ್ಣ ಮಿಲನಾ ಫೋಟೋ ನೋಡಿ!

ಅಕ್ಷಯ್ ಕುಮಾರ್ ಜೊತೆ ಜೈಸಲ್ಮರ್ನಲ್ಲಿ ಶೂಟಿಂಗ್ನಲ್ಲಿರೋ ನಟಿ ಫೋಟೋ ಶೇರ್ ಮಾಡಿದ್ದಾರೆ. ಒಂದು ತಿಂಗಳ ಶೂಟ್ ನಂತರ ಮುಂಬೈಗೆ ಮರಳಿದ್ದಾರೆ. ಸಿನಿಮಾದಲ್ಲಿ ಕೃತಿ ಶೆಡ್ಯೂಲ್ ಮುಗಿದಿದೆ. ಈ ಸಂದರ್ಭ ನಟಿ ಅಕ್ಷಯ್ ಜೊತೆ ಬಚ್ಚನ್ ಪಾಂಡೆ ಅವತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Kriti (@kritisanon)

ಅಕ್ಷಯ್ ಕುಮಾರ್ ಜೊತೆಗಿನ ಶೆಡ್ಯೂಲ್ ಮುಗಿಯಿತು. ಇಲ್ಲಿಯವರೆಗಿನ ಮರೆಯಲಾಗದ ಶೆಡ್ಯೂಲ್ ಇದು. ಇದು ಬೇಸರದ ಗುಡ್ಬೈ ಎಂದು ನಟಿ ಬರೆದಿದ್ದಾರೆ.