ಅಪ್ಪ ಕೈದಿ, ಮಗಳು ಪೊಲೀಸ್​ ಇನ್ಸ್​ಪೆಕ್ಟರ್​: ಸೈಫ್​-ಸಾರಾ ಜೋಡಿಗೆ ಫ್ಯಾನ್ಸ್​ ಫಿದಾ

ಜಾಹೀರಾತೊಂದರಲ್ಲಿ ಸೈಫ್​ ಅಲಿ ಖಾನ್​ ಮತ್ತು ಪುತ್ರಿ ಸಾರಾ ಅಲಿ ಖಾನ್​ ಕಾಣಿಸಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಅಂತಿದ್ದಾರೆ ಫ್ಯಾನ್ಸ್​.
 

Sara Ali Khan and Saif Ali Khan come together in ad for first time suc

ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ (Sara Ali Khan) ಇತ್ತೀಚಿನ ದಿನಗಳಲ್ಲಿ ಸಕತ್​ ಸುದ್ದಿಯಲ್ಲಿರುವ ನಟಿ. ಇದಕ್ಕೆ ಕಾರಣ,  ಮುಸ್ಲಿಂ ಆಗಿದ್ದರೂ ಹಿಂದೂ ಸಂಪ್ರದಾಯವನ್ನು ಪಾಲಿಸುತ್ತಿರುವುದಕ್ಕೆ.  ಆಗಾಗ್ಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಟ್ರೋಲ್​ ಆಗುತ್ತಿದ್ದಾರೆ.  ಕೆಲ ದಿನಗಳ ಹಿಂದೆ  ಕೇದಾರನಾಥಕ್ಕೆ ಭೇಟಿ ಕೊಟ್ಟರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸೌಂಡ್​ ಮಾಡಿತ್ತು. ಇದಾಗಲೇ ಸೈಫ್​ ಅಲಿ ಖಾನ್​ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್​ ಕಿಡ್​ ಆಗಿ ಸುಲಭದಲ್ಲಿ ಸಿನಿಮಾಗಳಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರು ಈಗ ದೇವಸ್ಥಾನದ ವಿಷಯದಲ್ಲಿ ಚರ್ಚೆಯಲ್ಲಿ ಇರುವ ನಟಿ.  ಹೀಗೆ ಟೀಕೆಗಳನ್ನು ಎದುರಿಸುತ್ತಿರುವ ನಡುವೆಯೇ ಅಮರನಾಥ (Amaranath) ಯಾತ್ರೆಯನ್ನೂ ಕೈಗೊಂಡು ಅಲ್ಲಿ ಹರ್​ ಹರ್​ ಮಹಾದೇವ್​ ಎನ್ನುವ ಮೂಲಕ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಹೊರತಾಗಿಯೂ ಟೀಕೆ ಟಿಪ್ಪಣೆಗಳಿಗೆ ಡೋಂಟ್​ ಕೇರ್​ ಎನ್ನುತ್ತಿದ್ದಾರೆ ನಟಿ. 

ಇದೀಗ ಸಾರಾ ಜೊತೆ ಅಪ್ಪ ಸೈಫ್​ (Saif Ali Khan) ಕೂಡ ಸಕತ್​ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ, ಅಪ್ಪ ಕೈದಿಯಾಗಿದ್ದರೆ, ಮಗಳು ಪೊಲೀಸ್​ ಆಗಿದ್ದಾಳೆ. ಹೌದು! ಹಾಗಂತ ಇದೇನೂ ಯಾವ ಹೊಸ ಚಿತ್ರದ ವಿಷಯವಲ್ಲ. ಬದಲಿಗೆ ಜಾಹೀರಾತೊಂದರಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಮತ್ತು ಸೈಫ್ ಅಲಿ ಖಾನ್ ಮೊದಲ ಬಾರಿಗೆ ಜಾಹೀರಾತಿನಲ್ಲಿ  ಪೊಲೀಸ್ ಮತ್ತು ಕೈದಿಯಾಗಿ ನಟಿಸಿದ್ದಾರೆ.  ಸಾರಾ ಪೊಲೀಸ್ ಆಗಿದ್ದರೆ, ಸೈಫ್ ಕೈದಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಅವರನ್ನು ತೆರೆಯ ಮೇಲೆ ನೋಡುತ್ತಿರುವ ಅಭಿಮಾನಿಗಳು ಈಗ ಅವರನ್ನು ಶೀಘ್ರದಲ್ಲೇ ಚಿತ್ರದಲ್ಲಿ ಒಟ್ಟಿಗೆ ನೋಡಬೇಕೆಂದು ಬಯಸುತ್ತಿದ್ದಾರೆ.

Sara Ali Khan: ಅಮರನಾಥ ಯಾತ್ರೆಯಲ್ಲಿ ಹರ್​ ಹರ್​ ಮಹಾದೇವ್ ಎಂದ ಸೈಫ್​ ಪುತ್ರಿ; ಧರ್ಮದ ಕುರಿತು ಚರ್ಚೆ ಶುರು!
 
ಕಾರಿನ ವಿಮೆಗೆ ಸಂಬಂಧಿಸಿದ ಜಾಹೀರಾತು (Advertise) ಇದಾಗಿದೆ. ಈ ಬಗ್ಗೆ ಸೈಫ್ ಬೇರೊಬ್ಬ ಕೈದಿ ಜೊತೆ ಕಾರಿನ ವಿಮೆ ಕುರಿತು ಮಾತನಾಡುತ್ತಿರುತ್ತಾರೆ. ಆಗ ಎಂಟ್ರಿ ಕೊಡುವ ಪೊಲೀಸ್​ ಅಧಿಕಾರಿ ಸಾರಾ,  ವಿಚಾರಣೆ ಕೊಠಡಿಯೊಳಗೆ ಕುಳಿತ ಸೈಫ್​ ಬಳಿ ಬಂದು, ಹಳೆಯ ಪದ್ಧತಿಗೆ ಮೊರೆ ಹೋಗದೆ  ಕಾರಿನ ಇನ್ಶುರೆನ್ಸ್​ ಹೇಗೆ ಮಾಡಿಸಬೇಕು ಎನ್ನುವ ಜಾಹೀರಾತಿದು. ವೀಡಿಯೊವನ್ನು ಹಂಚಿಕೊಂಡ ಸಾರಾ​, ನನ್ನ ತಂದೆಯ ಬಳಿ ಕಾರಿನ ವಿಮೆ ಇದೆ. ನಾನು ಅವರಿಗೆ ಅದರ ಬಗ್ಗೆ ಹೇಳಿದ್ದೇನೆ. ಹಿರಿಯರಿಗೆ ಬುದ್ಧಿ ಹೇಳಲು ವಯಸ್ಸು ಅಡ್ಡಿ ಬರುವುದಿಲ್ಲ, ನೀವೂ ಪ್ರಯತ್ನಿಸಿ ಎಂದು ಬರೆದುಕೊಂಡಿದ್ದಾರೆ. 

ಈ ಜಾಹೀರಾತಿಗೆ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಸುಂದರವಾದ ಅಪ್ಪ, ಮುದ್ದಾದ ಮಗಳು ಎಂದು ಬರೆದಿದ್ದಾರೆ.  ನಿಮ್ಮಿಬ್ಬರನ್ನೂ ಒಟ್ಟಿಗೇ ಚಿತ್ರದಲ್ಲಿ ನೋಡುವ ಬಯಕೆ ಎಂದು ಬರೆದಿದ್ದಾರೆ. ಚಿತ್ರದಲ್ಲಿ ಸಾರಾ ಅವರೊಂದಿಗೆ ಕೆಲಸ ಮಾಡುವ ಕುರಿತು ಮಾತನಾಡುತ್ತಾ, ಸೈಫ್ ಈ ಹಿಂದೆ 2020 ರಲ್ಲಿ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ, 'ಇದು ನನಗೂ ಇಷ್ಟವಿದೆ. ಆದರೆ  ವಿಶೇಷವಾದ ಸ್ಕ್ರಿಪ್ಟ್ (script) ಆಗಿದ್ದರೆ ಮಾತ್ರ ಓಕೆ ಮಾಡುವೆ.  ನಾವಿಬ್ಬರೂ ಗಿಮಿಕ್‌ಗಳನ್ನು ತಪ್ಪಿಸಲು ಬಯಸುತ್ತೇವೆ.  ಸರಿಯಾದ ನಿರ್ದೇಶಕ ಮತ್ತು ಸ್ಕ್ರಿಪ್ಟ್ ನೀಡಿದರೆ ಅದು ಉತ್ತಮವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ. ನಾನು ಯಾವಾಗಲೂ ನನ್ನ ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಮಾಡುತ್ತೇನೆ' ಎಂದಿದ್ದರು.

ದೆವ್ವ ಕರೆಸಲು ಟ್ರೈ ಮಾಡಿದ್ರಂತೆ ಸೈಫ್​ ಅಲಿ ಖಾನ್​! ಏನಪ್ಪಾ ಈ ವಿಷ್ಯ?

ಅಂದಹಾಗೆ, ಸಾರಾ ಅಲಿ ಖಾನ್ ಸೈಫ್ ಮತ್ತು ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಮೊದಲ ಮಗಳು. ಆಕೆಯ ಪೋಷಕರು ವಿಚ್ಛೇದನ ಪಡೆದಾಗ ಆಕೆಗೆ ಒಂಬತ್ತು ವರ್ಷ. ಆಕೆಗೆ ತಮ್ಮ ಇಬ್ರಾಹಿಂ ಅಲಿ ಖಾನ್ ಕೂಡ ಇದ್ದಾರೆ , ಅವರು ಶೀಘ್ರದಲ್ಲೇ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಮೃತಾ ಜೊತೆ ಬೇರ್ಪಟ್ಟ ನಂತರ ಸೈಫ್ ಕರೀನಾ ಕಪೂರ್ ಜೊತೆ ಡೇಟ್ ಮಾಡಿದರು. ಅವರು 2012 ರಲ್ಲಿ ವಿವಾಹವಾದರು ಮತ್ತು 2016 ರಲ್ಲಿ ಅವರ ಮೊದಲ ಮಗ ತೈಮೂರ್ ಅಲಿ ಖಾನ್ ಹುಟ್ಟಿದ್ದು, 2021 ರಲ್ಲಿ ಜಹಾಂಗೀರ್ ಅಲಿ ಖಾನ್ ಎಂಬ ಮಗ ಹುಟ್ಟಿದ್ದಾನೆ.   

Latest Videos
Follow Us:
Download App:
  • android
  • ios