Asianet Suvarna News Asianet Suvarna News

ನಟಿ ಚೈತ್ರಾ ಆಚಾರ್‌ಗೆ ಇಂಥ ಹುಡುಗನೇ ಬೇಕಂತೆ! ಗುಂಡಿಗೆ ಇದ್ದೋರು ಕಾಳ್ ಹಾಕ್ಬಹುದು ಟ್ರೈ ಮಾಡಿ!

ಸ್ಯಾಂಡಲ್ವುಡ್ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ಸಿಂಗಲ್. ತಮ್ಮ ಸಂಗಾತಿ ಹೇಗಿರಬೇಕು ಅಂತ ಅವರು ಸಂದರ್ಶನವೊಂದರಲ್ಲಿ ಕ್ಲೂ ನೀಡಿದ್ದಾರೆ. ನಿಮಗೂ ಅರ್ಹತೆ ಇದ್ರೆ ಟ್ರೈ ಮಾಡ್ಬಹುದು.
 

sapta sagaradache ello fame actress chaitra achar expectations about life partner roo
Author
First Published Aug 10, 2024, 1:10 PM IST | Last Updated Aug 10, 2024, 1:11 PM IST

ಸ್ಯಾಂಡಲ್ ವುಡ್ ನ ಬೋಲ್ಡ್ ನಟಿ (Sandalwood Bold Actress Chaitra Achar) ಎಂದೇ ಹೆಸರು ಪಡೆದಿರುವ ನಟಿ ಚೈತ್ರಾ ಆಚಾರ್ ಯುವಕರಿಗೊಂದು ಆಫರ್ ನೀಡಿದ್ದಾರೆ. ತನ್ನ ಮದುವೆ ಆಗೋ ಹುಡುಗ ಹೇಗಿರಬೇಕು ಅಂತಾ ಚೈತ್ರಾ ಆಚಾರ್ ಹೇಳಿದ್ದಾರೆ. ಅವ್ರು ಹೇಳಿದ ಎಲ್ಲ ಕ್ವಾಲಿಟಿ ನಿಮಗಿದ್ರೆ ನೀವೊಂದು ಕಾಳು ಹಾಕಬಹುದು. ಸ್ಯಾಂಡಲ್ವುಡ್ ನಟಿ ಜೊತೆ ಡೇಟ್ ಮಾಡಿ ಮದುವೆ ಆಗೋ ಅವಕಾಶ ಸಿಕ್ಕಿದ್ರೂ ಸಿಗ್ಬಹುದು. 

ಸಪ್ತಸಾಗರದಾಚೆ ಸಿನಿಮಾದಲ್ಲಿ, ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಬೆಡ್ ರೂಮ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಆಚಾರ್ (Chaitra Achar) ,ರೆಡಿಯೋ ಜಾಕಿಯಲ್ಲಿ, ಆರ್.ಜೆ ನೇತ್ರಾ (RJ Netra) ಜೊತೆ ಮಾತನಾಡುವಾಗ, ತಮ್ಮ ಹುಡುಗ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ವೃತ್ತಿ ಜೀವನಕ್ಕೆ ಹೆಚ್ಚು ಆದ್ಯತೆ ನೀಡುವ ಚೈತ್ರ ಆಚಾರ್, ತಮ್ಮನ್ನು ಅರ್ಧ ಮಾಡಿಕೊಳ್ಳುವ ಜೊತೆಗೆ ನನ್ನ ಕೆಲಸವನ್ನು ಅರ್ಧ ಮಾಡಿಕೊಳ್ಳುವ ಜನರು ಬೇಕು ಎಂದಿದ್ದಾರೆ.

ಬೆತ್ತಲೆಯಾದ ನಟಿ ಜೊತೆ ನಿವೇದಿತಾ ಗೌಡ ಹೋಲಿಕೆ? ಯಾರು ಆ ನಗ್ನ ಸುಂದರಿ? ಇಲ್ಲಿದೆ ಮಾಹಿತಿ

ಆರ್. ಜೆ. ನೇತ್ರಾ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಚೈತ್ರಾ ಆಚಾರ್, ಜನರಿಗೆ ಇಲ್ಲವೆ ಸಿನಿಮಾದಲ್ಲಿ ನಟಿಸದೆ ಇರುವವರಿಗೆ ಸಿನಿಮಾ ಶೂಟಿಂಗ್ ಹೇಗೆ ನಡೆಯುತ್ತೆ ಅನ್ನೋದು ತಿಳಿದಿರೋದಿಲ್ಲ. ನನಗೆ ಬಾಯ್ ಫ್ರೆಂಡ್ ಅಥವಾ ಗಂಡ ಇದಾನೆ ಅಂದ್ಕೊಳ್ಳಿ. ಸಪ್ತಸಾಗರದಾಚೆ ಸಿನಿಮಾ ಸಿಗುತ್ತೆ. ನಾನು ಅದ್ರಲ್ಲಿ ರಕ್ಷಿತ್ ಜೊತೆ ಇಂಟಿಮೇಟ್ ದೃಶ್ಯ ಮಾಡ್ಬೇಕು. ನನಗೆ ಅಲ್ಲಿ ಇಮೋಷನ್ ಏನೂ ಇರೋದಿಲ್ಲ. ಪಾತ್ರಕ್ಕೆ ತಕ್ಕಂತೆ ನಾನು ಆಕ್ಟಿಂಗ್ ಮಾಡ್ಬೇಕು. ಅಲ್ಲಿ ತುಂಬಾ ಕ್ಯಾಮೆರಾ ಇರುತ್ತೆ, ಜನರಿರ್ತಾರೆ. ಒಂದು ದೃಶ್ಯ ಹೇಗೆ ಬರಬೇಕು ಅಂತ ಗೈಡ್ ಮಾಡ್ತಿರುತ್ತಾರೆ. ನಮಗೂ ದೃಶ್ಯ, ಡೈಲಾಗ್ ಮೇಲೆ ಗಮನ ಇರುತ್ತೆ. ಈ ಎಲ್ಲ ಸೀನ್ ಮುಗಿಸಿಕೊಂಡು ಮನೆಗೆ ಬಂದಾಗ, ಅದ್ಯಾಕ್ ಹಾಗ್ ಮಾಡ್ದೆ, ಇದ್ಯಾಕ್ ಹಾಗ್ ಮಾಡ್ದೆ, ಎಷ್ಟು ಜನ ನಟರಿಗೆ ಕಿಸ್ ಮಾಡ್ದೆ ಅಂತ ಗಂಡ ಪ್ರಶ್ನೆ ಕೇಳ್ತಿದ್ದರೆ, ಪ್ರತಿ ದಿನ ಜಗಳ ಮಾಡ್ಬೇಕಾಗುತ್ತೆ. ಹಾಗಾಗಿ ಅಂತ ಗಂಡ ನನಗೆ ಬೇಡ. ನನ್ನನ್ನು ಅರ್ಧ ಮಾಡಿಕೊಳ್ಳೋ ಪತಿ ಬೇಕು ಎಂದಿದ್ದಾರೆ ಚೈತ್ರಾ ಆಚಾರ್. 

ನಾನು ಎಲ್ಲ ಪಾತ್ರಗಳಲ್ಲಿ ನಟಿಸ್ತೇನೆ. ಅದನ್ನು ನನ್ನ ಸಂಗಾತಿಯಾಗೋರು ಒಪ್ಪಿಕೊಳ್ಳಬೇಕು. ಇದೆಲ್ಲ ಓಕೆ ಅನ್ನೋರು ನನ್ನನ್ನ ಅಪ್ರೋಚ್ ಮಾಡ್ಬಹುದು ಎನ್ನುತ್ತಾರೆ ಚೈತ್ರ ಆಚಾರ್. ನಟಿ ಚೈತ್ರಾ ಆಚಾರ್ ಎಲ್ಲ ಕಂಡಿಷನ್ ಗೆ ಓಕೆ ಎನ್ನುವವರು ಇನ್ಸ್ಟಾಗ್ರಾಮ್ ನಲ್ಲಿ ಡಿಎಂ ಮಾಡ್ಬಹುದು ಎಂದಿದ್ದಾರೆ ನೇತ್ರಾ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಕಮೆಂಟ್ ಶುರು ಮಾಡಿದ್ದಾರೆ. ಇನ್ಸ್ಟಾದಲ್ಲಿ ಡಿಎಂ ಮಾಡಿದ್ರೆ ಅವರು ಪ್ರತಿಕ್ರಿಯೆ ನೀಡ್ತಾರೆ ಅನ್ನೋದು ಯಾವ್ ಗ್ಯಾರಂಟಿ. ಚೈತ್ರಾ ಆಚಾರ್ ನಂಬರ್ ಸೆಂಡ್ ಮಾಡಿ ಅಂತ ಅಭಿಮಾನಿಯೊಬ್ಬರು ಕೇಳಿದ್ದಾರೆ. 

ಒಬ್ಬ ಆರ್ಟಿಸ್ಟ್ ಕೆಲಸವನ್ನು ಇನ್ನೊಬ್ಬ ಆರ್ಟಿಸ್ಟ್ ಮಾತ್ರ ಅರಿಯೋಕೆ ಸಾಧ್ಯ ಎನ್ನುವ ನೆಟ್ಟಿಗರು, ಇಂಡೈರೆಕ್ಟಾಗಿ ಚೈತ್ರಾ ನೀವು ಆರ್ಟಿಸ್ಟ್ ಮದುವೆ ಆಗಿ ಎಂದಿದ್ದಾರೆ. ಚೈತ್ರಾ ನಟನೆಯನ್ನು ಮೆಚ್ಚಿ ಹೊಗಳಿದ ಅಭಿಮಾನಿಗಳ ಸಂಖ್ಯೆ ಕೂಡ ಸಾಕಷ್ಟಿದೆ.

ತಮಿಳು ವೇದಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಹೆಸರು ಎತ್ತಿದ ಪ್ರಿಯಾ ಆನಂದ್; ಮುಂದೇನಾಯ್ತು ನೀವೇ ನೋಡಿ!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಚೈತ್ರಾ ಆಚಾರ್, ಪ್ರತಿ ದಿನ ನಮ್ಮ ಸಿನಿಮಾ ಬಗ್ಗೆ ಅಪ್ಡೇಟ್ ನೀಡ್ತಿರುತ್ತಾರೆ. ಕೆಲ ದಿನಗಳ ಹಿಂದೆ ಚೈತ್ರಾ ಆಚಾರ್ ಹಾಟ್ ಫೋಟೋ ಶೂಟ್ ಫುಲ್ ವೈರಲ್ ಆಗಿತ್ತು. ಮಲಿಯಾಳಂ ಲುಕ್ ನಲ್ಲಿ ಬೀಚ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದ ಚೈತ್ರಾಗೆ ಫುಲ್ ಮಾರ್ಕ್ಸ್ ಸಿಕ್ಕಿತ್ತು. ನಟನೆ ಜೊತೆ ಚೈತ್ರಾ ಹಾಡುಗಾರ್ತಿ ಕೂಡ ಹೌದು.  

Latest Videos
Follow Us:
Download App:
  • android
  • ios