ನಾಗ ಚೈತನ್ಯರಿಂದ ಡಿವೋರ್ಸ್ ಪಡೆದು ಸ್ವತಂತ್ರವಾಗಿರುವ ನಟಿ ಸಮಂತಾ ರುತ್ ಪ್ರಭು ಕುರಿತು ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಸಮಂತ ನಾಗ ಚೈತನ್ಯ ಎಂಗೇಜ್‌ಮೆಂಟ್ ವೇಳೆ ಹಾಕಿದ್ದ ಅತೀ ದುಬಾರಿ ಬೆಲೆಯ ಡೈಮಂಡ್ ರಿಂಗ್‌ನ್ನು ಡಿವೋರ್ಸ್ ಬಳಿಕ ಸಮಂತಾ ಏನು ಮಾಡಿದ್ದಾರೆ ಗೊತ್ತಾ?

ಹೈದರಾಬಾದ್(ಮಾ.12) ನಟಿ ಸಮಂತಾ ರುತ್ ಪ್ರಭು ಕುರಿತು ಹಲವು ಇಟ್ರೆಸ್ಟಿಂಗ್ ಮಾಹಿತಿಗಳು ಹೊರಬಂದ ತಕ್ಷಣ ಭಾರಿ ಕೋಲಾಹಲ ಸೃಷ್ಟಿಸಿದೆ. ಅದರಲ್ಲೂ ನಾಗ ಚೈತನ್ಯರಿಂದ ಡಿವೋರ್ಸ್ ಪಡೆದ ಬಳಿಕ ನಾಗ ಚೈತನ್ಯ ಡೇಟಿಂಗ್ ರೂಮರ್, ಸಿನಿಮಾ ಸೇರಿದಂತೆ ಹಲವು ಮಾಹಿತಿಗಳ ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ಹೊಸ ವಿಷಯವೊಂದು ಬಯಲಾಗಿದೆ. ನಟಿ ಸಮಂತಾ ಎಂಗೇಜ್‌ಮೆಂಟ್ ರಿಂಗ್ ಇದೀಗ ಸದ್ದು ಮಾಡುತ್ತಿದೆ. ನಾಗ ಚೈತನ್ಯ ಜೊತೆಗಿನ ನಿಶ್ಚಿತಾರ್ಥದಲ್ಲಿ ನಟಿ ಸಮಂತಾಗೆ ದುಬಾರಿ ಡೈಮಂಡ್ ರಿಂಗ್ ಹಾಕಲಾಗಿದೆ. ಈ ರಿಂಗ್‌ನ್ನು ಡಿವೋರ್ಸ್ ಬಳಿಕ ನಟಿ ಸಮಂತಾ ಏನು ಮಾಡಿದ್ದಾರೆ ಅನ್ನೋದು ಬಹಿರಂಗವಾಗಿದೆ.

ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಮದುವೆಯಾಗಿ ನಾಲ್ಕು ವರ್ಷ ಜೊತೆಯಾಗಿದ್ದರು. ಆದರೆ ಆರಂಭಿಕ 2 ವರ್ಷ ಹೆಚ್ಚಿನ ಸಂಕಷ್ಟವಿಲ್ಲದೆ ಸಂಸಾರ ಸಾಗಿತ್ತು. ಆದರೆ ಉಳಿದ 2 ವರ್ಷ ಸವಾಲುಗಳು ಹೆಚ್ಚಾಗಿತ್ತು. ಹೀಗಾಗಿ ನಾಗ ಚೈತನ್ಯ ಹಾಗೂ ಸಮಂತಾ ಪರಸ್ಪರ ಒಪ್ಪಿಗೆ ಮೇರೆ 2021ರಲ್ಲಿ ಡಿವೋರ್ಸ್ ಪಡೆದಿದ್ದಾರೆ. ಇದಾದ ಬಳಿಕ ನಾಗ ಚೈತನ್ಯ ಜೊತೆಗಿನ ಎಲ್ಲಾ ಫೋಟೋಗಳನ್ನು ಸಮಂತಾ ಡಿಲೀಟ್ ಮಾಡಿದ್ದರು. 

ಸಿನಿಮಾ ಇತಿಹಾಸದಲ್ಲೇ ಸಮಂತಾ ಹೊಸ ಟ್ರೆಂಡ್ ಸೃಷ್ಟಿ! ದಿಟ್ಟ ನಿರ್ಧಾರಕ್ಕೆ ಚಿತ್ರರಂಗದಿಂದಲೇ ಪ್ರಶಂಸೆ!

ಎಂಗೇಜ್‌ಮೆಂಟ್ ವೇಳೆ ಸಮಂತಾಗೆ ಅತೀ ದುಬಾರಿ ಡೈಮಂಡ್ ರಿಂಗ್ ಹಾಕಲಾಗಿತ್ತು. ಈ ರಿಂಗ್‌ನ್ನು ನಟಿ ಸಮಂತಾ ಡಿವೋರ್ಸ್ ಬಳಿ ಪೆಡೆಂಟ್ ಆಗಿ ಬದಲಾಯಿಸಿದ್ದಾರೆ. ಇದೀಗ ಸಮಂತ ಕೊರಳಲ್ಲಿ ಈ ಡೈಮಂಡ್ ಪೆಡೆಂಟ್ ಧರಿಸುತ್ತಾರೆ. ಎಂಗೇಜ್‌ಮೆಂಟ್ ರಿಂಗ್ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಹಾಗಂತ ಮಾರಾಟ ಮಾಡುವುದು ಉಚಿತವಲ್ಲ. ಕಾರಣ ಡೈಮಂಡ್ ಆಗಿರುವ ಕಾರಣ ಸಮಂತಾ ಇದನ್ನೇ ಮರು ಬಳಕೆ ಮಾಡಲು ಮುಂದಾಗಿದ್ದಾರೆ. ಇದರಿಂದ ಹಳೇ ನೆನೆಪುಗಳು ಮರುಕಳಿಸದಂತೆ, ಹೊಸತನವೊಂದು ಸೇರ್ಪಡೆಯಾದಂತೆ ಆಲೋಚಿಸಿ ಸಮಂತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಎಂಗೇಜ್‌ಮೆಂಟ್ ರಿಂಗ್‌ನ್ನು ಪೆಡೆಂಟ್ ಆಗಿ ಪರಿವರ್ತಿಸಿದ ಸಮಂತಾ ರುತ್ ಪ್ರಭು ಅದಕ್ಕಾಗಿ ನೆಕ್ಲೇಸ್ ಮಾಡಿಸಿಕೊಂಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಸಮಂತಾ ಈ ಪೆಡೆಂಟ್ ಬಳಸಿದ್ದಾರೆ. ರೆಗ್ಯೂಲರ್ ಆಗಿ ಸಮಂತಾ ಪೆಡೆಂಟ್ ಬಳಸುತ್ತಿದ್ದಾರೆ. ಈ ಮೂಲಕ ತಮ್ಮ ಹಳೇ ನೋವಿನ ಅಧ್ಯಾಯದಿಂದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಹಾಗಂತ ಸಮಂತಾ ಈ ರೀತಿ ನಾಗ ಚೈತನ್ಯ ಜೊತೆಗಿನ ಮದುವೆ, ಸಂಸಾರದಲ್ಲಿನ ಹಲವು ವಸ್ತುಗಳನ್ನು ಮರು ಬಳಕೆ ಮಾಡಿದ್ದಾರೆ. 2024ರಲ್ಲಿ ಸಮಂತಾ ಮದುವೆ ಗೌನ್ ಡ್ರೆಸ್‌ನ್ನು ಅವಾರ್ಡ್ ಸೆರೆಮನಿಗೆ ಬೇಕಾದಂತೆ ಬದಲಾಯಿಸಿಕೊಂಡು ಧರಿಸಿದ್ದರು. ಡಿಸೈನರ್ ಕ್ರೇಶಾ ಬಜಾಜ್ ಈ ಗೌನ್‌ಗೆ ಹೊಸ ಲುಕ್ ನೀಡಿದ್ದರು.

ಇದು ಕನ್ಫರ್ಮ್! 2 ವರ್ಷಗಳ ನಂತರ ಫ್ಯಾನ್ಸ್ ಕುಣಿದು ಕುಪ್ಪಳಿಸೋ ಅಂತಹ ನ್ಯೂಸ್ ಕೊಟ್ಟ ಸಮಂತಾ!

View post on Instagram