Asianet Suvarna News Asianet Suvarna News

ಅಬ್ಬಾ.! ದೀಪಿಕಾ, ಕಂಗನಾ ರೇಂಜ್‌ಗೆ ಸಂಭಾವನೆ ಏರಿಸಿಕೊಂಡ ಸಮಂತಾ; 'ಸಿಟಾಡೆಲ್‌'ಗೆ ಎಷ್ಟು ಚಾರ್ಜ್ ಮಾಡಿದ್ದಾರೆ?

ದೀಪಿಕಾ, ಕಂಗನಾ ರೇಂಜ್‌ಗೆ ಸಂಭಾವನೆ ಏರಿಸಿಕೊಂಡ ಸಮಂತಾ; 'ಸಿಟಾಡೆಲ್‌'ಗೆ ಸ್ಯಾಮ್ ಎಷ್ಟು ಚಾರ್ಜ್ ಮಾಡಿದ್ದಾರೆ ನೋಡಿ.

Samantha Ruth Prabhu hiked her fee to 10 crore for citadel sgk
Author
First Published Jun 12, 2023, 5:16 PM IST | Last Updated Jun 12, 2023, 5:19 PM IST

ಸೌತ್ ಸ್ಟಾರ್ ಸಮಂತಾ ಹಾಗೂ ಬಾಲಿವುಡ್ ಹೀರೋ ವರುಣ್ ಧವನ್ ಸದ್ಯ ಸಿಟಾಡೆಲ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಇಬ್ಬರೂ ಸ್ಟಾರ್ಸ್ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಚಿತ್ರೀಕರಣ ಮುಗಿಸಿ ಚಿತ್ರತಂಡ ಸದ್ಯ ವಿದೇಶಕ್ಕೆ ಹಾರಿದೆ. ಸರ್ಬಿಯದಲ್ಲಿ ಬಹು ನಿರೀಕ್ಷೆಯ ಸಿಟಾಡೆಲ್ ಸೀರಿಸ್‌ನ ಚಿತ್ರೀಕರಣ ನಡೆಯುತ್ತಿದೆ. ಸಿಟಾಡೆಲ್ ಇಂಗ್ಲಿಷ್‌ನ ಭಾರತೀಯ ರೂಪಾಂತರವಾಗಿದೆ. ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದ ಪಾತ್ರದಲ್ಲಿ ಸಮಂತಾ ಮತ್ತು ವರುಣ್ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ. 

ಸದ್ಯ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಸಿಟಾಡೆಲ್ ಸೀರಿಸ್‌ಗಾಗಿ ಸಮಂತಾ ಭರ್ಜರಿ ಸಮಂಭಾವನೆ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. 4 ರಿಂದ 5 ಕೋಟಿ ವರೆಗೆ ಸಂಭಾವನೆ ಪಡೆಯುತ್ತಿದ್ದ ಸಮಂತಾ ಸಿಟಾಡೆಲ್‌ಗಾಗಿ ಬರೋಬ್ಬರಿ 1ದ ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಾಲಿವುಡ್‌ನ ಸ್ಟಾರ್ ನಟಿಯರು ಪಡೆಯುತ್ತಿದ್ದ ಸಂಭಾವನೆಗೆ ಸರಿಸಮವಾಗಿ ನಿಂತಿದ್ದಾರೆ ಸಮಂತಾ. ಬಾಲಿವುಡ್ ಸ್ಟಾರ್‌ಗಳಾದ ಅಲಿಯಾ ಭಟ್, ದೀಪಿಕಾ, ಕಂಗನಾ 8 ರಿಂದ 10 ಕೋಟಿ ರೂಪಾಯಿ ಮೇಲೆ ಸಂಭಾವನೆ ಪಡೆಯುತ್ತಾರೆ. ಇದೀಗ ಸಮಂತಾ ಅಷ್ಟೇ ಸಂಭಾವನೆ ಪಡೆಯುತ್ತಿದ್ದಾರೆ. 

ಅಂದಹಾಗೆ ಸಮಂತಾ ಈ ಮೊದಲು ರಾಜ್ ಮತ್ತು ಡಿಕೆ ಜೊತೆ ಕೆಲಸ ಮಾಡಿದ್ದರು. ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ಗಾಗಿ ಸಮಂತಾ ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ನಟಿಸಿದ್ದರು. ದಿ ಫ್ಯಾಮಿಲಿ ಮ್ಯಾನ್ 2 ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಮೊದಲ ಸೀರಿಸ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣ ಸಿಟಾಡೆಲ್‌ಗೆ ಸಂಭಾವನೆ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಿಟಾಡೆಲ್ ಮೂಲಕ ಸಮಂತಾ ಬಗ್ಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅಭಿಮಾನಿಗಳ ಹೃದಯ ಗೆಲ್ತಾರಾ ಎಂದು ಕಾದು ನೋಡಬೇಕಿದೆ. 

ಸಿಟಾಡೆಲ್‌ ಭಾರತೀಯ ಆವೃತ್ತಿ: ಪ್ರಿಯಾಂಕಾ ಚೋಪ್ರಾ ತಾಯಿಯಾಗಿ ಸಮಂತಾ ರುತ್ ಪ್ರಭು?

ಸಮಂತಾ ಸಿಟಾಡೆಲ್ ಸೀರಿಸ್ ಜೊತೆಗೆ ಖುಷಿ ಸಿನಿಮಾದಲ್ಲೂ ನಿರತರಾಗಿದ್ದಾರೆ. ಇತ್ತೀಚೆಗಷ್ಟೆ ಸಮಂತಾ ಖುಷಿ ಶೂಟಿಂಗ್‌ಗಾಗಿ ಸಮಂತಾ ಟರ್ಕಿಗೆ ಭೇಟಿ ನೀಡಿದ್ದರು. ವಿಜಯ್ ದೇವರಕೊಂಡ ನಾಯಕನಾಗಿ ಕಾಮಿಸಿಕೊಂಡಿದ್ದಾರೆ. ಇಬ್ಬರೂ ಟರ್ಟಿಯಲ್ಲಿದ್ದ ಒಂದಿಷ್ಟು ಫೋಟೋಗಳು  ಅಭಿಮಾನಿಗಳ ಹೃದಯ ಗೆದ್ದಿತ್ತು.

ನೆಚ್ಚಿನ ಹುಡುಗಿ ಫೋಟೋ ಹಂಚಿಕೊಂಡ ವಿಜಯ್‌ ದೇವರಕೊಂಡ; ರಶ್ಮಿಕಾ ಅಲ್ಲ!

ಸರ್ಬಿಯಾ ಕ್ಲಬ್‌ನಲ್ಲಿ ಸಮಂತಾ ಮಸ್ತ್ ಡಾನ್ಸ್ 

ಸಮಂತಾ ಸದ್ಯ ಸರ್ಬಿಯಾ ಶೂಟಿಂಗ್‌ನಲ್ಲಿದ್ದು ಬಿಡುವಿನ ವೇಳೆ ಸುತ್ತಾಡುತ್ತಿದ್ದಾರೆ. ಸಮಂತಾಗೆ ನಟ ವರುಣ್ ಧವನ್ ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೆ ಇಬ್ಬರೂ ಸರ್ಬಿಯಾದ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ಮತ್ತು ವರುಣ್ ಇಬ್ಬರೂ ಕ್ಲಬ್‌ನಲ್ಲಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲಬ್‌ನಲ್ಲಿ ಇಬ್ಬರೂ ಸೂಪರ್ ಹಿಟ್ 'ಹು ಅಂತೀಯಾ ಮಾವ ಊಹೂ ಅಂತೀಯಾ' ಹಾಡಿಗೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಸರ್ಬಿಯಾದಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Latest Videos
Follow Us:
Download App:
  • android
  • ios