Asianet Suvarna News Asianet Suvarna News

ಸಮಂತಾ ಎಸ್​ಎಸ್​ಎಲ್​ಸಿ ಅಂಕಪಟ್ಟಿ ವೈರಲ್​: ಇಂಥ ದಾಖಲೆ ಮನುಷ್ಯರಿಂದ ಸಾಧ್ಯನೇ ಇಲ್ಲ ಬಿಡಿ! ಅಷ್ಟಕ್ಕೂ ಆಗಿರೋದೇನು?

ನಟಿ ಸಮಂತಾ ರುತ್​ ಪ್ರಭು 10ನೇ ಕ್ಲಾಸ್​ ಅಂಕಪಟ್ಟಿ ವೈರಲ್​ ಆಗಿದ್ದು, ಖುದ್ದು ನಟಿಯೂ ಖುಷಿ ಪಟ್ಟಿದ್ದಾರೆ. ಆದರೆ ಎಡವಟ್ಟು ಆಗಿರೋದು ಮಾತ್ರ ಯಾರಿಗೂ ಗೊತ್ತೇ ಇಲ್ಲ ನೋಡಿ!
 

Samantha Prabhus  10th marksheet teachers remarks go VIRAL got more than original marks suc
Author
First Published Sep 6, 2024, 11:59 AM IST | Last Updated Sep 6, 2024, 11:59 AM IST

ನಾಗಚೈತನ್ಯ ಮತ್ತು ಸಮಂತಾ (Samantha) ಹಿಂದೊಮ್ಮೆ ಸಿನಿಮಾದ ಸೂಪರ್​ ಕಪಲ್​ ಎನಿಸಿಕೊಂಡಿದ್ದರು.  ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದವರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು.  ಮದುವೆಯ ಬಳಿಕ ಈ ಜೋಡಿ  ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ  ವಿಚ್ಛೇದನ ಘೋಷಿಸಿದ್ದರು.   ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಬಳಿಕ, ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ಶೋಭಿತಾ ಧೂಲಿಪಾಲ ಅವರ ಹೆಸರು ನಟ ನಾಗ ಚೈತನ್ಯ (Naga Chaitanya) ಜೊತೆಗೆ ಕೇಳಿಬಂದಿತ್ತು.  ಇದೀಗ ಇಬ್ಬರೂ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಇದರ ನಡುವೆಯೇ, ಇದೀಗ ನಟಿ ಸಮಂತಾ ಅವರದ್ದು ಎನ್ನಲಾದ 10ನೇ ಕ್ಲಾಸಿನ ಮಾರ್ಕ್ಸ್​ಕಾರ್ಡ್​ ವೈರಲ್​ ಆಗಿದೆ.  ಶಾಲೆಯಲ್ಲಿದ್ದಾಗ ಸಮಂತಾ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು ಎನ್ನುವುದಕ್ಕೆ ಈ ಅಂಕಪಟ್ಟಿಯೇ ಸಾಕ್ಷಿಯಾಗಿದೆ. ಇವರ ಅಂಕಪಟ್ಟಿ ವೈರಲ್​ ಆಗುತ್ತಿದ್ದಂತೆಯೇ ಈಕೆಗೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ. ಅಷ್ಟಕ್ಕೂ ಆಗಾಗ್ಗೆ ಈ ಅಂಕಪಟ್ಟಿ ವೈರಲ್​ ಆಗಿ ಸೋಷಿಯಲ್​  ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಯಾಗುತ್ತಲೇ ಇರುತ್ತದೆ. ಈಕೆ ಪಡೆದುಕೊಂಡಿರುವ ಅಂಕಗಳನ್ನಷ್ಟೇ ನೋಡಿ ಇವರನ್ನು ಹಾಡಿ ಹೊಗಳುವವರೇ ಎಲ್ಲ. ಅಭಿಮಾನಿಗಳು ಎಂದ್ರೆ ಸುಮ್ಮನೇ ಅಲ್ಲ ಅಲ್ವಾ? ಅದು ಎಷ್ಟರ ಮಟ್ಟಿಗೆ ಎನ್ನುವುದು ಇದಾಗಲೇ ಸಾಬೀತಾಗಿದೆ. ಎಂಥ ಘನಘೋರ ಕೃತ್ಯ ಮಾಡಿದರೂ ಅಭಿಮಾನ ಎನ್ನುವುದು ತಣ್ಣಗಾಗುವುದಿಲ್ಲ.  ಹಾಗಂತ ಸಮಂತಾ ಏನೂ ಅಪರಾಧ ಮಾಡಲಿಲ್ಲ. ಬದಲಿಗೆ ಈಕೆಯ ವೈರಲ್​ ಆಗಿರೋ ಅಂಕಪಟ್ಟಿಯನ್ನು ನೋಡಿ ಹುಚ್ಚೆದ್ದು ಕುಣಿಯುತ್ತಿರುವ ಅಭಿಮಾನಿಗಳ ಬಗ್ಗೆ ಮಾತ್ರ ಅಯ್ಯೋ ಎನ್ನಿಸದೇ ಇರಲಾರದು.

ಕಮೆಂಟೂ ಕೊಟ್ಟು ದುಡ್ಡುನೂ ಕೊಡ್ತಾರೆ! ಜಾಲತಾಣದಿಂದ ತಿಂಗಳಿಗೆ 40 ಲಕ್ಷ ಗಳಿಸ್ತಾಳೆ 23 ವರ್ಷದ ಈಕೆ!

ಹೌದು. ಚೆನ್ನೈನಲ್ಲಿ ಹೈಸ್ಕೂಲ್​ ಓದಿರುವ ಸಮಂತಾ ಈ ಅಂಕಪಟ್ಟಿಯ ಪ್ರಕಾರ,  2001-2002ರಲ್ಲಿ 10ನೇ ತರಗತಿಯಲ್ಲಿ ಓದಿದ್ದಾರೆ.  ಇಂಗ್ಲಿಷ್​-1ಕ್ಕೆ 90, ಇಂಗ್ಲಿಷ್​-2 ಕ್ಕೆ 74, ತಮಿಳು-ಹಿಂದಿ 1ಕ್ಕೆ 83, 2ಕ್ಕೆ 88, ಗಣಿತ-1 ರಲ್ಲಿ 100, ಗಣಿತ-2ರಲ್ಲಿ 99, ಫಿಸಿಕ್ಸ್​ಗೆ 95, ಬಾಟನಿಯಲ್ಲಿ 84, ಇತಿಹಾಸದಲ್ಲಿ 91 ಹಾಗೂ ಜಿಯಾಗ್ರಫಿಯಲ್ಲಿ 83 ಅಂಕ ಪಡೆದಿರುವುದಾಗಿ ಇದರಲ್ಲಿ ನಮೂದು ಮಾಡಲಾಗಿದೆ. ಈಕೆಯ ಈ ಸಾಧನೆಗೆ ಶಿಕ್ಷಕರೂ ಸಕತ್​ ಖುಷಿ ಪಟ್ಟಿದ್ದು, ಅದರಲ್ಲಿ  ‘ಸಮಂತಾ ಚೆನ್ನಾಗಿ ಪರೀಕ್ಷೆ ಬರೆದಿದ್ದಾಳೆ. ಈಕೆ ನಮ್ಮ ಶಾಲೆಯ ಆಸ್ತಿ’ ಎಂದು ಶರಾ ಹಾಕಿದ್ದಾರೆ. ಇದು ವೈರಲ್​ ಆಗುತ್ತಲೇ ನಟಿ ಕೂಡ ಈ ರಿಪೋರ್ಟ್​ ಕಾರ್ಡ್​ ನಿಜ ಎನ್ನುವಂತೆ ಖುಷಿಯಿಂದ  ಹ್ಹ ಹ್ಹ ಹ್ಹ.. ಎಂದು ಈ ಹಿಂದೆ ಪ್ರತಿಕ್ರಿಯೆ ಕೂಡ ಕೊಟ್ಟಿದ್ದರು. 

ಆದರೆ ಎಲ್ಲರೂ ಎಲ್ಲರ ಅಭಿಮಾನಿಯಾಗಿಯೇ ಇರಬೇಕು ಎಂದೇನೂ ಇಲ್ಲವಲ್ಲ. ಅಭಿಮಾನ ಎನ್ನುವುದು ಕಣ್ಣುಮುಚ್ಚಿದ ಸಂದರ್ಭದಲ್ಲಿ ಕೆಲವರು ಅಸಲಿಯತ್ತು ಏನು ಎನ್ನುವುದನ್ನು ಕಣ್ಣುಬಿಟ್ಟು ನೋಡುತ್ತಾರೆ. ಅದೇ ರೀತಿ ಸಮಂತಾ ವಿಷಯದಲ್ಲಿಯೂ ಆಗಿದೆ. ಈ ಮಾರ್ಕ್ಸ್​ ಕಾರ್ಡ್​ ನೋಡಿ ಸಮಂತಾ ಅವರಂಥ ಈ ಸಾಧನೆ ಹಿಂದೆಯೂ ಮಾಡಿಲ್ಲ, ಮುಂದೆಯೂ ಯಾರೂ ಮಾಡಲ್ಲ. ಇದು ಜಗತ್ತಿನ 8ನೇ ಅದ್ಭುತ ಎಂದೆಲ್ಲಾ ಬರೆದಿದ್ದಾರೆ. ಅದಕ್ಕೆ ಕಾರಣ ಇಷ್ಟೇ. ಭೌತಶಾಸ್ತ್ರ ಅಂದರೆ ಫಿಸಿಕ್ಸ್​ನಲ್ಲಿ ಈ ಅಂಕಪಟ್ಟಿಯಲ್ಲಿ ನಟಿ ಪಡೆದಿರುವುದು 95. ಇದರಲ್ಲೇನು ವಿಶೇಷ ಅಂತೀರಾ? ಅಲ್ಲೇ ಇರೋದು ವಿಶೇಷ. ಈ ಪೇಪರ್​ ಇದ್ದುದು 50 ಅಂಕಕ್ಕೆ! ಅಂದ್ರೆ 50ಕ್ಕೆ ಸಮಂತಾ 95 ಪಡೆದಿದ್ದಾರೆ. ಅದೇ ರೀತಿ ಸಸ್ಯ ಶಾಸ್ತ್ರ ಅಂದ್ರೆ ಬಾಟನಿಯಲ್ಲಿ 50ಕ್ಕೆ 84 ಪಡೆದಿದ್ದಾರೆ! ಅಲ್ಲಿಗೆ ಇದು ಫೇಕ್​ ಅಂಕಪಟ್ಟಿ ಎನ್ನುವುದು ತಿಳಿದುಬಂದಿದೆ. ಅದರೂ ಅದನ್ನು ಗಮನಿಸದ ಫ್ಯಾನ್ಸ್​ ಭರ್ಜರಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ! 

ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?

Samantha Prabhus  10th marksheet teachers remarks go VIRAL got more than original marks suc
 

Latest Videos
Follow Us:
Download App:
  • android
  • ios