'ಓಹ್ ಬೇಬಿ' ಖ್ಯಾತಿಯ ಸಮಂತಾ ತಿರುಪತಿಗೆ ಭೇಟಿ ನೀಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಮಂತಾ ಪ್ರತಿವರ್ಷವೂ ತಿರುಪತಿಗೆ ಭೇಟಿ ನೀಡಿ ಬರಿಗಾಲಿನಲ್ಲೇ ಮೆಟ್ಟಿಲು ಹತ್ತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಸಮಂತಾ ಅಕ್ಕಿನೇನಿ ಸ್ನೇಹಿತೆ ರಮ್ಯಾ ಸುಬ್ರಹ್ಮಣಿಯನ್ ಜೊತೆ  ಬರಿಗಾಲಲ್ಲೇ ಬೆಟ್ಟ ಹತ್ತಿದ್ದಾರೆ. 

ಡಿ-ಬಾಸ್‌ ಕೊಡ್ತಿದ್ದಾರೆ ಕ್ರಿಸ್‌ಮಸ್‌ ಗಿಫ್ಟ್‌; 'ರಾಬರ್ಟ್ ಆರ್ಭಟ'!

 

ಬರಿಗಾಲಲ್ಲಿ ನಡೆದಿದ್ದು ಖುಷಿಕೊಟ್ಟಿದೆ.  ದರ್ಶನವೂ ಚೆನ್ನಾಗಿ ಆಯಿತು. 2019 ಒಳ್ಳೆಯ ರೀತಿಯಲ್ಲಿ ಮುಗಿಸಿ 2020 ಸೂಪರ್ ಆರಂಭವಿದು' ಎಂದು ಬರೆದುಕೊಂಡಿದ್ದಾರೆ. 

ಬಾಲಿವುಡ್‌ ಸಿನಿಮಾಗೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಅಬ್ಬಬ್ಬಾ..!

ಸಮಂತಾಗೆ ರಮ್ಯಾ ಬಹುಕಾಲದ ಗೆಳತಿ.  ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ತಿರುಪತಿಗೆ ಭೇಟಿ ನೀಡುತ್ತಿರುತ್ತಾರೆ. ರಮ್ಯಾ ನಿರೂಪಕಿಯಾಗಿದ್ದು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಕನ್ನಡದ 96 ಸಿನಿಮಾ ತೆಲುಗಿಗೆ ರಿಮೇಕ್ ಆಗ್ತಾಯಿದೆ. ಆ ಸಿನಿಮಾದಲ್ಲಿ ಸಮಂತಾ ಸದ್ಯ ಬ್ಯುಸಿಯಾಗಿದ್ಧಾರೆ. ಜೊತೆಗೆ ಫ್ಯಾಮಿಲಿ ಮ್ಯಾನ್ 2 ನಲ್ಲಿ  ಬ್ಯುಸಿಯಾಗಿದ್ದಾರೆ.