ಜನವರಿ 16ರಂದು ಸೈಫ್ ಅಲಿ ಖಾನ್ ಮೇಲೆ ಮನೆಗೆ ನುಗ್ಗಿ ದಾಳಿ ನಡೆದಿದ್ದು, ಗಾಯಗೊಂಡ ಅವರು ಏಳು ವರ್ಷದ ಮಗ ತೈಮೂರ್‍ನೊಂದಿಗೆ ಲೀಲಾವತಿ ಆಸ್ಪತ್ರೆಗೆ ತೆರಳಿದ್ದರು. ದಾಳಿಕೋರ ಆರು ಬಾರಿ ಚಾಕುವಿನಿಂದ ಇರಿದಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಚಾಕುವಿನ ಭಾಗವನ್ನು ತೆಗೆಯಲಾಗಿದೆ. ಸೈಫ್ ಆರೋಗ್ಯ ಸುಧಾರಿಸುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಜನವರಿ 16 ರ ರಾತ್ರಿ ಒಬ್ಬ ವ್ಯಕ್ತಿ ಮನೆಗೆ ನುಗ್ಗಿ ದಾಳಿ ಮಾಡಿದ್ದರಿಂದ ಸೈಫ್‌ಗೆ ಗಂಭೀರ ಗಾಯಗಳಾಗಿವೆ. ಕೆಲವು ವರದಿಗಳು ಅವರು ತಮ್ಮ ಹಿರಿಯ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಆಸ್ಪತ್ರೆಗೆ ಹೋಗಿದ್ದರು ಎಂದು ಹೇಳಿವೆ. ಆದರೆ, ಈಗ ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರು ಆ ರಾತ್ರಿ ಸೈಫ್ ಯಾರ ಜೊತೆ ಆಸ್ಪತ್ರೆಗೆ ಬಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸೈಫ್ ದೇಹಕ್ಕೆ ನಾಟಿದ್ದ ಮುರಿದ ಚಾಕುವಿನ ಭಾಗದ ಫೋಟೋವನ್ನು ವೈದ್ಯರು ತೋರಿಸಿದ್ದಾರೆ.

ಸೈಫ್ ಅಲಿ ಖಾನ್ ಗೆ ಚಾಕು ಹಾಕಿದವನ ಬಂಧನ

ಸೈಫ್ ನಿಜ ಜೀವನದ ಹೀರೋ ಎಂದ ವೈದ್ಯರು: ಲೀಲಾವತಿ ಆಸ್ಪತ್ರೆಯ COO ನೀರಜ್ ಉತ್ತಮಾನಿ ಸೈಫ್ ಅಲಿ ಖಾನ್ ಬಗ್ಗೆ ಮಾತನಾಡಿ, 'ಸೈಫ್ ಆಸ್ಪತ್ರೆಗೆ ಬಂದಾಗ, ನಾನು ಅವರನ್ನು ಭೇಟಿಯಾದ ಮೊದಲ ವ್ಯಕ್ತಿ. ಅವರು ರಕ್ತದ ಮಡುವಿನಲ್ಲಿದ್ದರು, ಆದರೆ ತಮ್ಮ 7 ವರ್ಷದ ಮಗ ತೈಮೂರ್ ಜೊತೆ ಸಿಂಹದಂತೆ ನಡೆದು ಬಂದರು. ಸೈಫ್ ನಿಜವಾದ ಹೀರೋ. ಸಿನಿಮಾಗಳಲ್ಲಿ ಹೀರೋ ಆಗುವುದು ಬೇರೆ, ಆದರೆ ನಿಮ್ಮ ಮನೆಯ ಮೇಲೆ ದಾಳಿ ನಡೆದಾಗ ಧೈರ್ಯವಾಗಿ ವರ್ತಿಸಿ ಹೀಗೆ ಆಸ್ಪತ್ರೆಗೆ ಬರುವುದು, ಅಂಥವರನ್ನು ನಿಜ ಜೀವನದ ಹೀರೋ ಅಂತಾನೆ ಕರೆಯಬೇಕು. ಆ ಸಮಯದಲ್ಲಿ ಸೈಫ್ ಸ್ಟ್ರೆಚರ್ ಕೂಡ ಕೇಳಲಿಲ್ಲ. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರನ್ನು ICU ನಿಂದ ಸಾಮಾನ್ಯ ವಾರ್ಡಿಗೆ ವರ್ಗಾಯಿಸಲಾಗಿದೆ. ಕೆಲವು ದಿನಗಳಲ್ಲಿ ನಾವು ಅವರನ್ನು ಬಿಡುಗಡೆ ಮಾಡುತ್ತೇವೆ' ಎಂದರು.

ಸೈಫ್ ಮೇಲೆ ದಾಳಿಕೋರ 6 ಬಾರಿ ಚಾಕುವಿನಿಂದ ಇರಿದಿದ್ದ. ಅವರು ಆಸ್ಪತ್ರೆಗೆ ಬಂದಾಗ ಸೈಫ್ ದೇಹದಲ್ಲಿ ಚಾಕು ಚುಚ್ಚಿತ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಸೈಫ್ ದೇಹದಿಂದ ತೆಗೆದ ಚಾಕುವಿನ ಫೋಟೋವನ್ನು ಬಿಡುಗಡೆಗೊಳಿಸಿದ್ದಾರೆ.

'ನನಗೆ ನನ್ನ ಜೊತೆಗೆ ಇರೋ ಗಂಡ ಬೇಕು'; ಸೈಫ್ ಬಗ್ಗೆ ಕರೀನಾ ಹೀಗೆ ಹೇಳಿದ್ಯಾಕೆ?

ಮುಂಬೈ ಪೊಲೀಸರು ಒಳನುಗ್ಗುವವರನ್ನು ಪತ್ತೆ ಹಚ್ಚಲು ಮತ್ತು ಹಿಡಿಯಲು 35 ತಂಡಗಳನ್ನು ರಚಿಸಿದ್ದಾರೆ. ಈ ಘಟನೆಯಲ್ಲಿ ಸೈಫ್ ಜೊತೆಗೆ ಅವರ ಇಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಲಿ ಖಾನ್. ನಟಿ ಕರೀನಾ ಕಪೂರ್ ರನ್ನು ಮದುವೆಯಾದ ನಂತರ ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಜನವರಿ 16 ರಂದು ಮುಂಜಾನೆ 2.30 ರ ಸುಮಾರಿಗೆ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಕಳ್ಳನೊಬ್ಬ, ಸೈಫ್ ಅಲಿ ಖಾನ್ ಗೆ ಚಾಕು ಹಾಕಿದ ಘಟನೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ.