ತನಗಿಂತ 26 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾದ ಬಾಲಿವುಟ್ ನಟ ಸಾಹಿಲ್ ಖಾನ್
ಬಾಲಿವುಡ್ ನಟ ಸಾಹಿಲ್ ಖಾನ್ ಮತ್ತು ಮೆಲಿನಾ ಅಲೆಕ್ಸಾಂಡ್ರಾ 26 ವರ್ಷಗಳ ವಯಸ್ಸಿನ ಅಂತರದ ಹೊರತಾಗಿಯೂ ದುಬೈನಲ್ಲಿ ವಿವಾಹವಾದರು. ವಯಸ್ಸಿನ ಅಂತರದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಾಹಿಲ್, 'ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ' ಎಂದು ಹೇಳಿದ್ದಾರೆ.

ದುಬೈ (ಫೆ.16): ಬಾಲಿವುಡ್ ನಟ ಸಾಹಿಲ್ ಖಾನ್ ಮತ್ತು ಅವರ ಗೆಳತಿ ಮೆಲಿನಾ ಅಲೆಕ್ಸಾಂಡ್ರಾ ಫೆಬ್ರವರಿ 14 ರಂದು ದುಬೈನಲ್ಲಿ ಮದುವೆಯಾದ್ರು. ಮದುವೆ ಫೋಟೋ ಮತ್ತು ವಿಡಿಯೋಗಳನ್ನ ಸಾಹಿಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನವವಿವಾಹಿತರ ಸಾಹಿಲ್ ಮತ್ತು ಮೆಲಿನಾ ನಡುವಿನ 26 ವರ್ಷಗಳ ವಯಸ್ಸಿನ ಅಂತರ ನೆಟಿಜೆನ್ಸ್‌ಗಳ ಟೀಕೆಗೆ ಗುರಿಯಾಗಿದೆ.
ಈಗ, ಮದುವೆಯ ನಂತರದ ಮೊದಲ ಸಂದರ್ಶನದಲ್ಲಿ, ಸಾಹಿಲ್ ತನ್ನ ಮತ್ತು ತನ್ನ ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಸಮರ್ಥಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಸಾಹಿಲ್ ಖಾನ್‌ಗೆ 48 ವರ್ಷವಾಗಿದೆ. ಆದರೆ, ಮೆಲಿನಾಗೆ ಕೇವಲ 22 ವರ್ಷ. ಇಬ್ಬರೂ ಪರಸ್ಪರ ಪ್ರೀತಿಸಿ ದುಬೈನಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, 'ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ' ಅಂತ ಹೇಳಿದ್ದಾರೆ. ತನ್ನ ಜೀವನವು ಅದರ ಪ್ರತಿಬಿಂಬವಾಗಿದೆ ಎಂದು ಸಾಹಿಲ್ ಹೇಳಿದರು. ಪ್ರೀತಿ ಎಂದರೆ ಜೀವನದಲ್ಲಿ ಉತ್ತಮ ಸಂಬಂಧಗಳನ್ನು ಸೃಷ್ಟಿಸುವುದು ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವುದರ ಸಂಯೋಜನೆ ಎಂದು ನಟ ಹೇಳಿದರು. ಸಾಹಿಲ್ ಖಾನ್ ಅವರ ಪತ್ನಿ ಮಿಲೇನಾ ಕೂಡ ತಮಗೂ ಅದೇ ನಂಬಿಕೆ ಇದೆ ಎಂದು ಹೇಳುತ್ತಾರೆ.
ಸಾಹಿಲ್ ಹೇಳುವಂತೆ ಮಿಲೇನಾಳನ್ನು ಮೊದಲು ಭೇಟಿಯಾದಾಗ ಅವಳಿಗೆ 21 ವರ್ಷ. ಅವಳನ್ನು ನೋಡಿದ ಕ್ಷಣದಿಂದಲೇ ಅವಳಿಗೆ ಪ್ರೀತಿ ಹುಟ್ಟಿತು. ಕೆಫೆಯಲ್ಲಿ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದಾಗ, ಮೆಲಿನಾ ತನ್ನ ತಾಯಿಯೊಂದಿಗೆ ಊಟ ಮಾಡುವುದನ್ನು ಗಮನಿಸಿದೆ ಎಂದು ನಟ ಹೇಳುತ್ತಾರೆ. ಇನ್ನು ಆಗಲೇ ಮಾಡೆಲಿಂಗ್ ಅವಕಾಶಕ್ಕಾಗಿ ಮೆಲಿನಾ ಅವರನ್ನು ಸಂಪರ್ಕಿಸಿದರು. ಆದರೆ ಮೆಲಿನಾ ತನಗೆ ಈ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳಿ ಮಾಡೆಲಿಂಗ್ ಅವಕಾಶವನ್ನು ತಿರಸ್ಕರಿಸಿದರು. ಮುಂದುವರೆದು ನಾನು ಮದುವೆಯಾಗಲು, ಕುಟುಂಬ ಕಟ್ಟಲು ಮತ್ತು ಮಕ್ಕಳನ್ನು ಹೊಂದಲು ಒಬ್ಬ ಪುರುಷನನ್ನು ಮಾತ್ರ ಹುಡುಕುತ್ತಿದ್ದೇನೆ ಎಂದು ಮೆಲಿನಾ ಹೇಳಿದರು.
ಇದನ್ನೂ ಓದಿ: ಶಾಲಿನಿಗೆ ತಾಳಿ ಕಟ್ಟೋ ಮೊದ್ಲು ಅಜಿತ್‌ಗೆ ಹೀರಾ ಜೊತೆ ಲವ್ ಬ್ರೇಕಪ್, ವಿಲನ್ ಯಾರು ಗೊತ್ತಾ..?
ಈ ವೇಳೆ ಮೆಲಿನಾ ಹೇಳಿದ ಮಾತುಗಳು, ಆಕೆಯ ಸರಳತೆ ಮತ್ತು ಪ್ರಾಮಾಣಿಕತೆ ಮತ್ತಷ್ಟು ಆಕರ್ಷಿಸಿತು. ನಂತರ ಅದು ಪ್ರೀತಿ ಮತ್ತು ಮದುವೆಗೆ ಕಾರಣವಾಯಿತು ಎಂದು ಸಾಹಿಲ್ ಖಾನ್ ಹೇಳುತ್ತಾರೆ.
ಸಾಹೀಲ್ ಖಾನ್ ಬಾಲಿವುಡ್‌ನಲ್ಲಿ ಹೆಚ್ಚು ಯಶಸ್ವಿ ನಟನಲ್ಲದಿದ್ದರೂ, ಜೀವನಶೈಲಿ ಉದ್ಯಮದಲ್ಲಿ ಮತ್ತು ಪ್ರಭಾವಿಯಾಗಿ ಅವರಿಗೆ ಅಭಿಮಾನಿಗಳಿದ್ದಾರೆ. 2001 ರಲ್ಲಿ ಬಿಡುಗಡೆಯಾದ ಸ್ಟೀಲ್ ಚಿತ್ರದಲ್ಲಿ ಸಾಹೀಲ್ ಪ್ರಮುಖ ಪಾತ್ರ ವಹಿಸಿದ್ದರು. ಬಾಲಿವುಡ್ ಅನ್ನು ಬೆಚ್ಚಿಬೀಳಿಸಿದ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ನಟನ ಹೆಸರು ಕೊನೆಯ ಬಾರಿಗೆ ಕೇಳಿಬಂದಿತ್ತು. ಆಗ ಇಡೀ ದೇಶದಾದ್ಯಂತ ಸಾಹಿಲ್ ಖಾನ್ ಹೆಸರು ಮತ್ತೊಮ್ಮೆ ವಿವಾದದಲ್ಲಿ ಸುತ್ತಿಕೊಂಡು ಪ್ರಸಿದ್ಧಿಯಾಯಿತು.
ಇದನ್ನೂ ಓದಿ: ರಷ್ಯಾದ ಬಿಯರ್ ಬಾಟಲಿ ಮೇಲೆ ಗಾಂಧೀಜಿ ಹೆಸರು, ಭಾವಚಿತ್ರ ಬಳಕೆ: ಗಾಂಧಿ ಅಭಿಮಾನಿಗಳಿಂದ ಭಾರೀ ಆಕ್ರೋಶ!
ಇನ್ನು ಈಗ ನಡೆಯುತ್ತಿರುವುದು ಸಾಹೀಲ್ ಖಾನ್ ಅವರ ಎರಡನೇ ಮದುವೆ. ಇದಕ್ಕೂ ಮೊದಲು, ಸಾಹೀಲ್ 2004 ರಲ್ಲಿ ಇರಾನ್ ಮೂಲದ ನಟಿ ನಿಗರ್ ಖಾನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಒಂದು ವರ್ಷದ ನಂತರ ದಂಪತಿ ವಿಚ್ಛೇದನವನ್ನು ಪಡೆದು ಪರಸ್ಪರ ಬೇರ್ಪಟ್ಟರು.