Asianet Suvarna News Asianet Suvarna News

40 ವರ್ಷದಲ್ಲಿ ಅಮ್ಮನಾಗಿ 100 ಲೀಟರ್ ಎದೆ ಹಾಲು ದಾನ ಮಾಡಿದ ನಿರ್ಮಾಪಕಿ

  • 47 ವರ್ಷದಲ್ಲಿ ಅಮ್ಮನಾದ ನಿರ್ಮಾಪಕಿ
  • 100 ಲೀಟರ್ ಎದೆ ಹಾಲು ದಾನ ಮಾಡಿದ ಅಮ್ಮ 
Saand Ki Aankh producer reveals she donated 100 litres of breast milk dpl
Author
Bangalore, First Published Oct 17, 2021, 1:51 PM IST

ವಿಮರ್ಶಕರ ಮೆಚ್ಚುಗೆ ಪಡೆದ ನಿರ್ಮಾಪಕಿ ನಿಧಿ ಪರ್ಮಾರ್ ಹಿರಾನಂದಾನಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣದ ಬಗ್ಗೆ ಈಗ ಮುಕ್ತವಾಗಿ ಮಾತನಾಡಿದ್ದಾರೆ. ನಿಧಿ ತನ್ನ ಎಗ್ ಫ್ರೀಜ್ ಮಾಡಿದಾಗ 37 ವರ್ಷದವಳಾಗಿದ್ದರು. ಇತ್ತೀಚಿನ ಸಂವಾದದಲ್ಲಿ ತಾವು ತಾಯಿಯಾಗಲು ಬಯಸಿದ್ದಾಗ ತನ್ನ ವೃತ್ತಿಜೀವನಕ್ಕೆ ಆದ್ಯತೆ ನೀಡಲು ಬಯಸಿದ್ದನ್ನು ಹಂಚಿಕೊಂಡಿದ್ದಾರೆ.

ಅವರು ವರ್ಷಗಳ ಹಿಂದೆ ಮುಂಬೈಗೆ ಹೋಗಿದ್ದರು. ನಗರಕ್ಕೆ ಬಂದಾಗಿನಿಂದಲೂ, ತಾನು ಹೆಸರು ಮಾಡಿಕೊಳ್ಳಲು ಬಹಳಷ್ಟು ಶ್ರಮ ಪಡಬೇಕಾಯಿತು ಎಂದಿದ್ದಾರೆ. ಅವರು ಟ್ಯಾಲೆಂಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ಎಲ್ಲದರ ನಡುವೆ, ಅವಳು ತನ್ನ ಜೀವನದ ಪ್ರೀತಿಯನ್ನು ಕಂಡುಕೊಂಡು ಮದುವೆಯಾದರು.

ಸೈಲೆಂಟಾಗಿರೋ ಗಂಡ ಬೇಕು, ನಂಗೆ ಮಾತಾಡೋಕೆ ಇಷ್ಟ ಎಂದ ಕಂಗನಾ

ಹ್ಯೂಮನ್ಸ್ ಆಫ್ ಬಾಂಬೆಯ ಬಗ್ಗೆ ವಿಸ್ತಾರವಾದ ಪೋಸ್ಟ್‌ನಲ್ಲಿ, ನಿಧಿ ತನ್ನ 30 ನೇ ವಯಸ್ಸಿನಲ್ಲಿ ಮಕ್ಕಳಿಲ್ಲ ಎಂದು ಹಂಚಿಕೊಂಡಿದ್ದರು. ಆಕೆಯ ಪೋಷಕರು ಮತ್ತು ಸಮಾಜವು ಅವಳು ಯಾವಾಗ ಅಮ್ಮನಾಗುತ್ತಿ ಎಂದೇ ಕೇಳುತ್ತಿದ್ದರು. ಗರ್ಭಧರಿಸುವ ನಿರೀಕ್ಷೆ ನನ್ನ ಸುತ್ತಲೂ ಇತ್ತು. ಅದನ್ನು ನಾನು ಒಬ್ಬ ಮಹಿಳೆಯಾಗಿ ಮಾಡಬೇಕಿತ್ತು ಅಷ್ಟೆ. ನನ್ನ ಸ್ವಂತ ನಿರ್ಮಾಣ ಕಂಪನಿಯನ್ನು ನಿರ್ಮಿಸಲು ನಾನು ಬಯಸಿದ್ದೆ ಎನ್ನುತ್ತಾರೆ ನಿಧಿ. ತನ್ನ ಔದ್ಯೋಗಿಕ ಕನಸು ನನಸು ಮಾಡಲು ಆಕೆಯ ಎಗ್ಸ್ ಫ್ರೀಜ್ ಮಾಡುವಂತೆ ಆಕೆಯ ಪತಿ ಸೂಚಿಸುತ್ತಾರೆ.

ಸೂಕ್ತವೆಂದು ಭಾವಿದುವಾಗ ಗರ್ಭಧರಿಸಿದರು. ಹೆಪ್ಪುಗಟ್ಟಿದ ಮೊಟ್ಟೆಗಳಿಂದ ಗರ್ಭಧಾರಣೆ ಕಾರ್ಯರೂಪಕ್ಕೆ ಬರದಿದ್ದರೆ ಎಂಬುದರ ಬಗ್ಗೆಯೂ ನಾನು ನನ್ನ ಪತಿ ಯೋಚಿಸಿದ್ದೆವು. ಸಾಂದ್ ಕಿ ಆಂಖ್‌ ಚಲನಚಿತ್ರವನ್ನು ನಿರ್ಮಿಸುವ ಕನಸನ್ನು ನನಸಾಯಿತು. ಚಿತ್ರದ ಬಿಡುಗಡೆಯ ನಂತರ ಅವಳು ತಾಯಿಯಾಗಲು ಸಿದ್ಧಳಾಗಿದ್ದಳು. ಆ ಅವಧಿಯಲ್ಲಿ, ಅವರು ಸಹಜವಾಗಿ ಗರ್ಭಿಣಿಯಾದರು.

ಅವರು ತನ್ನ ಒಂಬತ್ತು ತಿಂಗಳ ಗರ್ಭಧಾರಣೆಯನ್ನು ಮ್ಯಾಜಿಕಲ್ ಎಂದು ವಿವರಿಸಿದ್ದಾರೆ. ತನ್ನ ಮಗ, ಪುಟ್ಟ ವೀರ್ ಅನ್ನು ತನ್ನ ತೋಳುಗಳಲ್ಲಿ ಹಿಡಿದಿರುವ ಭಾವನೆಯನ್ನು ಪದಗಳಲ್ಲಿ ಹೇಳಲಾಗುವುದಿಲ್ಲ ಎಂದಿದ್ದಾರೆ. ತನ್ನ ಮೊದಲ ಮಗುವನ್ನು ಸ್ವಾಗತಿಸಿದಾಗ 40 ವರ್ಷ. ಮತ್ತು ಅದು ಸಹಜವಾಗಿಯೇ ಆಗಿತ್ತು. COVID-19- ಲಾಕ್‌ಡೌನ್ ಸಮಯದಲ್ಲಿ 100 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದನ್ನು ಬಹಿರಂಗಪಡಿಸಿದ್ದಾರೆ ನಿಧಿ.

ಅದಕ್ಕಾಗಿಯೇ ನಾನು ನನ್ನ ಕಥೆಯನ್ನು ಎಷ್ಟು ಸಾಧ್ಯವೋ ಅಷ್ಟು ಮಹಿಳೆಯರೊಂದಿಗೆ ಹಂಚಿಕೊಳ್ಳುತ್ತೇನೆ. ಹಾಗಾಗಿ ಅವರು ಕೂಡ ತಾಯ್ತನಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬಹುದು ಎಂದಿದ್ದಾರೆ.

Follow Us:
Download App:
  • android
  • ios