ಬಾಹ್ಯಾಕಾಶ ಕೇಂದ್ರದಲ್ಲಿ ವಿಶ್ವದ ಮೊದಲ ಸಿನಿ​ಮಾ(Cinema) ಶೂಟಿಂಗ್‌! 12 ದಿನ ಆಗಸದಲ್ಲಿ ರಷ್ಯಾ(Russia) ಸಿನಿಮಾ ಚಾಲೆಂಜ್‌ ಶೂಟಿಂಗ್‌ ಟಾಂ ಕ್ರೂಸ್‌ ಸಿನಿಮಾಗಿಂತ ಮೊದಲೇ ಚಾಲೆಂಜ್‌ ಚಿತ್ರೀಕರಣ ಅಮೆ​ರಿ​ಕ​ನ್ನ​ರನ್ನು(America) ಹಿಂದಿಕ್ಕಿ ಅಂತ​ರಿ​ಕ್ಷ​ದಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಮಾಡಿ ದಾಖ​ಲೆ ಬರೆದ ರಷ್ಯಾ

ಮಾಸ್ಕೋ(ಅ.18): ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಶೂಟಿಂಗ್‌ಗೆ ತೆರಳಿದ್ದ ರಷ್ಯಾದ ಚಿತ್ರತಂಡ ಭಾನುವಾರ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಇದರೊಂದಿಗೆ ಚಲನಚಿತ್ರವೊಂದಕ್ಕೆ ಬಾಹ್ಯಾಕಾಶ ಕೇಂದ್ರದಲ್ಲಿ ಶೂಟಿಂಗ್‌ ನಡೆಸಿದ ಮೊದಲ ಚಿತ್ರ ಎಂಬ ಹಿರಿಮೆಗೆ ‘ಚಾಲೆಂಜ್‌’ ಚಿತ್ರ ತಂಡ ಯಶಸ್ವಿಯಾಗಿದೆ.

ನಾಸಾ ಹಾಗೂ ಇಯಾನ್‌ ಮಸ್ಕ್‌ರ ಸ್ಪೇಸ್‌ ಎಕ್ಸ್‌ ಸಹಯೋಗದಲ್ಲಿ ಬಾಲಿವುಡ್‌ ನಟ ಟಾಮ್‌ ಕ್ರೂಸ್‌ ತಮ್ಮ ‘ಮಿಷನ್‌ ಇಂಪಾಸಿಬಲ್‌’ ಚಿತ್ರವನ್ನು ಬಾಹ್ಯಾಕಾಶದಲ್ಲಿ ಚಿತ್ರಿಸಲು ನಿರ್ಧರಿಸಿ ಹೊಸ ದಾಖಲೆಗೆ ನಿರ್ಧರಿಸಿತ್ತಾದರೂ, ರಷ್ಯಾದ ಚಿತ್ರತಂಡ ಅದಕ್ಕೂ ಮೊದಲೇ ತಾನೇ ಶೂಟಿಂಗ್‌ ನಡೆಸಿ ದಾಖಲೆಯನ್ನು ತನ್ನ ಹೆಸರಿನಲ್ಲಿ ಸ್ಥಾಪಿಸಿಕೊಂಡಿದೆ.

ಗುರುಗ್ರಹದ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ನಾಸಾದ ಲೂಸಿ!

ಈ ಹಿಂದೆ 1960 ದಶ​ಕ​ದಲ್ಲಿ ರಷ್ಯಾ ಹಾಗೂ ಅಮೆ​ರಿಕ ನಡುವೆ ಅಂತ​ರಿಕ್ಷ ಯಾನಕ್ಕೆ ಸಂಬಂಧಿ​ಸಿ​ದಂತೆ ಸ್ಪರ್ಧೆ ಏರ್ಪ​ಟ್ಟಿ​ತ್ತು. ಆಗ ರಷ್ಯ​ನ್ನರು ಮೊದ​ಲು ಅಂತ​ರಿಕ್ಷ ಯಾನ ಕೈಗೊಂಡು ಮೇಲುಗೈ ಸಾಧಿ​ಸಿ​ದ್ದರು. ಇದೀಗ ಬಾಹ್ಯಾ​ಕಾ​ಶ​ದಲ್ಲಿ ಸಿನಿಮಾ ಚಿತ್ರೀ​ಕ​ರಣ ನಡೆ​ಸು​ವಲ್ಲೂ ರಷ್ಯ​ನ್ನರು ಅಮೆ​ರಿ​ಕ​ವನ್ನು ಹಿಂದಿ​ಕ್ಕಿ​ದಂತಾ​ಗಿ​ದೆ.

ರಷ್ಯಾದ ಚಿತ್ರತಂಡ ಅ.5ರಂದು ಬಾಹ್ಯಾಕಾಶಕ್ಕೆ ತೆರಳಿತ್ತು. 12 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಇಬ್ಬರ ಚಿತ್ರತಂಡ ಭಾನುವಾರ ಸೂಯೆಜ್‌ ಕ್ಯಾಪ್ಯುಲ್‌ನಲ್ಲಿ ಮೂರೂವರೆ ಗಂಟೆಗಳ ಪ್ರಯಾಣದ ಬಳಿಕ ಕಜಕಿಸ್ತಾನದ ನಿಗದಿತ ಸ್ಥಳಕ್ಕೆ ಬಂದಿಳಿಯಿತು. ಚಿತ್ರ ತಂಡದ ಜೊತೆಗೆ ರಷ್ಯಾದ ಗಗನಯಾತ್ರಿ ಒಲೆಗ್‌ ಕೂಡಾ ಬಂದಿಳಿದರು.

ಏನೇನು ದೃಶ್ಯ ಚಿತ್ರೀಕರಣ?

ಚಾಲೆಂಜ್‌ ಚಿತ್ರದಲ್ಲಿ, ಬಾಹ್ಯಾಕಾಶ ಯಾನಿಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗುವ ಹಿನ್ನೆಲೆಯಲ್ಲಿ ಭೂಮಿಯಿಂದ ವೈದ್ಯೆಯೊಬ್ಬರು ಬಾಹ್ಯಾಕಾಶಕ್ಕೆ ತೆರಳಿ ಚಿಕಿತ್ಸೆ ನೀಡುತ್ತಾರೆ. ಆ ದೃಶ್ಯದ ಚಿತ್ರೀಕರಣಕ್ಕಾಗಿ ನಿರ್ದೇಶಕ ಶಿಪೆನ್ಕೋ ಮತ್ತು ನಟಿ ಯೂಲಿಯಾ ತೆರಳಿದ್ದರು. ಚಿತ್ರದಲ್ಲಿ ಗಾಯಗೊಳ್ಳುವ ಬಾಹ್ಯಾಕಾಶ ಯಾನಿಯ ಪಾತ್ರವನ್ನು ಸ್ವತಃ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದ ರಷ್ಯಾದ ಗಗನಯಾತ್ರಿ ಒಲೆಗ್‌ ನೋವಿಟ್‌ಸ್ಕೈ ನಿರ್ವಹಿಸಿದ್ದರು.

ರಷ್ಯಾದ ಬಾಹ್ಯಾಕಾಶ ಸಂಸ್ಥೆ, ಸೋಯುಜ್‌ನಿಂದ ನಿರ್ಗಮಿಸುವುದಕ್ಕಿಂತ ಮುಂಚೆಯೇ ಸಿಬ್ಬಂದಿಗಳು ಚೇತರಿಸಿಕೊಳ್ಳಲು 10 ದಿನಗಳ ಪುನರ್ವಸತಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ.

Scroll to load tweet…

ಟಾಮ್ ಕ್ರೂಸ್ ಡೌಗ್ ಲಿಮನ್ ನಿರ್ದೇಶನದ ಆಕ್ಷನ್-ಅಡ್ವೆಂಚರ್ ಸಿನಿಮಾದ ಭಾಗವಾಗಿ ಬಾಹ್ಯಾಕಾಶಕ್ಕೆ ಯಾತ್ರೆ ಮಾಡುವ ಪ್ರಾಜೆಕ್ಟ್ ಹೊರಬಂದ ಸ್ವಲ್ಪ ಸಮಯದ ನಂತರ ರಷ್ಯಾದ ಬಾಹ್ಯಾಕಾಶ ಸಂಸ್ಥೆ ತನ್ನ ನಟಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ತನ್ನ ಉದ್ದೇಶವನ್ನು ಘೋಷಿಸಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಡಿಯಲ್ಲಿ ನಾಸಾದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿಮ್ ಬ್ರಿಡೆನ್‌ ಸ್ಟೈನ್, ಆ ಸಮಯದಲ್ಲಿ ಟ್ವಿಟರ್‌ನಲ್ಲಿ ಪ್ರಾಜೆಕ್ಟ್ ವಿವರ ದೃಢಪಡಿಸಿದ್ದರು.