Asianet Suvarna News Asianet Suvarna News

ಮೊದಲ ಮಗು USನಲ್ಲಿ ಜನಿಸುವುದಿಲ್ಲ; ಗಾಸಿಪ್‌ಗೆ ಬ್ರೇಕ್‌ ಹಾಕಿದ RRR ರಾಮ್‌ ಚರಣ್ ಪತ್ನಿ ಉಪಾಸನಾ

 ಅಮೆರಿಕಾದಲ್ಲೇ ಮಗುವಿಗೆ ಜನ್ಮ ನೀಡುತ್ತಾರಾ ಉಪಾಸನಾ? ಭಾರತದಲ್ಲಿ ಇರೋದ್ಯಾಕೆ ಎಂದು ಕಾಲೆಳೆಯುತ್ತಿರುವ ನೆಟ್ಟಿಗರಿಗೆ ಉತ್ತರ ಕೊಟ್ಟ ಮೆಗಾ ಕುಟುಂಬ..... 

RRR Natu Natu Ram Charan wife Upasana confirms her first baby will not born in US vcs
Author
First Published Mar 1, 2023, 10:36 AM IST | Last Updated Mar 3, 2023, 4:32 PM IST

2012ರಲ್ಲಿ ತೆಲುಗು ನಟ ರಾಮ್ ಚರಣ್ ಮತ್ತು ಉದ್ಯಮಿ ಉಪಾಸನಾ ಕೊಣಿಡೆಲಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ 13 ವರ್ಷ ಆದರೂ ಮಕ್ಕಳು ಮಾಡಿಕೊಂಡಿಲ್ಲ, ಸೆರೋಗೆಸಿ ಆಯ್ಕೆ ಮಾಡಿಕೊಳ್ಳಬಹುದು ಹಾಗೆ ಹೀಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್ ಹರಿದಾಡುತ್ತಿತ್ತು. ಅಷ್ಟರಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಿಹಿ ಸುದ್ದಿಯನ್ನು ಕೆಲವು ತಿಂಗಳುಗಳ ಹಿಂದೆ ಹಂಚಿಕೊಂಡರು. 

ಗುಡ್‌ ನ್ಯೂಸ್‌ ರಿವೀಲ್ ಆಗುತ್ತಿದ್ದರಂತೆ ಪ್ಯಾಪರಾಜಿಗಳ ಕಣ್ಣು ರಾಮ್ ಚರಣ್ ಕುಟುಂಬದ ಮೇಲಿದೆ. ಪತಿ ಜೊತೆ ಉಪಾಸನಾ ಆಸ್ಕರ್‌ ಅವಾರ್ಡ್‌ ಪಡೆಯಲು ವಿದೇಶ ಪ್ರಯಾಣ ಮಾಡಿದ್ದರು ಆನಂತರ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತದಲ್ಲಿ ಪ್ರತಿಷ್ಠಿತ ಆಸ್ಪತ್ರೆ ಹೊಂದಿರುವ ಉಪಾಸನಾ ವಿದೇಶದಲ್ಲಿರುವ ವೈದ್ಯರ ಜೊತೆ ಸಂಪರ್ಕದಲ್ಲಿರುತ್ತಾರೆ ಹೀಗಾಗಿ ಹೆಚ್ಚಾಗಿ ಅಮೆರಿಕಾ ಕಡೆ ಪ್ರಯಾಣ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ರಾಮ್ ಚರಣ್ ಅಮೆರಿಕಾ ವೈದ್ಯರ ಜೊತೆ ನಡೆಸಿದ ಸಂದರ್ಶನದ ನೋಡಿ ಮಗು ಅಮೆರಿಕಾದಲ್ಲಿ ಹುಟ್ಟುವುದು ಎಂದು ಗಾಸಿಪ್ ಹಬ್ಬಿತ್ತು. 

ಬೆಳ್ಳಿ ಅಲ್ಲ ಡೈಮೆಂಡ್‌ ಸ್ಪೂನ್‌ನಲ್ಲಿ ತಿಂದು ಬೆಳೆದವಳು; ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ರಾಮ್‌ ಚರಣ್ ಪತ್ನಿ ಉಪಾಸನ

ವೈರಲ್ ಆಗುತ್ತಿರುವ ಡಾಕ್ಟರ್ ಜೆನಿಫರ್ ವಿಡಿಯೋಗೆ ಉಪಾಸನಾ ಕಾಮೆಂಟ್ ಮಾಡಿದ್ದಾರೆ. 'ಗುಡ್ ಮಾರ್ನಿಂಗ್ ಅಮೆರಿಕಾ ಶೋ. ಡಾಕ್ಟರ್ ಜೆನಿಫರ್ ನೀವು ತುಂಬಾನೇ ಸ್ವೀಟ್ ವ್ಯಕ್ತಿ. ನಿಮ್ಮನ್ನು ಭೇಟಿ ಮಾಡಲು ಕಾಯುತ್ತಿರುವೆ. ನೀವು ನಮ್ಮ ಭಾರತದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಭಾರತದಲ್ಲಿ ನಾನು ಮೊದಲ ಮಗುವಿಗೆ ಜನ್ಮ ನೀಡುವುದು. ನಮ್ಮ ಜೊತೆ ಡಾಕ್ಟರ್ ಸುಮನಾ ಮತ್ತು ಡಾಕ್ಟರ್ ರೂಮಾ ಇರುತ್ತಾರೆ' ಎಂದು ಉಪಾಸನಾ ಹೇಳಿದ್ದಾರೆ. ಗಾಸಿಪ್ ಕ್ರಿಯೇಟ್ ಮಾಡುವವರಿಗೆ ಈ ಮೂಲಕ ಉಪಾಸನಾ ಉತ್ತರ ಕೊಟ್ಟಿದ್ದಾರೆ ಎನ್ನಬಹುದು. 

ಡಾ ಜೆನ್ನಿಫರ್ ಆಷ್ಟನ್ ಅವರು ಬೋರ್ಡ್-ಪ್ರಮಾಣೀಕೃತ ಓಬ್-ಜಿನ್, ಲೇಖಕರು ಮತ್ತು ಟಿವಿ ವೈದ್ಯಕೀಯ ವರದಿಗಾರರಾಗುದ್ದು ಅಮೆರಿಕಾ ಶೋನಲ್ಲಿ ರಾಮ್ ಚರಣ್ ಜೊತೆ ಮಾತನಾಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಮ್‌ ಮತ್ತು ಉಪಾಸನಾ ಬಗ್ಗೆ ಮಾತನಾಡಿದ್ದಾರೆ. 

ಕ್ಯಾನ್ಸರ್‌ ಪೀಡಿತ ಅಭಿಮಾನಿಯನ್ನು ಭೇಟಿ ಮಾಡಿದ ರಾಮ್ ಚರಣ್; 9 ವರ್ಷದ ಹುಡುಗನ ಕೈಗಿಟ್ಟ ಸ್ಪೆಷಲ್ ಗಿಫ್ಟ್‌ ಏನು??

ಉಪಾಸನಾ ಸಿರಿವಂತೆ?

ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ಉಪಾಸನಾ ಸಿರಿವಂತ ಕುಟುಂಬದಿಂದ ಬಂದ ಉಪಾಸನಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಅಗುತ್ತಾರೆ. ಫ್ಯಾಮಿಲಿ ಮತ್ತು ಕೆಲಸದ ಬಗ್ಗೆ ಉಪಾಸನಾ ಮಾತನಾಡಿದ್ದಾರೆ. 

'ನಾನು ಡೈಮೆಂಡ್‌ ಸ್ಪೂನ್‌ನಲ್ಲಿ ತಿಂದುಕೊಂಡು ಬೆಳೆದವಳು ಎನ್ನುತ್ತಾರೆ ಆದರೆ ನಾನು ಬೆಳ್ಳಿ, ಚಿನ್ನ, ಡೈಮೆಂಡ್ ಮತ್ತು ಪ್ಲಾಟಿನಂ ಸ್ಪೂನ್‌ನಲ್ಲಿ ತಿನ್ನುವ ಅವಕಾಶಗಳಿತ್ತು ಆದರೆ ಅದರ ಅಗತ್ಯ ನನಗೆ ಇರಲಿಲ್ಲ.  ಮನೆಯಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳಬಹುದಿತ್ತು ಆದರೆ ಈ ಜೀವನಕ್ಕೆ ಅರ್ಥ ಕೊಡಬೇಕು ಎಂದು ಕೆಲಸ ಶುರು ಮಾಡಿದೆ. ಇಷ್ಟು ಒಳ್ಳೆಯ ಹಿನ್ನಲೆ ಹೊಂದಿರುವ ವ್ಯಕ್ತಿ ನಾನಾಗಿ ನನ್ನ ಸುತ್ತಲಿರುವ ಜನರ ಜೀವನದಲ್ಲಿ ಬದಲಾವಣೆ ತರಲಿಲ್ಲ ಅಂದ್ರೆ ಎಷ್ಟು ವ್ಯರ್ಥ ಈ ಜೀವನ ಅನಿಸುತ್ತದೆ. ಒಂದು ಕುಟುಂಬದಿಂದ ಜನರ ಆರೋಗ್ಯದಲ್ಲಿ ಬದಲಾವಣೆ ತರಬಹುದು ಮತ್ತೊಂದು ಕುಟುಂಬದಿಂದ ಜನರಿಗೆ ಒಳ್ಳೆಯ ಸಂದೇಶ ಕಳುಹಿಸಬಹುದು. 5 ವರ್ಷದ ಹುಡುಗಿ ಇದ್ದಾಗಿನಿಂದಲೂ ನಾನು ಅಪೋಲೋ ಆಸ್ಪತ್ರೆಯಲ್ಲಿ ತಾತನ ಕೈ ಹಿಡಿದುಕೊಂಡು ನಡೆದಾಡಿರುವೆ. ಇದು ನನ್ನ ಜೀವನದ ಹಾದಿ ಎಂದು ಅಂದೇ ನಿರ್ಧಾರ ಮಾಡಿದೆ. ನಾನು ಮನುಷ್ಯೆ ಆಗಿರುವ ಕಾರಣ ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡೆ ಆದರೆ ನನ್ನ ಕೈ ಹಿಡಿದಿದ್ದು ನಾನು ಮೊದಲು ಯೋಚನೆ ಮಾಡಿದ ಹಾದಿ' ಎಂದು ಉಪಾಸನಾ ಜೋಶ್‌ ಟಾಕ್‌ ಯುಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದರು. 

Latest Videos
Follow Us:
Download App:
  • android
  • ios