ಕೆಜಿಎಫ್‌ನ ಬಳ್ಳಿಯ ಮಿಂಚು ತಮನ್ನಾ ಕಾಮೆಡಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಟ್ ಚೆಲುವೆ ಕಾಮೆಡಿ ಸಿನಿಮಾದಲ್ಲಿ ಜೊತೆಯಾಗೋದು ರಿತೇಷ್ ದೇಶ್‌ಮುಖ್.

ಮಿಲ್ಕಿ ಬ್ಯೂಟಿ ತಮನ್ನಾ ಕಾಮೆಡಿ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ದೇವಿ ಸೇರಿ ಹಲವು ಸಿನಿಮಾಗಳಲ್ಲಿ ಸ್ವಲ್ಪ ಮಟ್ಟಿಗೆ ಫನ್ನಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಗುರುತುಂಡ ಸೀತಕಲಂ' ಸೆಟ್‌ನಲ್ಲಿ ಕೃಷ್ಣ, ಮಿಲನಾ; ಮದುವೆಗೆ ತಮನ್ನಾನೂ ಬರ್ತಿದ್ದಾರೆ?

ಭಾಘಿ 3 ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ನಟಿಸಿದ ನಂತರ ರಿತೇಷ್ ಇನ್ನು ಕಾಮೆಡಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ನಟ ನಿರ್ಮಿಸಲಿರೋ ಮುಂದಿನ ಕಾಮೆಡಿ ಸಿನಿಮಾದಲ್ಲಿ ತಮನ್ನಾ ಜೊತೆ ನಟಿಸಲಿದ್ದಾರೆ.

ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದ್ದು, ಇದಕ್ಕೂ ಮುನ್ನ ಈ ಜೋಡಿ 2014ರಲ್ಲಿ ಹಂಶಕಲ್ಸ್ನಲ್ಲಿ ಜೊತೆಯಾಗಿ ನಟಿಸಿದ್ದರು. ತಮನ್ನಾ ಕಂಗನಾ ಅಭಿನಯಿಸಿದ ಕ್ವೀನ್ ಸಿನಿಮಾದ ತೆಲುಗು ರಿಮೇಕ್ ಮಹಾಲಕ್ಷ್ಮಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.