ರಜನಿಕಾಂತ್‌ರ ಅಗ್ರಸ್ಥಾನಕ್ಕೆ ವಿಜಯ್ ಸಮೀಪಿಸುತ್ತಿದ್ದು, ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. 'ಜನನಾಯಗಂ' ಚಿತ್ರಕ್ಕೆ ೨೫೦ ಕೋಟಿ ಪಡೆದಿರುವ ವಿಜಯ್, ರಾಜಕೀಯಕ್ಕೆ ಪೂರ್ಣಪ್ರಮಾಣದಲ್ಲಿ ಪ್ರವೇಶಿಸಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ೪೭೪ ಕೋಟಿ ಆಸ್ತಿಯ ಒಡೆಯನಾಗಿರುವ ವಿಜಯ್, ರಾಜಕೀಯದಲ್ಲೂ ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರಷ್ಟು ಖ್ಯಾತಿ ಹೊಂದಿರುವ ನಟ ಇನ್ನೊಬ್ಬರಿಲ್ಲ ಎಂಬ ಕಾಲವೊಂದಿತ್ತು. ನಟ ರಜನಿಕಾಂತ್ ಸಂಭಾವನೆ, ಸಿನಿಮಾ ಕ್ರೇಜ್ ಹಾಗೂ ಪಪ್ಯುಲಾರಿಟಿಯಲ್ಲಿ ಅವರನ್ನು ಮೀರಿಸುವ ನಟ ಭಾರತದಲ್ಲಿ ಇರಲೇ ಇಲ್ಲ. ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಹೀಗೆ ಹಲವರು ಸ್ಟಾರ್ ನಟರಾಗಿ, ಕಲಾವಿದರಾಗಿ ಭಾರೀ ಮೇಲ್ಮಟ್ಟದಲ್ಲಿ ನಿಂತಿದ್ದರೂ ನಟ ರಜನಿಕಾಂತ್ ಅವರನ್ನು ಏಷ್ಯಾದ ಅತ್ಯಂತ ಖ್ಯಾತ ನಟ ಎಂದೇ ಹೇಳಲಾಗುತ್ತಿತ್ತು. ಆದರೆ, ಈಗ ತಮಿಳು ನಟ ವಿಜಯ್ (Thalapathy Vijay) ಅವರು ಪ್ರಸಿದ್ಧಿಯಲ್ಲಿ ನಟ ರಜನಿಕಾಂತ್ ಅವರ ಸಮೀಪಕ್ಕೆ ಬಂದಿದ್ದಾರೆ ಎನ್ನಬಹುದು. ಜೊತೆಗೆ, ತಮಿಳು ಸ್ಟಾರ್ ನಟರಲ್ಲಿ ವಿಜಯ್ ಈಗ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 

ನಟ ರಜನಿಕಾಂತ್ ಅವರ ಸಮೀಪದಲ್ಲಿ ಕೂಡ ಯಾರೂ ಸಂಭಾವನೆ ಪಡೆಯುತ್ತಿರಲಿಲ್ಲ. ಬರೋಬ್ಬರಿ 300 ಕೋಟಿ ಸಂಭಾವನೆ ಪಡೆದಿದ್ದರು ಸೂಪರ್ ಸ್ಟಾರ್‌ ರಜನಿಕಾಂತ್. ಸದ್ಯಕ್ಕೆ ಕೂಲಿ ಸಿನಿಮಾದಲ್ಲಿ ನಟಿಸುತ್ತಿರುವ ನಟ ರಜನಿಕಾಂತ್ ಅವರೊಂದಿಗೆ ಕನ್ನಡದ ಶಿವರಾಜ್‌ಕುಮಾರ್ ಸೇರಿದಂತೆ ಹಲವು ಭಾಷೆಗಳ ಬಿಗ್ ಸ್ಟಾರ್ಸ್‌ಗಳು ನಟಿಸುತ್ತಿದ್ದಾರೆ. ಕೂಲಿ ಚಿತ್ರವು ಬಿಗ್ ಬಜೆಟ್ ಹೊಂದಿದ್ದು, ಮಲ್ಟಿ ಸ್ಟಾರರ್ ಸಿನಿಮಾ ಆಗಿ ಹೊರಹೊಮ್ಮುತ್ತಿದೆ. ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಮನೆಮಾಡಿದ್ದು, ಸಿನಿಪ್ರೇಮಿಗಳು ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. 

ರಜನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಅಮೀರ್‌ ಖಾನ್‌: ಉಪೇಂದ್ರ ಹೇಳಿದಿಷ್ಟು...

ನಟ ರಜನಿಕಾಂತ್ ಅವರು ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಸದ್ಯಕ್ಕೆ ತಮಿಳುನಾಡು ರಾಜಕೀಯದ ಪರಿಸ್ಥಿತಿಯನ್ನು ನೋಡಿದರೆ, ರಜನಿಯವರು ತಮಿಳುನಾಡಿನಲ್ಲಿ ರಾಜಕೀಯಕ್ಕೆ ಬರುವ ಯಾವುದೇ ಲಕ್ಷಣವಿಲ್ಲ. ಆದರೆ, ನಟ ವಿಜಯ್ ಅವರು ಈಗಾಗಲೇ ರಾಜಕೀಯಕ್ಕೆ ಪ್ರವೇಶ ಪಡೆದಿದ್ದು, ರಾಜಕೀಯ ಪಕ್ಷ ಸ್ಥಾಪಿಸಿ, ಮುಂದಿನ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ತಮಿಳುನಾಡು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ, ಸಿನಿಮಾ ಉದ್ಯಮವನ್ನು ಬಿಟ್ಟು ಸಂಪೂರ್ಣವಾಗಿ ತಾವು ರಾಜಕೀಯಕ್ಕೆ ಮೀಸಲಾಗಿರುವುದಾಗಿ ಕೂಡ ಘೋಷಿಸಿದ್ದಾರೆ. ಸದ್ಯ 'ಜನನಾಯಗಂ' ಸಿನಿಮಾ ಮಾಡುತ್ತಿರುವ ನಟ ವಿಜಯ್ ಅವರು ಅದೇ ತಮ್ಮ ಕೊನೆಯ ಸಿನಿಮಾ ಎಂದೂ ಘೊಷಿಸಿದ್ದಾರೆ. 

ತಮಿಳು ನಟ ವಿಜಯ್ (ದಳಪತಿ ವಿಜಯ್) ಅವರು ರಜನಿಕಾಂತ್ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹೇಳಲಾಗಿದೆ. ತಮ್ಮ ಕೊನೆಯ ಚಿತ್ರವಾಗಿರುವ 'ಜನನಾಯಗಂ'ಗೆ ಬರೋಬ್ಬರಿ 250 ಕೋಟಿ ಸಂಭಾವನೆ ಪಡೆದಿದ್ದಾರೆ ವಿಜಯ್ ಎನ್ನಲಾಗಿದೆ. ಸಿನಿಮಾ ಜೊತೆಜೊತೆಗೇ, ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡು ತಾವೇ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ ನಟ ದಳಪತಿ ವಿಜಯ್. ಮುಂದೇನು ಆಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಸದ್ಯಕ್ಕಂತೂ ಹಲವರು ನಟ ವಿಜಯ್ ರಾಜಕೀಯ ಭವಿಷ್ಯ ಉಜ್ವಲ ಆಗಿರಲಿದೆ ಎಂದೇ ಹೇಳುತ್ತಿದ್ದಾರೆ.

ವನಿತಾ ವಾಸು ಭಾರೀ ರಹಸ್ಯಗಳು ರಿವೀಲ್; ಎಲ್ಲಿ ಹೇಳಿದ್ದು.. ಏನಂದ್ರು..?!

ಸಿಕ್ಕ ಮಾಹಿತಿ ಪ್ರಕಾರ, ನಟ ವಿಜಯ್ ಅವರು 474 ಕೋಟಿ ರೂಪಾಯಿ ಒಡೆಯ ಎನ್ನಲಾಗುತ್ತಿದೆ. ಈ ಮೂಲಕ ತಮಿಳು ಸ್ಟಾರ್‌ ನಟರಲ್ಲಿ ಅತ್ಯಂತ ಶ್ರೀಮಂತ ನಟ ವಿಜಯ್ ಎನ್ನಲಾಗುತ್ತಿದೆ. ರಾಜಕೀಯ ಪ್ರವೇಶಕ್ಕೆ ಆಸ್ತಿ ಕೂಡ ಬಹುಮುಖ್ಯ ಅಂಶ ಎಂಬುದು ಎಲ್ಲರಿಗೂ ಗೊತ್ತು. ಈ ಎಲ್ಲ ಕಾರಣಗಳಿಂದ, ತಮಿಳುನಾಡಿನ ರಾಜಕೀಯ ಮುಂದಿನ ದಿನಗಳಲ್ಲಿ ಬದಲಾಗಲಿದೆ, ನಟ ವಿಜಯ್ ಕಮಾಲ್ ಮಾಡುವುದು ಖಚಿತ ಎನ್ನಲಾಗುತ್ತಿದೆ. ಸುದ್ದಿ ಸತ್ಯವಾಗಬಹುದೇ? ಗೊತ್ತಿಲ್ಲ, ಆಗಲೂಬಹುದು, ಆಗದೆಯೂ ಇರಬಹುದು.