ನಟಿ ನಗ್ಮಾ ಜೊತೆ ಅನೈತಿಕ ಸಂಬಂಧ: ಕೊನೆಗೂ ಮೌನ ಮುರಿದ ನಟ ರವಿ ಕಿಶನ್

ನಟಿ ನಗ್ಮಾ ಜೊತೆ ಅನೈತಿಕ ಸಂಬಂಧದ ವದಂತಿ ಬಗ್ಗೆ ಕೊನೆಗೂ ನಟ ರವಿ ಕಿಶನ್ ಮೌನ ಮುರಿದ್ದಾರೆ. 

Ravi Kishan About rumours of extra marital affair with Nagma sgk

ನಟ ಮತ್ತು ರಾಜಕಾರಣಿ ರವಿ ಕಿಶನ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಟ ರವಿ ಕಿಶನ್ ಕಾಣಿಸಿಕೊಂಡಿದ್ದರು. ಆಗ ಕಿಶನ್  ಪ್ರಶ್ನೆಗಳ ಸುರಿಮಳೆಯನ್ನು ಎದುರಿಸಿದರು. ಈ ನಡುವೆ ಮಾಜಿ ಸಹನಟಿ ನಗ್ಮಾ ಅವರೊಂದಿಗಿನ ಅನೈತಿಕ ಸಂಬಂಧದ ಬಗ್ಗೆಯೂ ಪ್ರಶ್ನೆ ಎದುರಾಯಿತು. ನಟಿ ನಗ್ಮಾ ಮತ್ತು  ರವಿ ಕಿಶನ್ ನಡುವೆ ಸಂಬಂಧವಿದೆ ಎನ್ನುವ ಸುದ್ದಿ ಅನೇಕ ಸಮಯದಿಂದ ಕೇಳಿ ಬರುತ್ತಿತ್ತು. ಈ ಬಗ್ಗೆ ಇಬ್ಬರಲ್ಲಿ ಯೂರು ಕೂಡ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಮೊದಲ ಬಾರಿಗೆ ರವಿ ಕಿಶನ್ ಮೌನ ಮುರಿದಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ರವಿ ಕಿಶನ್, ಇಬ್ಬರೂ ಹೆಚ್ಚು ಸಿನಿಮಾ ಮಾಡಿದ್ದರಿಂದ ಈ ರೀತಿಯ ವಿವಾದ ಶುರುವಾಗಿದೆ ಎಂದು ಹೇಳಿದರು. 'ನಮ್ಮ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿದ್ದರಿಂದ ನಾವು ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದೆವು. ನಾವು ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ಮುಖ್ಯವಾಗಿ ನಾನು ಮದುವೆಯಾಗಿದ್ದೇನೆ ಎಂದು ಎಲ್ಲರಿಗೂ ತಿಳಿದಿತ್ತು. ನಾನು ನನ್ನ ಹೆಂಡತಿ ಪ್ರೀತಿ ಶುಕ್ಲಾಳನ್ನು ಗೌರವಿಸುತ್ತೇನೆ ಮತ್ತು ಹೆದರುತ್ತೇನೆ. ನಾನು ಅವಳ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತೇನೆ ಎಂದು ಈ ಮೊದಲು ಬಹಿರಂಗಪಡಿಸಿದ್ದೇನೆ. ನನ್ನ ಹೆಂಡತಿ ಮೊದಲಿನಿಂದಲೂ ನನ್ನೊಂದಿಗೆ ಇದ್ದಳು ಮತ್ತು ನನ್ನ ಬಳಿ ಹಣವಿಲ್ಲದಿರುವಾಗಲೂ ಅವಳು ನನ್ನೊಂದಿಗೆ ಇದ್ದಳು' ಎಂದು ಹೇಳಿದ್ದಾರೆ. 

ಕಾಫಿ ಕುಡಿಯೋಕೆ ರಾತ್ರಿ ಕರೆಯೋದಾ? ಕಾಸ್ಟಿಂಗ್​ ​ ಕೌಚ್​ ಅನುಭವ ಬಿಚ್ಚಿಟ್ಟ 'ಹೆಬ್ಬುಲಿ' ನಟ

ತಾನು ಸೂಪರ್ ಸ್ಟಾರ್ ಆದ ಮೇಲೆ ದುರಹಂಕಾರಿಯಾಗಿದ್ದೆ. ಬಿಗ್‌ಬಾಸ್ ನಲ್ಲಿ ಭಾಗವಹಿಸಿ  ಅಂತ ಸಲಹೆ ನೀಡಿದ್ದು ತನ್ನ ಪತ್ನಿ ಎಂದು ರವಿ ಕಿಶನ್ ಹೇಳಿದ್ದಾರೆ.  'ನನ್ನ ಸಿನಿಮಾಗಳು ಹಿಟ್ ಆದ ನಂತರ ನಾನು ಅಹಂಕಾರಿಯಾಗಿದ್ದೆ. ಬಿಗ್ ಬಾಸ್ ಗೆ ಸೇರುವಂತೆ ನನ್ನ ಪತ್ನಿ ಸಲಹೆ ನೀಡಿದಳು. ಆರಂಭಿಕ ಹಿಂಜರಿಕೆಯ ನಂತರ ನಾನು ಬಿಗ್ ಬಾಸ್‌ಗೆ ಹೋದೆ. ಮೂರು ತಿಂಗಳ ಕಾಲ ಒಳಗಿದ್ದು ನಾನು ಹೊರಗೆ ಬಂದಾಗ ನಾನು ಸಾಕಷ್ಟು ಬದಲಾಗಿದ್ದೆ. ನಾನು ಜನಪ್ರಿಯನಾಗುವುದು ಮಾತ್ರವಲ್ಲ, ನಾನು ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ಆ ಅವಧಿಯಲ್ಲಿ ನಾನು ನನ್ನ ಕುಟುಂಬ, ನನ್ನ ಹೆಂಡತಿ ಮತ್ತು ಮಕ್ಕಳನ್ನು ಮಿಸ್ ಮಾಡಿಕೊಂಡೆ' ಎಂದು ಹೇಳಿದ್ದಾರೆ. 

ಕುರುಬನ ರಾಣಿಯ ಖಾತೆಗೆ ಸೈಬರ್‌ ಕಳ್ಳರ ಕನ್ನ, 1 ಲಕ್ಷ ಕಳೆದುಕೊಂಡ ನಟಿ ನಗ್ಮಾ!

ರವಿ ಕಿಶನ್ ಜೊತೆಗಿನ ಅಫೇರ್ ವದಂತಿ ಬಗ್ಗೆ ನಟಿ ನಗ್ಮಾ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಗ್ಮಾ, ಒಬ್ಬ ಸಹ ನಟನ ಜೊತೆ ಉತ್ತಮ ಬಾಂಧವ್ಯ ಹೊಂದಲು ಯಾಕೆ ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಆರಾಮಾಗಿ ಇದ್ದರೆ ಏನು ತಪ್ಪು. ರೀಲ್ ಮೇಲೆ ನಾವು ಗಂಡ-ಹೆಂಡತಿ, ಪ್ರೇಮಿಗಳಾಗಿ ನಟಿಸುತ್ತೇವೆ. ಹಾಗಾಗಿ ತೆರೆಹಿಂದೆ ಸ್ವಲ್ಪ ಅರಾಮಾಗಿ ಇರಬೇಕಾಗುತ್ತದೆ'  ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios