ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಟ್ರೋಲಾಗೋದಂತೂ ತಪ್ಪಲ್ಲ ಹಿಂದಿ ಮಾತಾಡಿದ ವಿಡಿಯೋ ವೈರಲ್ ಯಾವ ಆ್ಯಂಗಲ್‌ನಲ್ಲಿ ಈಕೆ ನ್ಯಾಷನಲ್ ಕ್ರಶ್(National Crush) ಥರ ಕಾಣ್ತಾಳೆ ಎಂದ ನೆಟ್ಟಿಗರು

ಸ್ಯಾಂಡಲ್‌ವುಡ್‌ನಲ್ಲಿ ಕೆರಿಯರ್ ಆರಂಭಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಖತ್ ಹಿಟ್ ನಟಿಯಾಗಿ ಬೆಳೆಯುತ್ತಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ರಶ್ಮಿಕಾ ಒಟ್ಟೊಟ್ಟಿಗೇ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ. ನಟಿಯ ಸಿನಿಮಾಗಳು ಬಾಕ್ಸ್‌ ಆಫೀಸ್‌ ಹಿಟ್ ಆಗುತ್ತಿವೆ. ಇದೀಗ ಸೌತ್ ಸ್ಟೈಲಿಷ್ ಸ್ಟಾರ್ ಅಲ್ಲು ಸರ್ಜುನ್ ಜೊತೆ ಅಭಿನಯಿಸಿರುವ ಪುಷ್ಪಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ನಟಿ. ಸಿನಿಮಾ ಕುರಿತು ಪ್ರಚಾರವೆಂದು ಬಹಳಷ್ಟು ಕಾರ್ಯಕ್ರಮ, ಪ್ರೆಸ್‌ಮೀಟ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇತ್ತೀಚೆಗೆ ನಟಿ ಪುಷ್ಪಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಗ್ರೀನ್ ಲೆಹಂಗಾದಲ್ಲಿ ಮಿಂಚಿದ್ದಾರೆ. ಹಿಂದಿಯಲ್ಲಿ ಡಯಲಾಗ್ ಹೇಳಿದ ನಟಿ ತಮ್ಮ ಎಂದಿನ ಸ್ಟೈಲ್‌ನಲ್ಲಿ ಒಂದು ಸ್ಮೈಲ್ ಕೊಟ್ಟಿದ್ದಾರೆ. ಫೇಮಸ್ ಪಾಪ್ಪರಾಜಿ ವೈರಲ್ ಭಯಾನಿ ಪುಟದಲ್ಲಿ ನಟಿಯ ವಿಡಿಯೋ ಶೇರ್ ಮಾಡಿದ್ದು ನೆಟ್ಟಿಗರು ಇದಕ್ಕೆ ಬೇರೆ ಬೇರೆ ರೀತಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಜನರಿಗೆ ಯಾವ ಆಂಗಲ್‌ನಲ್ಲಿ ಈಕೆ ನ್ಯಾಷನಲ್ ಕ್ರಶ್ ಆಗಿ ಕಾಣುತ್ತಾಳೋ ಗೊತ್ತಿಲ್ಲ. ಈಕೆಗಿಂತ ಎಷ್ಟು ಚಂದದ ನಟಿಯರಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

View post on Instagram

ಕಪ್ಪು ಸೀರೆಯಲ್ಲಿ ಮಿಂಚಿದ ಕಿರಿಕ್ ಚೆಲುವೆ

ಯಾವುದೇ ವಿಷಯವಾದ್ರೂ ಹೆಚ್ಚಾದರೆ ಓವರ್ ಆಗುತ್ತೆ. ಈಕೆಯಂತೂ ಇತ್ತೀಚಿನ ದಿನಗಳಲ್ಲಿ ಭಾರೀ ಮಾಡುತ್ತಿದ್ದಾಳೆ ಎಂದಿದ್ದಾರೆ. ಇನ್ನೊಬ್ಬರು ಈಕೆ ಈಗ ಓವರ್ ಕ್ಯೂಟ್ ಆಗೋ ಪ್ರಯತ್ನ ಮಾಡ್ತಿದ್ದಾರೆ ಎಂದಿದ್ದಾರೆ. ಇನ್ನಬ್ಬರು ಈಕೆಗೆ ಕನ್ನಡ ಮಾತಾಡೋಕಾಗಲ್ಲ, ಆದರೂ ಓವರ್ ಹೈಪ್ ಎಂದಿದ್ದಾರೆ.

Click and drag to move

ರಶ್ಮಿಕಾ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಬಹಳಷ್ಟು ಸಲ ನಟಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪುಷ್ಪಾ ಪ್ರೆಸ್‌ ಮೀಟ್‌ನಲ್ಲಿಯೇ ಕನ್ನಡ ಬರಲ್ಲ ಎಂದಿದ್ದ ನಟಿಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. 

ತೆಲುಗು ಮಾತಾಡಿ ಮಾತಾಡಿ ನನಗೆ ಕನ್ನಡವೇ ಬರುತ್ತಿಲ್ಲ ಎಂದು ಸೌತ್ ನಟಿ, ಸ್ಯಾಂಡಲ್‌ವುಡ್‌ನ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಬಹುನಿರೀಕ್ಷಿತ ಟಾಲಿವುಡ್ ಸಿನಿಮಾ ಪುಷ್ಪಾ: ದಿ ರೈಸ್‌ನ ಪ್ರೆಸ್ ಮೀಟ್ ಬೆಂಗಳೂರಿನಲ್ಲಿ ನಡೆದಿದ್ದು ಇದರಲ್ಲಿ ರಶ್ಮಿಕಾ ಭಾಗವಹಿಸಿ ಮಾತನಾಡಿದ್ದಾರೆ. ತೆಲುಗು ಮಾತನಾಡಿ ಕನ್ನಡವೇ ಬರುತ್ತಿಲ್ಲ ಎಂದ ನಟಿ ಮತ್ತೆ ಸುದ್ದಿಯಾಗಿದ್ದಾರೆ. ಇದೀಗ ಅಭಿಮಾನಿಗಳಲ್ಲಿ ರಶ್ಮಿಕಾ ಕನ್ನಡ ಮಾತನಾಡೋದನ್ನ ಮರೆತಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ.

ಪುಷ್ಪ ಸಿನಿಮಾ ಸುದ್ದಿಗೋಷ್ಟಿಯಲ್ಲಿ ರಶ್ಮಿಕಾ ಎಡವಟ್ಟು ಮಾಡಿಕೊಂಡಿದ್ದು ಜೊತೆಯಲ್ಲಿ ಡಾಲಿ ಧನಂಜಯ್ ಹಾಗೂ ಅಲ್ಲು ಅರ್ಜುನ್ ಅವರೂ ಇದ್ದರು. ನಮ್ಮೂರಿಗೆ ಬಂದು ತುಂಬಾ ಖುಷಿಯಾಗುತ್ತಿದೆ. 17 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ತುಂಬಾ ಚನ್ನಾಗಿ ಮಾಡಿದ್ದೇವೆ. ಶ್ರೀವಲ್ಲಿ ಪಾತ್ರ ನನಗೆ ತುಂಬಾ ಸ್ಪೆಷಲ್. ಪುಷ್ಪ ಸಿನಿಮಾ ನಾರ್ಮಲ್ ಸ್ಟೋರಿ ಅಲ್ಲ ಎಂದು ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ(Rashmika Mandanna) ಹೇಳಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಸಿನಿಮಾ ಪ್ರೆಸ್‌ಮೀಟ್‌ನಲ್ಲಿ(Press Meet) ಮಾತನಾಡಿದ ರಶ್ಮಿಕಾ, ನಾನು ಅಲ್ಲು ಅರ್ಜುನ್(Allu Arjun) ಸರ್ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಅಲ್ಲು ಅರ್ಜುನ್ ಸರ್ ಗೆ ಇರೋ ಹೆಸರಿಗೆ ನಾನು ಫುಲ್ ಫಿಲ್ ಮಾಡುವಷ್ಡು ಕೆಲಸ ಮಾಡಿದ್ದೇನೆ. ಡಾಲಿ ಧನಂಜಯ್ ಜೊತೆ ಕೂಡ ನಟಿಸಿದ್ದೇನೆ. ಸೆಟ್ ನಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾರೆ ರಶ್ಮಿಕಾ. ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಪುಷ್ಪ(Pushpa) ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದೆ. ಪುಷ್ಪ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜನ್ ,ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಭಾಗಿಯಾಗಿದ್ದಾರೆ.