ಶೇಖರ್ ಕಮ್ಮುಲ ನಿರ್ದೇಶನದ, ಧನುಷ್ ನಟನೆಯ, ಇಂದು ಅದ್ದೂರಿಯಾಗಿ ಬಿಡುಗಡೆಯಾಗಿರುವ 'ಕುಬೇರ' ಚಿತ್ರದ ಟ್ವಿಟ್ಟರ್ ವಿಮರ್ಶೆಯನ್ನು ನೋಡೋಣ.

ನಟ ಧನುಷ್, ನಿರ್ದೇಶಕ ಶೇಖರ್ ಕಮ್ಮುಲ ಒಟ್ಟಿಗೆ ಸೇರಿ ಮಾಡಿರುವ ಸಿನಿಮಾ 'ಕುಬೇರ'. ಈ ಚಿತ್ರದಲ್ಲಿ ಧನುಷ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ, ಖಳನಾಗಿ ನಾಗಾರ್ಜುನ ನಟಿಸಿದ್ದಾರೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಈ ಚಿತ್ರವನ್ನು ನಿರ್ಮಿಸಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ನಿಖಿತ್ ಬೊಮ್ಮಿ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್ ಸಂಕಲನ ಮಾಡಿದ್ದಾರೆ. ಸ್ಟಂಟ್ ಶ್ರೀ ಆಕ್ಷನ್ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ಚಿತ್ರ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಕುಬೇರ ಚಿತ್ರದಲ್ಲಿ ಧನುಷ್ ಭಿಕ್ಷುಕನಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಚಿತ್ರದ ಅವಧಿ ಮೂರು ಗಂಟೆ ಎರಡು ನಿಮಿಷಗಳು. ಭಾರಿ ನಿರೀಕ್ಷೆಯ ನಡುವೆ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕುಬೇರ ಚಿತ್ರ ತಮಿಳುನಾಡಿನಲ್ಲಿ ಬೆಳಿಗ್ಗೆ 9 ಗಂಟೆಗೆ ಬಿಡುಗಡೆಯಾಗುತ್ತಿದೆ. ಆದರೆ ಅಮೆರಿಕದಲ್ಲಿ ಈ ಚಿತ್ರ ಇಂದು ಬೆಳಗಿನ ಜಾವವೇ ಬಿಡುಗಡೆಯಾಗಿದೆ. ಅಲ್ಲಿ ಚಿತ್ರದ ಮೊದಲ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ಟ್ವಿಟ್ಟರ್‌ನಲ್ಲಿ ತಮ್ಮ ವಿಮರ್ಶೆಯನ್ನು ಬರೆದಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಕುಬೇರ ಟ್ವಿಟ್ಟರ್ ವಿಮರ್ಶೆ

  • ಕುಬೇರ ಚಿತ್ರದಲ್ಲಿ ಧನುಷ್ ಆಸ್ಕರ್ ಮಟ್ಟದ ಅಭಿನಯ ನೀಡಿದ್ದಾರೆ. ಮೊದಲಾರ್ಧಕ್ಕಿಂತ ಎರಡನೇ ಅರ್ಧ ಚೆನ್ನಾಗಿದೆ. ಧನುಷ್‌ಗೆ ಮೊದಲ 300 ಕೋಟಿ ಗಳಿಕೆಯ ಚಿತ್ರ ಕುಬೇರ ಎಂದು ಬರೆದಿದ್ದಾರೆ.
  • ಪ್ರತಿಯೊಂದು ದೃಶ್ಯವೂ ತುಂಬ ತೂಕಭರಿತವಾಗಿದೆ.
  • ಧನುಷ್‌ ಅವರ ಅದ್ಭುತವಾದ ಸಿನಿಮಾವಿದು
  • ನಾಗಾರ್ಜುನ ಅವರು ಸೈಲೆಂಟ್‌ ಆಗಿಯೇ ಪವರ್‌ ತೋರಿಸ್ತಾರೆ
  • ಅದ್ಭುತವಾದ ನಿರೂಪಣೆ
Scroll to load tweet…

  • ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳಲ್ಲಿ ಕುಬೇರ ಅತ್ಯುತ್ತಮ ಚಿತ್ರ. ಇದು ಶೇಖರ್ ಕಮ್ಮುಲ ಅವರ ಚಿತ್ರ, ಧನುಷ್ ಅವರ ಮೇರುಕೃತಿ, ನಾಗಾರ್ಜುನ ಅವರ ವಿಶ್ವರೂಪ ಮತ್ತು ದೇವಿ ಶ್ರೀ ಪ್ರಸಾದ್ ಅವರ ತಾಂಡವ. ಪ್ರತಿ ಪೈಸೆಗೂ ಚಿತ್ರ ಯೋಗ್ಯವಾಗಿದೆ. ಒಂದೇ ಒಂದು ದೃಶ್ಯವೂ ಬೋರ್ ಹೊಡೆಸಲಿಲ್ಲ ಎಂದು ಬರೆದಿದ್ದಾರೆ.