ಟಾಲಿವುಡ್ ಮೋಸ್ಟ್ ರೊಮ್ಯಂಟಿಕ್, ಮೋಸ್ಟ್ ಹ್ಯಾಂಡ್ಸಮ್ ಗಯ್ ವಿಜಯ್ ದೇವರಕೊಂಡ ಕೆಲ ದಿನಗಳ ಹಿಂದೆ ಹೊಸ ಮನೆಯನ್ನು ಖರೀದಿಸಿದ್ದಾರೆ. ಅದ್ದೂರಿಯಾಗಿ ಗೃಹಪ್ರವೇಶವನ್ನೂ ಮಾಡಿಕೊಂಡಿದ್ದಾರೆ. 

ಗೃಹ ಪ್ರವೇಶ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡಾ ಭಾಗಿಯಾಗಿದ್ದಾರೆ.  'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್' ನಂತರ ಇಬ್ಬರೂ ಬಹಳ ಆಪ್ತರಾಗಿದ್ದಾರೆ. ಸ್ನೇಹಿತನ ಮನೆ ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದು ದೊಡ್ಡದೇನಲ್ಲ ಬಿಡಿ!

 

ವಿಜಯ್ ದೇವರಕೊಂಡ ಹೈದರಾಬಾದ್‌ನಲ್ಲಿ 15 ಕೋಟಿ ವೆಚ್ಚದ ದುಬಾರಿ ಮನೆಯನ್ನು ಖರೀದಿಸಿದ್ದಾರೆ.  ಮನೆ ಬಹಳ ದೊಡ್ಡದಾಗಿದೆ. ಹೋಗುವುದಕ್ಕೆ ಭಯವಾಗುತ್ತದೆ. ಅಮ್ಮನ ನೆರವು ಬೇಕಾಗಿದೆ' ಎಂದು ಬರೆದುಕೊಂಡಿದ್ದರು.