Asianet Suvarna News Asianet Suvarna News

ಅಪ್ಪನಾಗಿರೋ ರಣವೀರ್ ಸಿಂಗ್​ ಕನ್ನಡ ಮಾತನಾಡಿದಾಗ... ವಿಡಿಯೋ ನೋಡಿ ಕನ್ನಡಿಗರು ಫುಲ್​ ಫಿದಾ

ದಕ್ಷಿಣ ಭಾರತದ ಸಿನಿ ಅವಾರ್ಡ್​ ಫಂಕ್ಷನ್​ನಲ್ಲಿ ರಣವೀರ್​ ಸಿಂಗ್​ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಇದರ ವಿಡಿಯೋ ವೈರಲ್ ಆಗಿದೆ.
 

Ranveer Singh stunned everyone by speaking in Kannada   video has gone viral suc
Author
First Published Sep 10, 2024, 12:02 PM IST | Last Updated Sep 10, 2024, 12:02 PM IST

ಸದ್ಯ ಬಾಲಿವುಡ್​ ಕ್ಯೂಟ್​ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರದ್ದೇ ಸುದ್ದಿ. ಮೊನ್ನೆಯಷ್ಟೇ ಈ ಜೋಡಿ ಅಪ್ಪ-ಅಮ್ಮ ಆಗಿದ್ದಾರೆ. ಹೆಣ್ಣುಮಗುವಿಗೆ ದೀಪಿಕಾ ಜನ್ಮ ಕೊಟ್ಟಿದ್ದಾರೆ. ಇದರ ನಡುವೆಯೇ ರಣವೀರ್​ ಸಿಂಗ್​ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಹಳೆಯ ವಿಡಿಯೋ ಇದಾಗಿದ್ದು, ಪುನಃ ಇದು ವೈರಲ್​ ಆಗಿದೆ. ರಣವೀರ್​ ಸಿಂಗ್​ ಅಪ್ಪ ಆದ ಬೆನ್ನಲ್ಲೇ ಇವರ ಹಳೆಯ ವಿಡಿಯೋಗಳೆಲ್ಲಾ ಮತ್ತೆ ಸೋಷಿಯಲ್​ ಮೀಡಿಯಾಗಳಲ್ಲಿ ಮೇಲಕ್ಕೆ ಬರುತ್ತಿದ್ದು, ಅವುಗಳಲ್ಲಿ ಇದು ಕೂಡ ಒಂದು.

ಈ ವಿಡಿಯೋದಲ್ಲಿ ಆ್ಯಂಕರ್​ ಅಕುಲ್​ ಬಾಲಾಜಿ ಅವರು ರಣವೀರ್​ ಸಿಂಗ್​ ಅವರಿಗೆ ಕನ್ನಡ ಹೇಳಿಕೊಡುವುದನ್ನು ನೋಡಬಹುದು. ನಾನು ಕನ್ನಡದಲ್ಲಿ ಹೇಳುತ್ತೇನೆ, ಅದನ್ನೇ ನೀವೂ ಹೇಳಿ ಎಂದು ಅಕುಲ್​ ಹೇಳಿದ್ದಾರೆ. ಮೊದಲಿಗೆ ಅಕುಲ್​ ಓ ನನ್ನ ದೀಪಿಕಾ ಎಂದಿದ್ದಾರೆ, ಅದನ್ನೇ ರಣವೀರ್​ ರಿಪೀಟ್​ ಮಾಡಿದ್ದಾರೆ. ನಂತರ ಓ ನನ್ನ ದೀಪಿಕಾ ಎಂದಿದ್ದಾರೆ. ಆದರೆ ಇದು ಯಾಕೋ ನೆಗೆಟಿವ್​ ರೀತಿ ರಣವೀರ್​ ಅವರಿಗೆ ಅನ್ನಿಸಿರಬೇಕು. ಇದನ್ನು ಹೇಳಲ್ಲ ಹೇಳಲ್ಲ ಎಂದು ಪಟ್ಟು ಹಿಡಿದರು. ನಂತರ ಅಕುಲ್​ ಇದರಲ್ಲಿ ಆ ರೀತಿ ಯಾವುದೂ ಇಲ್ಲ ಎಂದು ಸಮಾಧಾನಪಡಿಸಿದರು. ಅದಕ್ಕೆ ರಣವೀರ್​, ಬ್ರದರ್​ ನಾನು ಮನೆಗೆ ಹೋಗಬೇಕು ಗೊತ್ತಾಯ್ತಾ ಎಂದು ಹೇಳಿದರು. ನಂತರ ಅಕುಲ್​ ಅದರ ಅರ್ಥ ಹೇಳಿದಾಗ,  ರಣವೀರ್​ ಓ ನನ್ನ ದೀಪಿಕಾ ಎಂದು ಸ್ಪಷ್ಟವಾಗಿಯೇ ಕನ್ನಡದಲ್ಲಿ ನುಡಿದರು.

ಕನ್ಯಾ ರಾಶಿಯಲ್ಲಿ ಹುಟ್ಟಿರೋ ದೀಪಿಕಾ-ರಣವೀರ್‌ ಪುತ್ರಿ ಭವಿಷ್ಯ ಹೀಗಿರಲಿದೆಯಂತೆ!

ನಂತರ ದೀಪಿಕಾ, ಓ ನನ್ನ ದೀಪಿಕಾ, ನೀನೇ ನನ್ನ ಜೀವನದ ದೀಪಾ ಎಂದರು. ಇಷ್ಟು ಹೇಳುತ್ತಿದ್ದಂತೆಯೇ ಇದರ ಅರ್ಥವನ್ನು ರಣವೀರ್​ ಸರಿಯಾಗಿ ಗುರುತಿಸಿಬಿಟ್ಟರು, ಇದರ ಅರ್ಥವನ್ನು ಇಂಗ್ಲಿಷ್​ನಲ್ಲಿ ಸರಿಯಾಗಿ ಹೇಳಿದಾಗ, ಎಲ್ಲೆಡೆ ಚಪ್ಪಾಳೆಗಳ ಸುರಿಮಳೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದರೂ ಅದರಲ್ಲಿ ಸ್ಪಷ್ಟತೆ ಇರುವುದನ್ನು ಕಂಡ ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣಗಿಂತಲೂ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ ಎಂದು ಹಲವರು ಕಮೆಂಟ್​  ಮೂಲಕ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಯಶ್​, ಮಾಲಾಶ್ರಿ ಎಲ್ಲರೂ ರಣವೀರ್​ ಕನ್ನಡ ನೋಡಿ ಖುಷಿ ಪಟ್ಟರು. SIIMA ದಕ್ಷಿಣ ಭಾರತದ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಘಟನೆ ನಡೆದಿದೆ. 

ಅಂದಹಾಗೆ ದೀಪಿಕಾ ಪಡುಕೋಣೆಗೂ ಕರ್ನಾಟಕಕ್ಕೂ ನಂಟಿದೆ. ಇವರು ಹುಟ್ಟಿದ್ದು ಡೆನ್ಮಾರ್ಕ್​ ಆದರೂ, ದೀಪಿಕಾ ತಂದೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ ಪಡುಕೋಣೆ ಮಂಗಳೂರಿನವರು. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು ದೀಪಿಕಾ. 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ `ಐಶ್ವರ್ಯ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಅದೇ ವರ್ಷ ಶಾರುಖ್ ಖಾನ್ ಅಭಿನಯದ `ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆಮೇಲೆ ಬಾಲಿವುಡ್​ನಲ್ಲಿಯೇ ನೆಲೆಯೂರಿದ್ದು, ಕಳೆದ ವರ್ಷ ಒಂದರ ಮೇಲೊಂದು ಬ್ಲಾಕ್​ಬಸ್ಟರ್​ ಚಿತ್ರ ಕೊಟ್ಟರು. ದೀಪಿಕಾ   ತುಳು ಕೂಡ ಮಾತನಾಡಬಲ್ಲರು, ಏಕೆಂದರೆ ಅವರ ಮಾತೃಭಾಷೆ ತುಳು. 

ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

 
 
 
 
 
 
 
 
 
 
 
 
 
 
 

A post shared by Asimiii (@asim000071)

Latest Videos
Follow Us:
Download App:
  • android
  • ios