ತಮಿಳಿನ ವಿಕ್ರಮ್‌ ನಟಿಸಿ ಸೂಪರ್‌ಹಿಟ್‌ ಆಗಿದ್ದ ‘ಅನ್ನಿಯನ್‌’ ಸಿನಿಮಾ ಹೊಸ ರೂಪದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಬರಲಿದೆ. 

ಶಂಕರ್‌ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ವೀರ್‌ ಸಿಂಗ್‌ ನಟಿಸಲಿದ್ದಾರೆ. 2022ರ ಮಧ್ಯಭಾಗದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ವಿಚಾರವನ್ನು ಖುದ್ದು ಶಂಕರ್‌ ಘೋಷಿಸಿದ್ದಾರೆ.

ಈ ಬಾಲಿವುಡ್ ತಾರೆಯರು ಜೊತೆಯಾಗಿ ನಟಿಸಲು ಬಿಲ್‌ಕುಲ್ ಒಪ್ಪೊಲ್ಲ! ..

ಯಶ್‌ ಮುಂದಿನ ಸಿನಿಮಾವನ್ನು ಶಂಕರ್‌ ನಿರ್ದೇಶನ ಮಾಡಲಿದ್ದಾರೆ ಎಂಬ ಗಾಸಿಪ್‌ ಇತ್ತೀಚೆಗೆ ಹರಡಿತ್ತು.

ಶಂಕರ್‌ ನೀಡಿರುವ ಹೊಸ ಸುದ್ದಿಯಿಂದ ಆ ಗಾಸಿಪ್‌ಗೆ ಬೆಲೆ ಇಲ್ಲವಾಗಿದೆ. ‘ರಣ್‌ವೀರ್‌ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಶಂಕರ್‌ ಹೇಳಿದ್ದಾರೆ.