ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಅವರಿಗೆ ಸೌತ್ ಸುಂದರಿ ತಮನ್ನಾ ಭಾಟಿಯಾ ಬಬ್ಲಿ ಬೌನ್ಸರ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾ ಬೌನ್ಸರ್ ಆಗಿರುವುದರಿಂದ ತಾನು ಸುರಕ್ಷಿತ ಎಂದು ರಣ್ವೀರ್ ಹೇಳಿದ್ದಾರೆ. 

ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಅವರಿಗೆ ಸೌತ್ ಸುಂದರಿ ತಮನ್ನಾ ಭಾಟಿಯಾ ಬಬ್ಲಿ ಬೌನ್ಸರ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮನ್ನಾ ಬೌನ್ಸರ್ ಆಗಿರುವುದರಿಂದ ತಾನು ಸುರಕ್ಷಿತ ಎಂದು ರಣ್ವೀರ್ ಹೇಳಿದ್ದಾರೆ. ಅಂದಹಾಗಿ ರಣ್ವೀರ್ ಮತ್ತು ತಮನ್ನಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟಿ ತಮನ್ನಾ ಅವರನ್ನು ರಣ್ವೀರ್ ಸಿಂಗ್ ಮತ್ತು ನಿರ್ದೇಶಕ ಮಧುರ್ ಭಂಡಾರ್ಕರ್ ತಬ್ಬಿಕೊಂಡಿರುವ ವಿಡಿಯೋವನ್ನು ಮಿಲ್ಕಿ ಬ್ಯೂಟಿ ಶೇರ್ ಮಾಡಿದ್ದಾರೆ. ಇನ್ನು ರಣ್ವೀರ್ ಸಿಂಗ್ ಕೂಡ ವಿಡಿಯೋ ಶೇರ್ ಮಾಡಿ ಬಬ್ಲಿ ಬೌನ್ಸರ್ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ. 

ಈ ಬಗ್ಗೆ ರಣ್ವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು 'ಬಬ್ಲಿ ಬೌನ್ಸರ್ ಇಲ್ಲಿರುವುದರಿಂದ ನನಗೆ ರಕ್ಷಣೆ ಸಿಕ್ಕಿದೆ' ಎಂದು ಹೇಳಿದ್ದಾರೆ. ಇದಕ್ಕೆ ತಮನ್ನಾ 'ನಾನು ನಿನ್ನನ್ನು ಹೃದಯದಿಂದ ರಕ್ಷಣೆ ಮಾಡುತ್ತೇನೆ' ಎಂದು ಹೇಳಿದ್ದಾರೆ. ಇಬ್ಬರ ಮಾತುಕತೆ ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟಕೂ ಏನಿದು ಬಬ್ಲಿ ಬೌನ್ಸರ್ ಕಥೆ ಅಂತೀರಾ ತಮನ್ನಾ ನಟನೆಯ ಹೊಸ ಸಿನಿಮಾ. ಬಾಲಿವುಡ್ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈ ಸಿನಿಮಾಗೆ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಸಾಥ್ ನೀಡಿದ್ದಾರೆ. 

ಚಪ್ಪಲಿ ತೆಗೆದಿಟ್ಟು ದೀಪ ಬೆಳಗಿಸಿದ ತಮನ್ನಾ; ದಕ್ಷಿಣ ಭಾರತ ಕಲಿಸಿದ ಪಾಠ ಎಂದ ನೆಟ್ಟಿಗರು

ಇತ್ತೀಚಿಗಷ್ಟೆ ಬಬ್ಲಿ ಬೌನ್ಸರ್ ಸಿನಿಮಾದ ಟ್ರೈಲರ್ ರಿಲೀಸ್ ಬಿಡುಗಡೆಯಾಗಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಣ್ವೀರ್ ಸಿಂಗ್ ಹಾಜರಾರಿದ್ದರು. ಅಂದಹಾಗೆ ಹಾಗೆ ಬಬ್ಲಿ ಬೌನ್ಸರ್ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದೇ ತಿಂಗಳು ಸೆಪ್ಟಂಬರ್ 23ರಂದು ಬಬ್ಲಿ ಬೌನ್ಸರ್ ಸಿನಿನಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಂದಹಾಗೆ ಈ ಸಿನಿಮಾ ಹಿಂದಿ ಜೊತೆಗೆ ತೆಲುಗು, ತಮಿಳಿನಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ಈ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆದೂ ಕಾಣದ ಅವತಾರದಲ್ಲಿ ತಮನ್ನಾ ಮಿಂಚಿದ್ದಾರೆ.

View post on Instagram

ಹಸಿರು ಬಣ್ಣದ ಸೂಟ್‌ ಧರಿಸಿ ರಾತ್ರಿ ಏರ್‌ಪೋರ್ಟ್‌ಗೆ ಬಂದ ತಮನ್ನಾ; ಬೇರೆ ಬಟ್ಟೆ ಇಲ್ವಾ?

ಇನ್ನು ತಮನ್ನಾ `ಗುರ್ತುಂಡ ಸೀತಕಲ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಕೂಡ ಅದೇ ದಿನ ಸೆಪ್ಟೆಂಬರ್ 23 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ ಈ ಸಿನಿಮಾಗೆ ಕನ್ನಡ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು ರೊಮ್ಯಾಂಟಿಕ್ ಡ್ರಾಮಾವಾಗಿದ್ದು, ದಕ್ಷಿಣದ ನಟ ಸತ್ಯ ದೇವ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.