ನವದೆಹಲಿ (ಮೇ  28)  ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ರೀತಿ ಜೋಕ್ ಮಾಡಿದ  ನಟ ರಂದೀಪ್ ಹೂಡಾ ಅವರನ್ನು ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್) ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ.

ಒಂಭತ್ತು ವರ್ಷಗಳ ಹಿಂದಿನ ವಿಡಿಯೋ ವೈರಲ್ ಆಗಿದ್ದು ಹೂಡಾ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. 2012 ರಲ್ಲಿ ಮೀಡಿಯಾ ಹೌಸ್ ಆಯೋಜಿಸಿದ್ದ ಈವೆಂಟ್‌ನ 43 ಸೆಕೆಂಡುಗಳ ಕ್ಲಿಪ್  ವಿವಾದ ಎಬ್ಬಿಸಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆ ಹೂಡಾ ವಿರುದ್ಧ  ತಕ್ಷಣ ಕ್ರಮ ತೆಗೆದುಕೊಂಡಿದೆ.  ,ಹೂಡಾ ಇನ್ನು ಮುಂದೆ ಸಿಎಮ್ಎಸ್ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ" ಎಂದು ಅದು ಹೇಳಿದೆ.

ನಲವತ್ತರ ಮಹಿಳೆಯರು ಗಂಡನಿಂದ ಬಯಸುವುದು ಏನು?

ಫೆಬ್ರವರಿ 2020 ರಲ್ಲಿ ಮೂರು ವರ್ಷಗಳ ಕಾಲ ವಲಸೆ ಪ್ರಭೇದಗಳ ಸಿಎಮ್ಎಸ್ ರಾಯಭಾರಿಯಾಗಿ  ರಣದೀಪ್ ಹೂಡಾ ಅವರನ್ನು ನೇಮಿಸಲಾಗಿತ್ತು. ಹೂಡಾ ನಡವಳಿಕೆ ಮಿತಿಮೀರಿದ್ದು ಕ್ಷಮೆ ಕೇಳಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು. 
 
ಉತ್ತರ ಪ್ರದೇಶದ ಮಾಜಿ ಸಿಎಂ, ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಅವರಿಗೆ ಅವಹೇಳನ ಮಾಡಿದ್ದನ್ನು ಖಂಡಿಸಲಾಗಿತ್ತು. ಟಿವಿ ಶೋ ಒಂದರಲ್ಲಿ ಹೂಡಾ ಮಾಯಾವತಿ ಹೆಸರು ತೆಗೆದುಕೊಂಡು ಮಾತನಾಡಿದ್ದರು.