Asianet Suvarna News Asianet Suvarna News

ಮನರಂಜನಾ ಕ್ಷೇತ್ರದ ದಿಗ್ಗಜ ರಾಮೋಜಿ ರಾವ್ ನಿಧನ

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ 87 ಇಂದು, ಶನಿವಾರ ( 08 June 2024)ನಿಧನರಾಗಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾಮೋಜಿ ರಾವ್ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

Ramoji Rao passed away on 08 June 2024 in Hyderabad srb
Author
First Published Jun 8, 2024, 8:33 AM IST

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ 87 ಇಂದು, ಶನಿವಾರ ( 08 June 2024)ನಿಧನರಾಗಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾಮೋಜಿ ರಾವ್ (Ramoji Rao) ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ರಾಮೋಜಿ ಫಿಲ್ಮ್ ಸಿಟಿ ಹಾಗೂ ಮನರಂಜನಾ ಹಾಗೂ ಮಾಧ್ಯಮ ಸಮೂಹ ಸಂಸ್ಥೆಗಳ ಮೂಲಕ ರಾಮೋಜಿ ರಾವ್ ಅವರು ತುಂಬಾ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ಹೃದಯ ಸಮಸ್ಯೆಗೆ ಒಳಗಾಗಿದ್ದ ಅವರಿಗೆ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. 

ಚಿತ್ರರಂಗದ ಹಲವು ಗಣ್ಯರು, ರಾಜಕೀಯ ಧುರೀಣರು ಸೇರಿದಂತೆ ಹಲವರು ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಈ ನಾಡು, ಈ ಟಿವಿ ಭಾರತ್, ಮಾರ್ಗದರ್ಶಿ ಚಿಟ್ ಫಂಡ್ ಮುಂತಾದ ಸಂಸ್ಥೆಗಳು ರಾಮೋಜಿ ರಾವ್ ಒಡತನದಲ್ಲಿವೆ. ಈ ಟಿವಿ ಕನ್ನಡ ಕೂಡ ಈ ಹಿಂದೆ ಅವರದೇ ಒಡೆತನದಲ್ಲಿತ್ತು. ರಾಮೋಜಿ ರಾವ್ ಅವರು ಹಲವು ಸಾಮಾಜಿಕ ಸೇವೆಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು. 

ಕುಕೀ, ಮುಂದಿನ ಜನ್ಮದಲ್ಲೂ ನಾನೇ ನಿನ್ ಹೆಂಡ್ತಿಯಾಗ್ಬೇಕಾ? ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗ್ ಕಾಟ ಕೊಡೋಕೆ!

ರಾಮೋಜಿ ರಾವ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲಿ ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸೇರಿಕೊಂಡಿದ್ದರು. ಅವರಿಗೆ ಹೃದಯದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇತ್ತೀಚೆಗಷ್ಟೇ ಅವರ ಹೃದಯ ರಕ್ತನಾಳಕ್ಕೆ ಸ್ಟೆಂಟ್ ಅಳವಡಿಸಲಾಗಿತ್ತು. ಅದರೆ. ದಿನದಿನಕ್ಕೂ ಅವರ ಆರೋಗ್ಯದಲ್ಲಿ ಬಹಳಷ್ಟು ಏರುಪೇರು ಕಾಣಿಸಿಕೊಳ್ಳುತ್ತಲೇ ಇತ್ತು ಎನ್ನಲಾಗಿದೆ. ಇಂದು ಮುಂಜಾನೆ ಅವರು ಇಹಲೋಕ ತ್ಯಜಿಸಿದ್ದಾರೆ. 

ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?

ಅಂದಹಾಗೆ, ರಾಮೋಜಿ ರಾವ್ ಅವರ ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳ ಸಿನಿಮಾಗಳ ಶೂಟಿಂಗ್ ಪ್ರತಿನಿತ್ಯ ನಡೆಯುತ್ತವೆ. ಡಬ್ಬಿಂಗ್ ಸ್ಟೂಡಿಯೋ ಸೌಲಭ್ಯ ಸೇರಿದಂತೆ ಅಲ್ಲಿ ಎಲ್ಲವೂ ಇದೆ. ತೆಲುಗಿನ ಹೆಚ್ಚು ಸಿನಿಮಾಗಳು ಶೂಟ್ ಆಗುವುದು ಈ ರಾಮೀಜಿ ಫಿಲಂ ಸಿಟಿಯಲ್ಲಿಯೇ ಎನ್ನುವುದು ವಿಶೇಷ. ಈ ರಾಮೋಜಿ ಫಿಲಂ ಸಿಟಿಗೆ ಭೇಟಿ ಕೊಟ್ಟರೆ ದಿನಂಪ್ರತಿ ಹಲವಾರು ಸಿನಿಮಾ ಶೂಟಿಂಗ್‌ಗಳು ಹಾಗೂ ಶೂಟಿಂಗ್ ಸೆಟ್‌ಗಳು ಕಣ್ಣಿಗೆ ಗೋಚರಿಸುತ್ತಲೇ ಇರುತ್ತವೆ. ಒಟ್ಟಿನಲ್ಲಿ, ಇದೀಗ, ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳು ಇವೆ, ಆದರೆ ಅದರ ಮಾಲೀಕರು ಇನ್ನಿಲ್ಲವಾಗಿದ್ದಾರೆ. 

Latest Videos
Follow Us:
Download App:
  • android
  • ios