Asianet Suvarna News Asianet Suvarna News

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಖರೀದಿಸಿದ ರಾಮ್‌ಚರಣ್‌ ಪತ್ನಿ ಉಪಾಸನಾ!

ಎಲೆಕ್ಟ್ರಿಕ್‌ ಕಾಡಿಗೆ ಕೋಟಿ ರೂಪಾಯಿ ಕೊಟ್ಟಿದ್ದಕ್ಕೆ ಟ್ರೋಲ್ ಆದ ರಾಮ್‌ ಚರಣ್ ಪತ್ನಿ. ಹೊಸ ಕಾರಿನ ಫೋಟೋ ಹಂಚಿಕೊಂಡ ನಟ...

Ram Charan wife Upasana Konidela buys audi etron electric car vcs
Author
Bangalore, First Published Jul 31, 2022, 3:55 PM IST

ಟಾಲಿವುಡ್ ಸ್ಟಾರ್ ರಾಮ್‌ಚರಣ್‌ ಸಿನಿಮಾ ಮೂಲಕ ಎಷ್ಟು ಜನಪ್ರಿಯತೆ ಪಡೆದಿದ್ದಾರೆ ಅಷ್ಟೇ ಜನಪ್ರಿಯತೆಯನ್ನು ಪತ್ನಿ ಉಪಾಸನಾ ಕೊನಿಡೆಲಾ ಸಮಾಜ ಸೇವೆ ಮೂಲಕ ಗಳಿಸಿದ್ದಾರೆ. ಉದ್ಯಮಿಯಾಗಿರುವ ಉಪಾಸನಾ ಟಾಪ್ ಮೋಸ್ಟ್‌ ಸಿರಿವಂತ ಮಹಿಳೆಯರ ಪಟ್ಟಿಯಲ್ಲಿದ್ದು ನೂರಾರು ಅವಾರ್ಡ್‌ಗಳನ್ನು ಗೆದ್ದಿದ್ದಾರೆ. ಯಾವ ನಟಿಗೂ ಕಡಿಮೆ ಇಲ್ಲದಷ್ಟು ದುಬಾರಿ ಔಟ್‌ಫಿಟ್‌, ಬ್ಯಾಗ್ ಮತ್ತು ಕಾರುಗಳನ್ನು ಬಳಸುತ್ತಾರೆ. ತಿಂಗಳ ಕೊನೆಯಲ್ಲಿ ಹೇಗಪ್ಪಾ ಜೀವನ ಎಂದು ಜನರು ಯೋಚನೆ ಮಾಡುತ್ತಿರುವಾಗ ಉಪಾಸನಾ ಐಷಾರಾಮಿ ಕಾರು ಖರೀದಿಸಿದ್ದಾರೆ. 

'ಪ್ರಪಂಚದಲ್ಲಿ ನಿಮಿಷಕ್ಕೊಂದು ಅಪ್‌ಡೇಟ್ ಅಗುತ್ತಿರುವಾಗ ನಾನು ಕೂಡ ಅಪ್ಗ್ರೇಡ್‌ ಆಗಲು ಮುಂದಾಗಿರುವೆ. ಹೀಗಾಗಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರನ್ನು ಖರೀದಿಸಿರುವೆ. ನನ್ನ ಜೊತೆಗಿರುವ ಬೆಸ್ಟ್‌ ಕಂಪನಿ ಇದಾಗಿರಲಿದೆ' ಎಂದು ಉಪಾಸನಾ ಬರೆದುಕೊಂಡಿದ್ದಾರೆ. ಬ್ರೈಟ್‌ ಕೆಂಪು ಬಣ್ಣದ ಕಾರಿನ ಮುಂದೆ ಬ್ರೈಟ್‌ ಗ್ರೀನ್‌ ಮ್ಯಾಕ್ಸಿ ಧರಿಸಿ ಪೋಸ್‌ ಕೊಟ್ಟಿದ್ದಾರೆ. 

ಅಂದಹಾಗೆ ಉಪಾಸನಾ ಖರೀದಿ ಮಾಡಿರುವ ಕಾರಿನ ಬೆಲೆ 1.60 ಕೋಟಿ ರೂ. 

Ram Charan wife Upasana Konidela buys audi etron electric car vcs

ಕಾರಿನ ವಿಶೇಷತೆಗಳು:

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್ಯುವಿ ಎರಡು ವೇರಿಯಂಟ್ಗಳಲ್ಲಿ ಲಭ್ಯವಿದೆ, ಆಡಿ ಇ-ಟ್ರಾನ್ 50 ಮತ್ತು ಆಡಿ ಇ-ಟ್ರಾನ್ 55, ಕ್ರಮವಾಗಿ 1.01 ಕೋಟಿ ರೂ. ಮತ್ತು ರೂ. 1.17 ಕೋಟಿ ರೂ. (ಶೋರೂಂ ದರ) ದರ ಹೊಂದಿದೆ. ಆಡಿ ಇ-ಟ್ರಾನ್ ಸ್ಪೋರ್ಟ್ಬ್ಯಾಕ್ ಎಂಬ ಎಸ್ಯುವಿ ಕೂಪ್ ವೇರಿಯಂಟ್ ಕೂಡ ಭಾರತದಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ 1.19 ಕೋಟಿ ರೂ. (ಶೋ ರೂಂ ದರ). ಆಡಿ ಇ-ಟ್ರಾನ್ 50 ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟಾರ್ಗಳಿಂದ 313bhp  ಪವರ್ ಉತ್ಪಾದಿಸುತ್ತದೆ. ಇವುಗಳು ಕಾರನ್ನು 6.8 ಸೆಕೆಂಡ್ಗಳಲ್ಲಿ ಶೂನ್ಯದಿಂದ ನೂರು ಕಿಮೀ ವರೆಗೆ ವೇಗ ಹಾಗು 190 ಕಿಮೀ ವೇಗ ಚಲನೆಯ ವಿಸ್ತರಿಸುವ ಸಾಮರ್ಥ್ಯ ಹೊಂದಿವೆ. ಇದು 71kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಚಾರ್ಜ್ಗೆ ಇದು 264-379km ಚಲಿಸಬಲ್ಲದು. ಆಡಿ ಇ-ಟ್ರಾನ್ (Audi e-Tron) 55 408bhp ಯ ಹೆಚ್ಚು ಶಕ್ತಿಶಾಲಿ ಉತ್ಪಾದನೆಯೊಂದಿಗೆ ಬರುತ್ತದೆ, ದೊಡ್ಡ 95kWh ಬ್ಯಾಟರಿಯೊಂದಿಗೆ 359-484km ವ್ಯಾಪ್ತಿಯನ್ನು ಒದಗಿಸುತ್ತದೆ. ಈ ಕಾರು 5.7 ಸೆಕೆಂಡ್ಗಳಲ್ಲಿ 0-100kmph ವೇಗ ಹೆಚ್ಚಿಸಬಲ್ಲದು.

30 ನಿಮಿಷದಲ್ಲಿ 1 ಲಕ್ಷ ಕಾರು ಬುಕಿಂಗ್, ಹೊಸ ದಾಖಲೆ ಬರೆದ ನೂತನ ಮಹೀಂದ್ರ ಸ್ಕಾರ್ಪಿಯೋ!

200 ಕೋಟಿ ರೂ. ಆಸ್ತಿ:

ನಟಿ ಜೀವಿತಾ ರಾಜಶೇಖರ್ ತಮ್ಮ 200 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಮಾರಲು ಮುಂದಾಗಿದ್ದಾರೆ. ಮಾರಲು ಚದರ ಅಡಿಗೆ 15,000 ರೂಪಾಯಿ ಎಂದು ಬೆಲೆ ಕಟ್ಟಿದ್ದಾರೆ. ಆದರೆ ಫೀನಿಕ್ಸ್ ಗ್ರೂಪ್‌ ಕೂಡ ಈ ಆಸ್ತಿಯಲ್ಲಿ ಶೇರ್ ಹೊಂದಿದೆ. ಹೀಗಾಗಿ ಯಾರು ಖರೀದಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಆಸ್ತಿ ಪಕ್ಕದಲ್ಲಿ ಫೀನಿಕ್ಸ್ ಅವರ ಕಟ್ಟಡವೂ ಇದೆ. ಆಸ್ತಿ ಮಾರಬೇಕೆಂದರೆ ಅಲ್ಲಿ ಬಾಡಿಗೆ ಇರುವವರು ಮೊದಲು ಖಾಲಿ ಮಾಡಬೇಕು ಆನಂತರ ಸಾಕಷ್ಟು ವ್ಯವಹಾರಗಳು ಮುಗಿಯಬೇಕಿದೆ. 

ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹೊಸ ಕಾರುಗಳ ಬಿಡುಗಡೆ

ಉಪಾಸನಾ ಬಳಿ ಅಷ್ಟೊಂದು ಹಣ ಇದ್ಯಾ? 

ಅಪೋಲೋ ಆಸ್ಪತ್ರೆಯ ಒಡೆಯರಾಗಿರುವ ಅನಿಲ್ ಕಾಮೆನೇನಿ ಅವರ ಪುತ್ರಿ ಉಪಾಸನಾ. ಲಂಡನ್ ವಿಶ್ವವಿದ್ಯಾಲಯದ ಪದವೀಧರೆ. ವಿದ್ಯಾಭ್ಯಾಸದ ನಂತರ ಅಫೋಲೋ ಆಸ್ಪತ್ರೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.  ಚಿರಂಜೀವಿ ಪುತ್ರ ರಾಮ್ ಚರಣ್ ಜೊತೆ ವಿವಾಹವಾದ ಬಳಿ ಸಿನಿಮಾ ಕ್ಷೇತ್ರದಲ್ಲಿ ತೊಡಿಗಿಸಿಕೊಂಡರು. ಸೆಲೆಬ್ರಿಟಿಗಳ ಜೊತೆ ಕೆಲವು ಅಡುಗೆ, ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ತಮ್ಮದೇ ಯುಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೋ ಮಾಡುತ್ತಾರೆ. ಬಿ ಪಾಸಿಟಿವ್ ಮ್ಯಾಗಜೀನ್ ಸಂಪಾದಕಿಯೂ ಆಗಿದ್ದಾರೆ.  ಸುಮಾರು 50 ಮಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದಾರೆ.


 

Follow Us:
Download App:
  • android
  • ios