ಮೆಗಾಸ್ಟಾರ್ ಮೊಮ್ಮಗಳು ಮಲಗುವ ಸ್ಥಳ ಹೇಗಿದೆ? ರಾಮ್ ಚರಣ್ ಮತ್ತು ಉಪಸನಾ ಮುದ್ದಾದ ಮಗಳಿಗಾಗಿ ವಿಶೇಷದ ರೂಮ್ ಅನ್ನು ಸಿದ್ಧಗೊಳಿಸಲಾಗಿದೆ. 

ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಇತ್ತೀಚಿಗಷ್ಟೆ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜೂನ್ 20ರಂದು ಬೆಳಗ್ಗೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸ್ಟಾರ್ ದಂಪತಿ ತಮ್ಮ ಮಗುವಿನ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳುವ ಫೋಟೋಗಳು ವೈರಲ್ ಆಗಿತ್ತು. ಈಗಾಗಲೇ ಮಗಳಿಗೆ ನಾಮಕರಣ ಶಾಸ್ತ್ರ ಕೂಡ ಮಾಡಿ ಮುಗಿಸಿದ್ದಾರೆ. ಅಂದಹಾಗೆ ಮಗಳಿಗೆ 'ಕ್ಲಿನ್ ಕಾರ ಕೊನಿಡೆಲಾ' ಎಂದು ಹೆಸರಿಟ್ಟಿದ್ದಾರೆ. 

'ಕ್ಲಿನ್ ಕಾರಾ' ಎಂದರೆ ದೈವಿಕ ತಾಯಿ ಶಕ್ತಿ ಎನ್ನುವ ಅರ್ಥವಿದೆ. ಅಂದಹಾಗೆ ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. 'ಕ್ಲಿನ್ ಕಾರ' ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ 'ಶಕ್ತಿ'ಯ ಪರಮ ಶಕ್ತಿಯನ್ನು ಆವರಿಸುತ್ತದೆ. ಮತ್ತು ಶಕ್ತಿಯುತವಾದ ಕಂಪನವನ್ನು ಹೊಂದಿದೆ ಎಂದು ಚಿರು ಕುಟುಂಬ ಬಹಿರಂಗ ಪಡಿಸಿದೆ. 

ಅಸ್ಪತ್ರೆಯಿಂದ ಮನೆಗೆ ತೆರಳಿದ ಉಪಾಸನಾ: ಮಗು ಮುಚ್ಚಿಕೊಂಡು ಹೊರಬಂದ ರಾಮ್ ಚರಣ್ ದಂಪತಿ

ಇದೀಗ ಚಿರಂಜೀವಿ ಮೊಮ್ಮಗಳು ಮಲಗುವ ರೂಮ್ ಹೇಗಿದೆ ಎಂದು ಬಹಿರಂಗವಾಗಿದೆ. ರಾಮ್ ಚರಣ್ ಮಗಳಿಗಾಗಿ ವಿಶೇಷ ರೂಮ್ ಸಿದ್ಧಪಡಿಸಲಾಗಿದೆ. ಸಂಪೂರ್ಣ ರೂಮ್ ಗ್ರೇ ಮತ್ತು ಬಿಳಿ ಬಣ್ಣದಿಂದ ತಯಾರಿಸಲಾಗಿದೆ. ರೂಮಿನ ಗೋಡೆಯ ಮೇಲೆ ಕಾಡಿನ ಚಿತ್ರದ ಪೋಸ್ಟರ್‌ಗಳನ್ನು ಹಾಕಲಾಗಿದೆ. ರೂಮನ್ನು ವಿಶೇಷವಾಗಿ ತಯಾರಿಸಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಪೋಸ್ಟರ್‌ಗಳಲ್ಲಿ ಕಾಡು ಪ್ರಾಣಿಗಳು, ಹಣ್ಣು, ಮರಗಿಡಗಳಿದ್ದು ಆಕರ್ಷವಾಗಿವೆ. ಜೊತೆಗೆ ತರಹೇವಾರಿ ಬೊಂಬೆಗಳನ್ನು ಇಡಲಾಗಿದೆ. ವಿಶೇಷವಾಗಿ ತಯಾರಾದ ರೂಮಿನಲ್ಲಿ ಉಪಾಸನಾ ಮುದ್ದಾದ ಮಗಳು ಮಲಗುತ್ತಿದ್ದಾಳೆ.

View post on Instagram

ಮಗಳಿಗೆ 'ಕ್ಲಿನ್ ಕಾರ' ಎಂದು ನಾಮಕರಣ ಮಾಡಿದ ರಾಮ್ ಚರಣ್-ಉಪಾಸನಾ; ಏನಿದರ ಅರ್ಥ?

ಉಪಾಸನಾ ಮತ್ತು ರಾಮ್ ಚರಣ್ ಮದುವೆಯಾಗಿ 11 ವರ್ಷಗಳ ಬಳಿಕ ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿ 2012 ರಲ್ಲಿ ಜೂನ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉಪಾಸನಾ ಗರ್ಭಿಣಿಯಾಗಿರುವ ವಿಚಾರವನ್ನು ಡಿಸೆಂಬರ್‌ನಲ್ಲಿ ಬಹಿರಂಗ ಪಡಿಸಿರುವ ಮೂಲಕ ಸಂತೋಷದ ವಿಚಾರ ಹಂಚಿಕೊಂಡಿದ್ದರು. ಮನೆಗೆ ಮೊಮ್ಮಗಳು ಬಂದ ಖುಷಿಯನ್ನು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂಭ್ರಮಿಸಿದ್ದರು. ಲಿಟ್ಲ್ ಪ್ರಿನ್ಸ್ ಎಂದು ನಟ ಚಿರಂಜೀವಿ ಬಣ್ಣಿಸಿದ್ದರು. 'ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸುಸ್ವಾಗತ. ನಿನ್ನ ಆಗಮನಿಂದ ಲಕ್ಷಾಂತರ ಮೆಗಾ ಕುಟುಂಬದಲ್ಲಿ ಉತ್ಸಾಹ ತುಂಬಿದ್ದಿಯಾ. ನೀನು ಪೋಷಕರಾದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಮತ್ತು ನಾವು ಅಜ್ಜ-ಅಜ್ಜಿಯರಿಗೆ ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡಿದ್ದೀಯಾ' ಎಂದು ಪೋಸ್ಟ್ ಶೇರ್ ಮಾಡಿದ್ದರು.