ಟಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನಟಿ ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಡ್ರಗ್ಸ್ ಪ್ರಕರಣದಲ್ಲಿ ರಾಕುಲ್ ಅವರಿಗೆ ಮತ್ತೊಮ್ಮೆ ಸಮನ್ಸ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಟಾಲಿವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನಟಿ ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಡ್ರಗ್ಸ್ ಪ್ರಕರಣದಲ್ಲಿ ರಾಕುಲ್ ಅವರಿಗೆ ಮತ್ತೊಮ್ಮೆ ಸಮನ್ಸ್ ನೀಡಿರುವುದು ಅಚ್ಚರಿ ಮೂಡಿಸಿದೆ. ಈಗಾಗಲೇ ಸೆಪ್ಟೆಂಬರ್ 3, 2021 ರಂದು ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.
ಅವರ ಜೊತೆಗೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರನ್ನೂ ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆಗೆ ಕರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ED ಮಾದಕವಸ್ತು ಕಳ್ಳಸಾಗಣೆ ಮತ್ತು ಸೇವನೆಯ ಪ್ರಕರಣವನ್ನು ತನಿಖೆ ನಡೆಸುತ್ತಿದೆ ಮತ್ತು ಈ ಪ್ರಕರಣದಲ್ಲಿ ಹಲವಾರು ತೆಲುಗು ನಟರನ್ನು ಪ್ರಶ್ನಿಸಲಾಗಿದೆ. ಇದೀಗ ಮತ್ತೆ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ ನೀಡಲಾಗಿದೆ.
ಕಳ್ಳಬೇಟೆ ಆರೋಪದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ಮೂರು ದಿನಗಳ ಹಿಂದೆಯಷ್ಟೇ ಶ್ರೀ ರೆಡ್ಡಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಆಂಗ್ಲ ಮಾಧ್ಯಮ ವರದಿ ಮಾಡಿರುವ ಪ್ರಕಾರ, ಮೂರು ವರ್ಷಗಳ ಹಿಂದೆ ಶ್ರೀರೆಡ್ಡಿ ಮತ್ತು ಇತರ ಇಬ್ಬರೊಂದಿಗೆ ಬೆಂಗಳೂರಿನಲ್ಲಿ ಖ್ಯಾತ ಸಿನಿಮಾ ವ್ಯಕ್ತಿಯೊಬ್ಬರು ಆಯೋಜಿಸಿದ್ದ ಪಾರ್ಟಿಗೆ ಡ್ರಗ್ಸ್ ಬಳಸಿದ್ದರು ಎನ್ನುವ ಆರೋಪವಿದೆ.
ಸಿನಿಮಾ ಸೋತ ಬೆನ್ನಲ್ಲೇ ಮಾಲ್ಡೀವ್ಸ್‌ನಲ್ಲಿ ರಾಕುಲ್ ಮಸ್ತ್ ಎಂಜಾಯ್; ಫೋಟೋ ವೈರಲ್
2017ರಲ್ಲಿ ಡ್ರಗ್ಸ್ ಪ್ರಕರಣ ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಡೀ ಟಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ. ಟಾಲಿವುಡ್ ಸೆಲೆಬ್ರಿಟಿಗಳಾದ ರವಿತೇಜ, ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ತನಿಶ್, ನಂದು, ತರುಣ್ ಮತ್ತು ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಸೇರಿದಂತೆ ಇನ್ನೂ ಅನೇಕರಿಗೆ ಈ ಹಿಂದೆಯೇ ಇಡಿ ಸಮನ್ಸ್ ನೀಡಿತ್ತು.
ಸದ್ಗುರು ಜೊತೆ ಗಾಲ್ಫ್ ಕ್ಲಬ್‌ನಲ್ಲಿ ರಕುಲ್ ಮತ್ತು ಕಪಿಲ್ ದೇವ್
ಇದೀಗ ರಾಕುಲ್ ಪ್ರೀತ್ ಸಿಂಗ್ ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಸೌತ್ ಮತ್ತು ನಾರ್ತ್ ಎರಡೂ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದ ರಾಕುಲ್ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ರಾಕುಲ್ 'ಡಾಕ್ಟರ್ ಜಿ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಮುಂದಿದ್ದಾರೆ.
