Asianet Suvarna News Asianet Suvarna News

Rajinikanth ಆಸ್ಪತ್ರೆಗೆ ದಾಖಲು: ಅಣ್ಣಾತ್ತೆ ರಿಲೀಸ್ ಮುನ್ನ ಡಿಸ್ಚಾರ್ಜ್ ಆಗ್ತಾರಾ ?

  • ಅಣ್ಣಾತ್ತೆ ರಿಲೀಸ್‌ಗೆ ಕೆಲವೇ ದಿನ, ನಟ ರಜನಿ ಆಸ್ಪತ್ರೆಗೆ ದಾಖಲು
  • ತಮಿಳುನಾಡಿನ ಚೆನ್ನೈನ ಆಸ್ಪತ್ರೆಗೆ ದಾಖಲಾದ ನಟ
Rajinikanth is doing fine and resting would be discharged before Annaatthe release says relative dpl
Author
Bangalore, First Published Oct 29, 2021, 12:05 PM IST
  • Facebook
  • Twitter
  • Whatsapp

ಸೌತ್ ಸೂಪರ್‌ಸ್ಟಾರ್(Superstar) ರಜನಿಕಾಂತ್(Rajinikamth) ಗುರುವಾರ ರಾತ್ರಿ ತಮಿಳುನಾಡಿನ(Tamilnadu) ಚೆನ್ನೈನಲ್ಲಿರುವ(Chennai) ಕಾವೇರಿ ಆಸ್ಪತ್ರೆಗೆ(Kauvery Hospital) ದಾಖಲಾಗಿದ್ದಾರೆ. ಅಣ್ಣಾತ್ತೆ ಟ್ರೈಲರ್ ರಿಲೀಸ್ ಬೆನ್ನಲ್ಲೇ ನಟ ಆಸ್ಪತ್ರೆಗೆ ದಾಖಲಾಗಿರುವ ಅವರ ಅಭಿಮಾನಿಗಳಿಗೆ ಅತಂಕ ಉಂಟುಮಾಡಿದೆ. ಆದರೆ ಇತ್ತೀಚಿನ ಅಪ್ಡೇಟ್ ಪ್ರಕಾರ ನಟ ರಜನಿಕಾಂತ್ ಅವರು ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಸಂಬಂಧಿ ಹಾಗೂ ನಟ ವೈ.ಜೀ ಮಹೇಂದ್ರನ್ ಖಚಿತಪಡಿಸಿದ್ದಾರೆ.

ಗುರುವಾರ ರಾತ್ರಿ ರಜನಿಕಾಂತ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಕಾಮನ್ ಆರೋಗ್ಯ ತಪಾಸಣೆ ಎಂದು ಅವರ ಪತ್ನಿ ಲತಾ ಮಾಧ್ಯಮಗಳಿಗೆ ಹೇಳಿದ್ದು, ಕೆಲವರು ನಟನಿಗೆ ಎದೆನೋವು ಮತ್ತು ಅಸ್ವಸ್ಥತೆ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಿದ್ದಾರೆ. ರಜನಿಕಾಂತ್ ಅವರ ಅಣ್ಣಾತ್ತೆ ಸಿನಿಮಾ ಬಿಡುಗಡೆಗೂ ಮುನ್ನ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಅವರು ಖಚಿತಪಡಿಸಿದ್ದಾರೆ.

ತಲೈವಾ ರಜನಿಕಾಂತ್ ಅಭಿನಯದ 'ಅನ್ನತ್ತೆ' ಟೀಸರ್ ರಿಲೀಸ್

ಆಸ್ಪತ್ರೆಯಲ್ಲಿ ರಜನಿಕಾಂತ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವೈ.ಜಿ ಮಹೇಂದ್ರನ್, ರಜನಿ ಅವರು ಇದೀಗ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಪಡೆಯುತ್ತಿರುವ ಚಿಕಿತ್ಸೆಯ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ, ಆದರೆ ಅವರು ಚೆನ್ನಾಗಿದ್ದಾರೆ. ಅಣ್ಣಾತ್ತೆ ಬಿಡುಗಡೆಗೂ ಮುನ್ನ ಅವರನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

"

ರಜನಿಕಾಂತ್ ಅವರ ಅಣ್ಣಾತ್ತೆ ದೀಪಾವಳಿ, ನವೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್, ಮೀನಾ ಮತ್ತು ಖುಷ್ಭು ಸುಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಡಿ.ಇಮ್ಮಾನ್ ಸಂಗೀತ ನೀಡಿದ್ದಾರೆ.

ಹಳ್ಳಿಯ ಕಥಾ ಹಂದರ ಇರುವ ಈ ಚಿತ್ರ ಪಕ್ಕಾ ಕೌಟುಂಬಿಕ ಸಿನಿಮಾದಂತೆ ಕಾಣುತ್ತದೆ. ಹಾಗೂ ಕೀರ್ತಿ ಸುರೇಶ್‌ (Keerthi Suresh), ರಜನಿಕಾಂತ್ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತಿಚೆಗಷ್ಟೇ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಪಾಲ್‌ಸಾಮಿಯಾಗಿ ರಜನಿಕಾಂತ್ ಅವರು ಭರ್ಜರಿ ಆಕ್ಷನ್‌ನೊಂದಿಗೆ ಮಾಸ್ ಎಂಟ್ರಿ ಕೊಟ್ಟಿದ್ದರು.

ರಜನಿ ಸ್ಲೋ ಮೋಷನ್ ವಾಕ್, ಪಂಚಿಂಗ್ ಡೈಲಾಗ್‌ ನೋಡುಗರಿಗೆ ಸಖತ್ ಕಿಕ್ ಕೊಟ್ಟಿತ್ತು. ಮತ್ತು  ರಜನಿಕಾಂತ್  ಡಬಲ್ ಶೇಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಹಿಂಟ್ ನೋಡುಗರಿಗೆ ಕಾಣಿಸಿತ್ತು. 2020 ರಲ್ಲಿ ಎ.ಆರ್.ಮುರುಘದಾಸ್ (A.R.Murugadoss) ನಿರ್ದೇಶನದ 'ದರ್ಬಾರ್' (Darbar) ಬಿಡುಗಡೆಯಾದ ನಂತರ ರಜನಿಕಾಂತ್ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ.

ಈ ವಾರದ ಆರಂಭದಲ್ಲಿ ರಜನಿಕಾಂತ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಲು ಪತ್ನಿ, ಪುತ್ರಿ ಐಶ್ವರ್ಯ ಹಾಗೂ ಮೊಮ್ಮಕ್ಕಳೊಂದಿಗೆ ದೆಹಲಿಗೆ ತೆರಳಿದ್ದರು ನಟ.

Rajinikanth is doing fine and resting would be discharged before Annaatthe release says relative dpl

ಇನ್ಮುಂದೆ ಸ್ಟಂಟ್ ಸೀನ್‌ ಮಾಡಲ್ಲ ರಜನೀಕಾಂತ್..!

ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ನಂತರ ರಜನಿಕಾಂತ್ ಈ ಪ್ರಶಸ್ತಿಯನ್ನು ನನ್ನ ಗುರು ಮತ್ತು ಮಾರ್ಗದರ್ಶಕ ಕೆ ಬಾಲಚಂದರ್ ಸರ್ ಅವರಿಗೆ ಅರ್ಪಿಸುತ್ತೇನೆ. ಅವರನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಈ ಪ್ರಶಸ್ತಿಯನ್ನು ನನ್ನ ತಂದೆ ಸತ್ಯನಾರಾಯಣ ರಾವ್ ಗಾಯಕವಾಡ ಅವರಿಗೂ ಅರ್ಪಿಸುತ್ತೇನೆ. ಅವರು ನನ್ನನ್ನು ಉತ್ತಮ ಮೌಲ್ಯಗಳೊಂದಿಗೆ ಬೆಳೆಸಿದರು. ನನ್ನಲ್ಲಿ ಆಧ್ಯಾತ್ಮಿಕತೆಯನ್ನು ತುಂಬಿದರು ಎಂದಿದ್ದಾರೆ. ರಜನಿಕಾಂತ್ ತಮ್ಮ ನಟನಾ ಪ್ರತಿಭೆಯನ್ನು ಗುರುತಿಸಿದ ತಮ್ಮ ಜೀವನದಲ್ಲಿ ಮೊದಲ ವ್ಯಕ್ತಿಯಾಗಿದ್ದ ತಮ್ಮ ಆತ್ಮೀಯ ಸ್ನೇಹಿತ ರಾಜ್ ಬಹದ್ದೂರ್ ಅವರನ್ನು ನೆನಪಿಸಿಕೊಂಡರು. ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಅವರು ತಮ್ಮ ಎಲ್ಲಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

"

Follow Us:
Download App:
  • android
  • ios