ಅರೆಸ್ಟ್‌ ಆಗೋದ್ರಿಂದ ಪಾರಾಗಲು ಪೊಲೀಸ್ ಅಧಿಕಾರಿಗೆ 25 ಲಕ್ಷ ಕೊಟ್ಟಿದ್ದ ಕುಂದ್ರಾ!

* ಪೋರ್ನೋಗ್ರಫಿ ಪ್ರಕರಣದಲ್ಲಿ ಜೈಲು ಸೇರಿರುವ ಶಿಲ್ಪಾ ಪತಿ ಕುಂದ್ರಾ

* ಬಂಧನದಿಂದ ಪಾರಾಗಲು ಪೊಲೀಸರಿಗೆ ಇಪ್ಪತ್ತೈದು ಲಕ್ಷ ಕೊಟ್ಟಿದ್ದ ಕುಂದ್ರಾ

* ಶಾಕಿಂಗ್ ಸತ್ಯ ಬಯಲು ಮಾಡಿದ ಸಹ ಆರೋಪಿ ಯಶ್

Raj Kundra Gave Bribes Of Rs 25 Lakh To Avoid Getting Arrested Report pod

ಮುಂಬೈ(ಜು.22): ಪೋರ್ನೋಗ್ರಫಿ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿಚಾರವಾಗಿ ಆರೋಪಿಯೊಬ್ಬ ಶಾಕಿಂಗ್ ಮಾಹಿತಿ ಬಾಯ್ಬಿಟ್ಟಿದ್ದಾನೆ. ಹೌದು ಈ  ಪ್ರಕರಣದ ವಾಂಟೆಡ್ ಆರೋಪಿ ಯಶ್ ಠಾಕೂರ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಾಲ್ಕು ಮೇಲ್‌ ಕಳುಹಿಸಿ, ತಾನು ಅರೆಸ್ಟ್‌ ಆಗುವುದನ್ನು ತಪ್ಪಿಸಲು ರಾಜ್ ಕುಂದ್ರಾ ಮುಂಬೈ ಪೊಲೀಸರಿಗೆ 25 ಲಕ್ಷ ಲಂಚ ನೀಡಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ತನಗೂ ಅದೇ ಮೊತ್ತವನ್ನು ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಯಶ್ ಹೇಳಿಕೆಯ ನಂತರ, ಸದ್ಯ ಮುಂಬೈ ಪೊಲೀಸರ ಮೇಲೇ ಸಂಶಯ ಮೂಡಲಾರಂಭಿಸಿದೆ.

'ಬಟ್ಟೆ ಬಿಚ್ಚಿಸಿ ಅಡಿಶನ್' ಪೋರ್ನ್ ತಯಾರಿಸುತ್ತಿದ್ದ ಕುಂದ್ರಾ ವಿವಾದಗಳ ರಾಜ!

ಯಶ್ ಠಾಕೂರ್ ಅನ್ವಯ ಈ ವಿಚಾರವಾಗಿ ಮಾರ್ಚ್‌ನಲ್ಲಿ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಲಾಗಿದೆ. ನಾಲ್ಕು ಇಮೇಲ್‌ಗಳನ್ನು ಎಸಿಬಿಗೆ ಕಳುಹಿಸಲಾಗಿದೆ. ಇಮೇಲ್ ಕಳುಹಿಸುವ ಮೂಲಕ, ಕ್ರೈಂ ಬ್ರಾಂಚ್‌ನ ಅಧಿಕಾರಿಯೊಬ್ಬರು ರಾಜ್ ಕುಂದ್ರಾರಿಂದ 25 ಲಕ್ಷ ರೂಪಾಯಿ ಲಂಚ ತೆಗೆದುಕೊಳ್ಳುವ ಬಗ್ಗೆ ಹೇಳಿದ್ದರು. ಇನ್ನು ಅತ್ತ ಭ್ರಷ್ಟಾಚಾರ ನಿಗ್ರಹ ದಳವು ಏಪ್ರಿಲ್‌ನಲ್ಲಿಯೇ ಈ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಈ ಮೇಲ್ ಕಳುಹಿಸಿದ್ದರು.

ಪೋರ್ನ್ ಫಿಲಂ ಪ್ರಕರಣದಲ್ಲಿ ಯಶ್ ಕೂಡ ಆರೋಪಿ

ರಾಜ್ ಕುಂದ್ರಾ ಜೊತೆ ಯಶ್ ಠಾಕೂರ್ ಕೂಡಾ ಪೋರ್ನ್ ಫಿಲಂ ಪ್ರಕರಣದ ಆರೋಪಿಯಾಗಿದ್ದಾರೆ. ಠಾಕೂರ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆತ ಪರಾರಿಯಾಗಿದ್ದಾನೆ.

ನೀಲಿ ಸಿನಿಮಾಗಳನ್ನು ತಯಾರಿಸುತ್ತಿದ್ದ ರಾಜ್ ಕುಂದ್ರಾ ಪೊಲೀಸರ ವಶದಲ್ಲಿ!

ಸೋಮವಾರ ತಡರಾತ್ರಿ ರಾಜ್ ಕುಂದ್ರಾ ಅರೆಸ್ಟ್

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ. ಜುಲೈ 23 ರವರೆಗೆ ಕುಂದ್ರಾರನ್ನು ಪೊಲೀಸ್ ಕಸ್ಟಡಿಯಲ್ಲಿರಿಸಲು ನ್ಯಾಯಾಲಯ ಸೂಚಿಸಿದೆ.  ಪೋರ್ನ್‌ ಫಿಲಂ ಪ್ರಕರಣದಲ್ಲಿ ಕುಂದ್ರಾ ಬಂಧನದ ಬಳಿಕ, ಇನ್ನೂ ಅನೇಕರ ಹೆಸರುಗಳು ಸಹ ಮುನ್ನೆಲೆಗೆ ಬಂದಿವೆ. ಕುಂದ್ರಾ ಅವರ ಸೋದರ ಮಾವ ಪ್ರದೀಪ್ ಬಕ್ಷಿ ಅವರ ಹೆಸರೂ ಹೊರಹೊಮ್ಮಿದೆ. ಯುಕೆನಲ್ಲಿ ನಿವಾಸಿಯಾಗಿರುವ ಕಂಪನಿಯೊಂದರ ಸಿಇಒ ಪ್ರದೀಪ್ ಬಕ್ಷಿ ವಿರುದ್ಧ ಮುಂಬೈ ಪೊಲೀಸರು ಲುಕ್ ನೋಟಿಸ್ ನೋಟಿಸ್ ನೀಡಿದ್ದಾರೆ.

Latest Videos
Follow Us:
Download App:
  • android
  • ios