Asianet Suvarna News Asianet Suvarna News

#RajKundraCase: ಶಿಲ್ಪಾ ಶೆಟ್ಟಿ 'ಎರೋಟಿಕಾ' ಅಂದ್ರಲ್ಲ, ಹಾಗಂದ್ರೇನು?

ತನ್ನ ಪತಿ ರಾಜ್ ಕುಂದ್ರಾ ತಯಾರಿಸುತ್ತಿದ್ದುದು ಪೋರ್ನ್ ಫಿಲಂ ಅಲ್ಲ; ಎರೋಟಿಕಾ ಅಂದಿದ್ದಾರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಹಾಗಂದ್ರೇನು?

 

 

Raj Kundra case Bollywood actress Shilpa Shetty says erotica is not porn
Author
Bengaluru, First Published Jul 26, 2021, 12:00 PM IST
  • Facebook
  • Twitter
  • Whatsapp

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅಶ್ಲೀಲ ಫಿಲಂಗಳ ತಯಾರಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಶಿಲ್ಪಾ ಶೆಟ್ಟಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆಗ ಶಿಲ್ಪಾ ಶೆಟ್ಟಿ, ''ನನ್ನ ಪತಿ ತಯಾರಿಸ್ತಾ ಇರೋದು ಪೋರ್ನ್ ಫಿಲಂ ಅಲ್ಲ, ಎರೋಟಿಕಾ'' ಅಂತ ಹೇಳಿದ್ದಾರೆ. ಹಾಗಂದ್ರೆ ಏನು ಎಂಬ ಬಗ್ಗೆ ಹೆಚ್ಚಿನ ಮಂದಿಯಲ್ಲಿ ಕ್ಲಾರಿಟಿ ಇಲ್ಲ. ಇವೆರಡಕ್ಕೂ ವ್ಯತ್ಯಾಸ ಇದೆ. 
ಪೋರ್ನ್ ಫಿಲಂ ಎಂದರೆ ಗಂಡು- ಹೆಣ್ಣು ಸೇರಿ ನಡೆಸುವ ಕಾಮಕೇಳಿಯ ನೇರ ವಿಡಿಯೋ ಚಿತ್ರಣ. ಭಾರತದಲ್ಲೂ ವಿದೇಶಗಳಲ್ಲೂ ಇದಕ್ಕೆ ಸಂಬಂಧಿಸಿದ ಲಕ್ಷಾಂತರ ಪೋರ್ನ್ ಸೈಟ್‌ಗಳಿವೆ. ಭಾರತ ಸರಕಾರ ಈಗಾಗಲೇ ನೂರಾರು ವೆಬ್‌ಸೈಟ್‌ಗಳ ಮೇಲೆ ನಿಷೇಧ ವಿಧಿಸಿದೆ, ಬ್ತಾನ್ ಮಾಡಿದೆ. ಆದರೂ ಡಾರ್ಕ್ ವೆಬ್‌ನಲ್ಲಿ ಇವು ಸಿಗುತ್ತವೆ; ಒಂದು ಹೆಸರನ್ನು ನಿಷೇಧಿಸಿದರೆ ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತವೆ. ಒಂದೇ ಸೈಟ್‌ನಲ್ಲಿ ಇರುವ ಕಂಟೆಂಟ್ ಎಲ್ಲ ಸೈಟ್‌ಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಸಿಗುತ್ತದೆ.

ರಾಜ್‌ ಕುಂದ್ರಾ ನೀಲಿ ಚಿತ್ರ ಕಳಿಸುತ್ತಿದ್ದ ಆ್ಯಪ್‌ ಹಾಟ್‌ ಶಾಟ್ಸ್‌ನೊಳಗೇನಿದೆ ಗೊತ್ತಾ!

ಎರೋಟಿಕಾ ಅಥವಾ ಸಾಫ್ಟ್ ಪೋರ್ನ್ ಎಂಬುದು ಇದಕ್ಕಿಂತ ಭಿನ್ನ. ಇದರಲ್ಲೂ ಗಂಡು- ಹೆಣ್ಣಿನ ಶೃಂಗಾರವೇ ಮುಖ್ಯ. ಕನ್ನಡದಲ್ಲಿ ಲಕ್ಷಣವಾಗಿ ಇದನ್ನು ಶೃಂಗಾರ ಎನ್ನಬಹುದು. ಆದರೆ ನವರಸಗಳಲ್ಲಿ ಬರುವ ಶೃಂಗಾರಕ್ಕಿಂತಲೂ ಇದು ಕೊಂಚ ಹೆಚ್ಚು ಮುಂದುವರಿದುದು.  ಇಲ್ಲಿ ನೇರ ಕಾಮಕೇಳಿಯನ್ನು ತೋರಿಸುವುದಿಲ್ಲ. ಹಾಗೇ ಗಂಡು ಹೆಣ್ಣುಗಳ ಗುಪ್ತಾಂಗಗಳನ್ನೂ ನೇರವಾಗಿ ತೋರಿಸುವುದಿಲ್ಲ. ಹೆಚ್ಚೆಂದರೆ ಹೆಣ್ಣಿನ ಎದೆಯ ಭಾಗವನ್ನು ತೆರೆದು ತೋರಬಹುದು. ಅಮೆರಿಕದಲ್ಲಿ ಇದು ಸಾಮಾನ್ಯ. ಆದರೆ ಭಾರತದಲ್ಲಿ ಚಿತ್ರೀಕರಿಸುವ ಎರೋಟಿಕಾದಲ್ಲಿ ಎದೆಯ ಭಾಗವನ್ನೂ ಸ್ವಲ್ಪ ಮರೆಮಾಡಲಾಗುತ್ತದೆ. ಆದರೆ ಸೆಕ್ಸ್‌ನಲ್ಲಿ ಏನೆಲ್ಲ ನಡೆಯುತ್ತದೋ ಅದೆಲ್ಲವೂ ಇಲ್ಲಿ ಕ್ರಿಯೆಯಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳದೇ ಇರುವುದಿಲ್ಲ. ಪೋರ್ನ್ ಅಂದರೆ ಬೆಡ್‌ರೂಮಿನಲ್ಲಿ ನಡೆಯುತ್ತಿರುವುದು ಅಲ್ಲೇ ಕೂತು ನೋಡಿದಂತೆ; ಸಾಫ್ಟ್ ಪೋರ್ನ್ ಎಂದರೆ ಸ್ವಲ್ಪ ದೂರದಿಂದ, ಬಾಗಿಲಿನ ರಂಧ್ರದಿಂದ ನೋಡಿದಂತೆ.

'ಬಟ್ಟೆ ಬಿಚ್ಚಿಸಿ ಅಡಿಶನ್' ಪೋರ್ನ್ ತಯಾರಿಸುತ್ತಿದ್ದ ಕುಂದ್ರಾ ವಿವಾದಗಳ ರಾಜ!

ಎರೋಟಿಕಾದ ಮುಖ್ಯ ಉದ್ದೇಶ ನೋಡುಗನಲ್ಲಿ ಶೃಂಗಾರವನ್ನು ಉದ್ದೀಪಿಸುವುದು. ಅಲ್ಲಿ ಸದಭಿರುಚಿ ಕೂಡ ಇರಬಹುದು. ಪೋರ್ನ್‌ನ ಉದ್ದೇಶ ದೇಹವನ್ನು ಕೆರಳಿಸುವುದು- ಆ ಮೂಲಕ ಕಾಮಕ್ರೀಡೆಗೆ ಸಜ್ಜುಗೊಳಿಸುವುದು. ಲೈಂಗಿಕ ಆಸಕ್ತಿ ಇಲ್ಲದ ದಂಪತಿ- ಜೋಡಿಗಳಲ್ಲಿ ಶೃಂಗಾರಾಪೇಕ್ಷೆಯನ್ನು ಉದ್ದೀಪಿಸಲು ಎರೋಟಿಕಾ ನೆರವಾಗುತ್ತದೆ. ಇಲ್ಲಿ ಸಣ್ಣದೊಂದು ಕತೆಯ ಎಳೆಯೂ ಇರುತ್ತದೆ. ಪುರಾತನ ಕಾವ್ಯಗಳಲ್ಲೂ ಗಂಡು ಹೆಣ್ಣಿನ ಸಮಾಗಮವನ್ನು ವರ್ಣಿಸುವ ಭಾಗಗಳು ಸಾಕಷ್ಟು ಇರುತ್ತಿದ್ದವು. ಪ್ರಾಚೀನ ದೇವಾಲಯಗಳ ಭಿತ್ತಿಗಳಲ್ಲೂ ಶೃಂಗಾರದ ಉಬ್ಬು ಶಿಲ್ಪಗಳು ಇವೆ- ಖಜುರಾಹೋ ಮುಂತಾದ ದೇವಾಲಯಗಳು ಉದಾಹರಣೆ.
 

Raj Kundra case Bollywood actress Shilpa Shetty says erotica is not porn


ಎರೋಟಿಕಾಗೆ ಉದಾಹರಣೆ ನೀಡುವುದಾದರೆ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬಂದ 'ಕಾಮಸೂತ್ರ' ಫಿಲಂ ಅನ್ನು ಉದಾಹರಿಸಬಹುದು. ವಾತ್ಸ್ಯಾಯನನ ಕಾಮಸೂತ್ರವನ್ನು ಆಧಾರವಾಗಿಟ್ಟುಕೊಂಡು ಈ ಫಿಲಂ ಅನ್ನು ಚಿತ್ರೀಕರಿಸಲಾಗಿದೆ. ಆದರೆ ಅಲ್ಲೊಂದು ಕತೆಯಿದೆ. ಅತಿಕಾಮಿ ರಾಜ, ಅತೃಪ್ತ ಹೆಣ್ಣು, ಹಾದರಕ್ಕೆ ಮುಂದಾಗುವ ಗಂಡು ಇತ್ಯಾದಿಗಳೆಲ್ಲ ಇದ್ದಾರೆ. ಇವರ ಮೂಲಕ ಕತೆ ನಡೆಯುತ್ತದೆ. ಮೈ ಬಿಸಿ ಮಾಡುವ ಸೀನ್‌ಗಳು ಸಾಕಷ್ಟಿವೆ. ಹಿಂದಿಯಲ್ಲಿ ಮಲ್ಲಿಕಾ ಶೆರಾವತ್ ನಟಿಸಿದ ಮರ್ಡರ್ ಮೊದಲಾದ ಫಿಲಂಗಳನ್ನೂ ಎರೋಟಿಕಾದ ಜಾತಿಗೇ ಸೇರಿಸಬಹುದು. ಸನ್ನಿ ಲಿಯೋನ್ ಅಮೆರಿಕದಲ್ಲಿ ಮಾಡಿದ ವಿಡಿಯೋಗಳು ಪೋರ್ನ್. ಆದರೆ ಅವರು ಬಾಲಿವುಡ್‌ಗೆ ಬಂದ ಬಳಿಕ ಮಾಡಿ ಜಿಸ್ಮ್ ಮೊದಲಾದ ಫಿಲಂಗಳು ಎರೋಟಿಕಾ. ಎರೋಟಿಕಾದ ಮೂಲ ಉದ್ದೇಶ ಪುರುಷರನ್ನು ಪ್ರಚೋದಿಸುವುದೇ ಆಗಿರುತ್ತದೆ.
 
ರಾಜ್ ಕುಂದ್ರಾ ಯಾವ ಬಗೆಯ ವಿಡಿಯೋಗಳನ್ನು ಮಾಡುತ್ತಿದ್ದರೋ ನಮಗೆ ಗೊತ್ತಿಲ್ಲ.  ಅವರ ಜೊತೆ ಕೆಲಸ ಮಾಡಿದ ಹೀರೋಯಿನ್‌ಗಳ ಪ್ರಕಾರ, ಅಲ್ಲಿ ಸಾಫ್ಟ್ ಪೋರ್ನ್ ಚಿತ್ರೀಕರಣ ನಡೆಯುತ್ತಿದ್ದುದು ನಿಜ. ಆದರೆ ಪೋರ್ನ್ ಕೂಡ ಚಿತ್ರೀಕರಿಸಲಾಗುತ್ತಿತ್ತೇ ಎಂಬುದು ಗೊತ್ತಾಗಿಲ್ಲ. ಅದು ತನಿಖೆಯಿಂದ ರುಜುವಾತು ಆಗಬೇಕಿದೆ.  ಪೋರ್ನ್ ಸಿಡಿಗಳು ದೊರೆತಿವೆ.   

ಬ್ಲೂಫಿಲಂ ಕೂಪಕ್ಕೆ ತಳ್ಳಿದ್ದು ಕುಂದ್ರಾ: ಪೂನಂ, ಶೆರ್ಲಿನ್‌ ಆರೋಪ!

Follow Us:
Download App:
  • android
  • ios