Amul Pushpa: ಅಮುಲ್ ಬೇಬಿಯ ಶ್ರೀವಲ್ಲಿ ಅವತಾರ ಸ್ಟೈಲಿಷ್ ಆಗಿ ಮೂಡಿಬಂದಿದೆ ಪುಷ್ಪಾದ ಅಮುಲ್ ವರ್ಷನ್
ಅಮುಲ್ ಟೇಸ್ಟ್ ಮಾತ್ರವಲ್ಲ ಕ್ರಿಯೇಟಿವಿಟಿ ಹಾಗೂ ಫನ್‌ನಲ್ಲಿಯೂ ನಂಬರ್ ವನ್. ಯಾವುದೇ ಬೆಳವಣಿಗೆ ಇರಲಿ ಅಮುಲ್ ಸೂಪರಾಗಿರುವ ಫೋಟೋಸ್ & ಕೋಟ್ಸ್ ಶೇರ್ ಮಾಡುತ್ತದೆ. ಇದೀಗ ಸದ್ಯದ ಹವಾ ಪುಷ್ಪಾ: ದಿ ರೈಸ್ ಸಿನಿಮಾ. ಇದರ ಪ್ರಭಾವ ಅಮುಲ್ ಬೇಬಿಯನ್ನೂ ಬಿಟ್ಟಿಲ್ಲ. ಚೀಸ್ ಹಿಡಿದುಕೊಂಡಿರೋ ಅಮುಲ್ ವೇಷ ಭೂಷಣ ಪುಷ್ಪಾ ಸ್ಟೈಲಿಗೆ ಬದಲಾಗಿದೆ. ಈ ಹಿಂದೆ ಪ್ರಿಯಾಂಕ ಚೋಪ್ರಾ, ವಿದ್ಯಾ ಬಾಲನ್, ವಿರುಷ್ಕಾ ಸೇರಿ ಸ್ಟಾರ್ ಸೆಲೆಬ್ರಿಟಿಗಳಿಗೆ ಗೌರವ ಸೂಚಿಸಿದ ಅಮುಲ್ ಈಗ ಪುಷ್ಪಾ ತಂಡಕ್ಕೆ ಈ ಕ್ಯೂಟ್ ಸರ್ಪೈಸ್ ಕೊಟ್ಟಿದೆ.
ಬಾಹುಬಲಿ ಯಶಸ್ಸಿನ ನಂತರ, ದಕ್ಷಿಣದ ಹೆಚ್ಚಿನ ಚಿತ್ರಗಳು ರಾಷ್ಟ್ರದಾದ್ಯಂತ ಪ್ರಭಾವವನ್ನು ಸೃಷ್ಟಿಸುತ್ತಿವೆ. ಇತ್ತೀಚಿನದು ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್ ಭಾಗ 01 ಎಲ್ಲೆಡೆ ಟಾಲಿವುಡ್ ಸಿನಿಮಾದ ಅದ್ಧೂರಿಯನ್ನು ಹೊತ್ತು ಸುದ್ದಿಯಾಗಿದೆ. ಹೆಚ್ಚುತ್ತಿರುವ COVID-19 ಪ್ರಕರಣಗಳ ನಡುವೆ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರಲು ಭಯಪಡುವ ನಡುವೆಯೂ, ಆಕ್ಷನ್-ಡ್ರಾಮಾ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಸಿನಿಮಾವು ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ಇದರ ಪರಿಣಾಮವಾಗಿ ಪ್ರಭಾವಶಾಲಿ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳು ಬಂದಿದೆ. ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಕೂಡ ಚಿತ್ರಕ್ಕೆ ಜೈಕಾರ ಹಾಕಿದ್ದಾರೆ. ಇದೀಗ ಅಮುಲ್ ಕೂಡಾ ಸೌತ್‌ನ ಹಿಟ್ ಸಿನಿಮಾಗೆ ಶೌಟೌಟ್ ಕೊಟ್ಟಿದೆ.
ದೇಸಿ ಗರ್ಲ್‌ಗಾಗಿ ಅಮುಲ್ ಸ್ಪೆಷಲ್ ಪೋಸ್ಟ್
ಅಲ್ಲು ಅರ್ಜುನ್‌ನ 'ಪುಷ್ಪ: ದಿ ರೈಸ್' ಗೆ ಅಮುಲ್ ಶೌಟೌಟ್:
ಅಮುಲ್ ತನ್ನ ಪ್ರಸಿದ್ಧ ಕಾರ್ಟೂನ್ ಪಾತ್ರಕ್ಕೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಗೆಟ್-ಅಪ್‌ಗೆ ಹಾಕುವ ಮೂಲಕ ಪುಷ್ಪಾ ಅವರ ಯಶಸ್ಸಿಗೆ ಗೌರವ ಸಲ್ಲಿಸಿದರು. ಕಥಾನಾಯಕ ಪುಷ್ಪಾ ಅವರನ್ನು ವ್ಯಂಗ್ಯಚಿತ್ರದಿಂದ ಚಿತ್ರಿಸಲಾಗಿದೆ. ಅವರ ಒರಟಾದ ಅವತಾರದಲ್ಲಿ ಒಬ್ಬರು, ಅವರ ಧರಿಸಿರುವ ಬಟ್ಟೆಯಲ್ಲಿಯೇ ಚಿತ್ರಿಸಲಾಗಿದೆ. ಬಂಡೆಯ ಮೇಲೆ ಕುಳಿತಿದ್ದಾರೆ. ಇನ್ನೊಬ್ಬರು ಲಾಟೀನನ್ನು ಹಿಡಿದಿರುವುದನ್ನು ಕಾಣಬಹುದು.
ಬಿಡುಗಡೆಯಾದಾಗಿನಿಂದ ಜನಪ್ರಿಯವಾಗಿದ್ದ ಸಾಮಿ ಸಾಮಿ ಟ್ರ್ಯಾಕ್ ಹೆಜ್ಜೆಯನ್ನು ಸ್ತ್ರೀ ಕಾರ್ಟೂನ್ ಪಾತ್ರಕ್ಕೆ ನೀಡಲಾಯಿತು. ಶ್ರೀವಲ್ಲಿಯ ಅವತಾರವಂತೂ ಸ್ಟೈಲಿಷ್ ಆಗಿದೆ. ಚಿತ್ರದಲ್ಲಿ ಬ್ರ್ಯಾಂಡ್‌ನ ಉತ್ಪನ್ನಗಳ ಮಿಶ್ರಣದಲ್ಲಿ, ಅದರೊಂದಿಗೆ ಬೆಣ್ಣೆಯೂ ಇತ್ತು. ತಮ್ಮ ಸೃಜನಾತ್ಮಕ ಶೀರ್ಷಿಕೆಗಳಿಗೆ ಹೆಸರುವಾಸಿಯಾದ ಅವರು, ಚಿತ್ರವು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲು 'ಪುಷ್ಪ್ಯಾಕ್ ದಿ ಸ್ಲೈಸ್' ಎಂಬ ಪದವನ್ನು ಬಳಸಿದ್ದಾರೆ. ಇದು ಅಲ್ಲು ಅರ್ಜುನ್ ಅವರ ಹೆಸರನ್ನು ಸೃಜನಾತ್ಮಕವಾಗಿ ಬಳಸಿದೆ. 'ಅಮುಲ್ಲು' ಎಂದು ಬಳಸಿದ್ದು ಅಮುಲ್ ಹಾಗೂ ಅಲ್ಲು ಪದ ಸೇರಿದೆ.
ಹಾಲಿನ ಬದಲು ಬಾದಾಮಿ, ಅಕ್ಕಿ, ಸೋಯಾ ನೀರು ಮಾರಾಟ: ಅಮುಲ್ ಗರಂ
ಪುಷ್ಪಾ: ದಿ ರೈಸ್ ಬಾಕ್ಸ್ ಆಫೀಸ್ ಕಲೆಕ್ಷನ್
ಪುಷ್ಪಾ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ತೆಲುಗು ಭಾಷಿಕ ಪ್ರದೇಶಗಳಲ್ಲಿ ಚಿತ್ರ ಉತ್ತಮ ಪ್ರದರ್ಶನ ನೀಡಿದರೆ, ಬಾಲಿವುಡ್‌ನಲ್ಲಿ ಹಿಂದಿ ಆವೃತ್ತಿಯೇ ಅಚ್ಚರಿ ಮೂಡಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಒಂದು ತಿಂಗಳ ಕಾಲ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅನೇಕ ಪ್ರದೇಶಗಳಲ್ಲಿ, ಇದು ಒಂದು ವಾರದ ಹಿಂದೆ ಬಿಡುಗಡೆಯಾದ ಹೊರತಾಗಿಯೂ ಹಿಂದಿಯಲ್ಲಿ 83 ನಂತಹ ಚಲನಚಿತ್ರಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಟ್ರೇಡ್ ವರದಿಗಳ ಪ್ರಕಾರ, ಚಿತ್ರದ ಹಿಂದಿ ಆವೃತ್ತಿಯು 80 ಕೋಟಿ ರೂಪಾಯಿ ಗಡಿ ದಾಟಿದೆ. ಇದೀಗ 85 ಕೋಟಿ ರೂ.ಗಳತ್ತ ದಾಪುಗಾಲಿಡುತ್ತಿದ್ದು, ಕೆಲವೇ ದಿನಗಳಲ್ಲಿ ಮುಟ್ಟುವ ಸಾಧ್ಯತೆ ಇದೆ.
