ಅಲ್ಲು ಅರ್ಜುನ್ ಹೈದರಾಬಾದ್ ಮನೆ ಮೇಲೆ ಕಲ್ಲು ತೂರಾಟ, 8 ಮಂದಿ ಬಂಧನ
ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಟ ಅಲ್ಲು ಅರ್ಜುನ್ ಅವರ ಹೈದರಾಬಾದ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಚಿತ್ರಮಂದಿರ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಈ ದಾಳಿ ನಡೆದಿದೆ.
ಹೈದರಾಬಾದ್‌ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ ಘಟನೆ ಸಂಚಲನ ಮೂಡಿಸಿದೆ.ಅಲ್ಲು ಅವರ ಜೂಬಿಲಿ ಹಿಲ್ಸ್ ನಿವಾಸಕ್ಕೆ ಭಾನುವಾರ ಉಸ್ಮಾನಿಯಾ ವಿಶ್ವವಿದ್ಯಾಲಯದ ಹಲವಾರು ದಾಳಿ ನಡೆಸಿ ಆಸ್ತಿ ಹಾನಿ ಮಾಡಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ವಿಶ್ವವಿದ್ಯಾನಿಲಯದ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಎಂಟು ಸದಸ್ಯರನ್ನು ಬಂಧಿಸಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಜೆಎಸಿಯ ಹಲವು ಮುಖಂಡರನ್ನು ಒಳಗೊಂಡ ಗುಂಪು, ನಟನ ಮನೆಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದೆ. ಡಿಸೆಂಬರ್ 4 ರಂದು ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 35 ವರ್ಷದ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ ಒಂದು ಕೋಟಿ ನೀಡುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆದಿದೆ ಎನ್ನಲಾಗಿದೆ.
ಬಾಲಿವುಡ್ ತಾರೆಯರ ಸಕ್ಸಸ್‌ಪುಲ್ ಫ್ಯಾಷನ್ ಬ್ರ್ಯಾಂಡ್‌ಗಳು, ಹೃತಿಕ್ ರಿಂದ ಆಲಿಯಾ ಭಟ್‌ವರೆಗೆ
ಈ ಸಂಬಂಧ ವೀಡಿಯೊ ವೈರಲ್ ಆಗಿದ್ದು, ಹಲವು ಮಂದಿ ನಟನ ಮನೆಯೊಳಗೆ ನುಗ್ಗಿ ಆಸ್ತಿ, ಮನೆಯೊಳಗಿರುವ ವಸ್ತುಗಳಿಗೆ ಹಾನಿ ಮಾಡುವುದನ್ನು ತೋರಿಸಿದೆ. ಆವರಣದೊಳಗಿದ್ದ ಹೂವಿನ ಕುಂಡಗಳನ್ನೂ ಗುಂಪು ನಾಶಪಡಿಸಿದೆ.ಘಟನೆ ನಡೆದಾಗ ಅಲ್ಲು ಅರ್ಜುನ್ ತಮ್ಮ ನಿವಾಸದಲ್ಲಿ ಇರಲಿಲ್ಲ ಎಂಬುದು ಗಮನಾರ್ಹ.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೊಸ ಆರೋಪಗಳ ನಡುವೆ ಅಭಿಮಾನಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಿಂದನೀಯ ಭಾಷೆ ಅಥವಾ ಕೆಟ್ಟ ನಡವಳಿಕೆ ಮಾಡದೆ ದೂರವಿರಿ ಎಂದು ನಟ ಹೇಳಿದ ಗಂಟೆಗಳ ನಂತರ ಈ ದಾಳಿ ನಡೆದಿದೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಮಹಿಳೆ ರೇವತಿ ಸಾವನ್ನಪ್ಪಿದ್ದು, ಎಂಟು ವರ್ಷದ ಮಗ ಗಾಯಗೊಂಡು ಹೈದರಾಬಾದ್‌ನ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪುಷ್ಪ 2 OTT ಹಕ್ಕುಗಳು ಎಷ್ಟು ಕೋಟಿ? ನಿರ್ಮಾಪಕರಿಗೆ ಡಬಲ್ ಧಮಾಕ!
ಕಾಲ್ತುಳಿತದ ನಂತರ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಆದರೆ ಅದೇ ದಿನ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತು. ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ಮಹಿಳೆಯ ಪತಿಯ ದೂರಿನ ಮೇರೆಗೆ ಚಿತ್ರಮಂದಿರದ ಮಾಲೀಕ, ಭದ್ರತಾ ಸಿಬ್ಬಂದಿ ಮತ್ತು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಿತ್ರಮಂದಿರದ ಮಾಲೀಕ ಮತ್ತು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ವಿಮರ್ಶಾತ್ಮಕವಾಗಿ ಮತ್ತು ಉತ್ತಮ ಮಾರ್ಕೆಟಿಂಗ್ ಪಡೆದು ಗೆಲುವು ಸಾಧಿಸಿದ್ದರಿಂದ ಪುಷ್ಪ 2 ನಿರ್ಮಾಣವಾಯಿತು. 3 ವರ್ಷಗಳ ನಂತರ ಈ ಚಿತ್ರವು ಡಿಸೆಂಬರ್ 5 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು.