ಕನ್ನಡ ಚಿತ್ರರಂಗದ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದ ಡ್ಯಾನ್ಸ್ ಮಾಸ್ಟರ್ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳದ ಆರೋಪದ ಮೇಲೆ ಗೋವಾದಲ್ಲಿ ಬಂಧಿತರಾಗಿದ್ದಾರೆ. 

ಬೆಂಗಳೂರು (ಸೆ.19): ಕನ್ನಡ ಚಿತ್ರರಂಗದ ಖ್ಯಾತ ನಟರಾದ ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ ಸೇರಿದಂತೆ ದಕ್ಷಿಣ ಭಾರತದ ಸ್ಟಾರ್ ನಾಯಕರಿಗೆ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳದ ಕೇಸಿನಲ್ಲಿ ಗೋವಾದಲ್ಲಿ ಅರೆಸ್ಟ್ ಆಗಿದ್ದಾರೆ.

ಹೌದು, ಕೇರಳದಲ್ಲಿ ಹೇಮಾ ಸಮಿತಿ ವರದಿಯು ದೇಶದ ಚಿತ್ರರಂಗದಲ್ಲಿ ಸದ್ದು ಮಾಡುತ್ತರುವ ಬೆನ್ನಲ್ಲಿಯೇ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮೇಲೆ ಡ್ಯಾನ್ಸ್ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ಬಲಾತ್ಕಾರ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದು, ಇವರ ವಿರುದ್ಧ ಎಫ್​ಐಆರ್ ಕೂಡ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಪೊಲೀಸರು ಜಾನಿ ಮಾಸ್ಟರ್‌ಗಾಗಿ ತೀವ್ರ ಶೋಧ ಮಾಡುತ್ತಿದ್ದರು. ಆದರೆ, ಯಾರ ಕಣ್ಣಿಗೂ ಬೀಳದೇ ಪೊಲೀಸರ ಕಣ್ತಪ್ಪಿಸಿ ಗೋಾದಲ್ಲಿ ಮಜಾ ಮಾಡುತ್ತಿದ್ದ ಜಾನಿ ಮಾಸ್ಟರ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಪುನೀತ್ ರಾಜ್‌ಕುಮಾರ್ ಯುವರತ್ನ ಡ್ಯಾನ್ಸ್ ಕೋರಿಯೋಗ್ರಾಫರ್ ಮೇಲೆ ಬಲಾತ್ಕಾರ ಕೇಸ್!

ಲೈಂಗಿಕ ಕಿರುಕುಳ ನೀಡಿದ ಆರೋಪಿ ಜಾನಿ ಮಾಸ್ಟರ್ ಕನ್ನಡದಲ್ಲಿ ಸುದೀಪ್, ಪುನೀತ್​ ಸೇರಿದಂತೆ ಬೇರೆ ಭಾಷೆಯ ಟಾಪ್​ ಹೀರೋಗಳ ಸಿನಿಮಾದ ಹಾಡಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿ ಪ್ರಸಿದ್ಧಿ ಹೊಂದಿದ್ದರು. ಆದರೆ, ತಮ್ಮೊಂದಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಿದ್ದ ಕೇವಲ 21 ವರ್ಷದ ಯುವತಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲಿಯೇ ಈ ವಿಚಾರವನ್ನು ನೀನು ಯಾರಿಗೂ ಹೇಳಬಾರದು ಎಂದು ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.