ಬಾಲಿವುಡ್‌ ಚಿತ್ರರಂಗದ ಖ್ಯಾತ ಫೈನಾನ್ಷಿಯರ್ ಕಮ್ ನಿರ್ಮಾಪಕ ಆಗಿರುವ ಪ್ರಕಾಶ್‌ ಜಾಜು ಇದ್ದಕ್ಕಿದ್ದಂತೆ ನಟ ಅಕ್ಷಯ್ ಕುಮಾರ್ ವಿರುದ್ಧ ಟ್ಟೀಟ್‌ ಮಾಡಿ ಕೆಲವೇ  ಗಂಟೆಗಳಲ್ಲಿ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಏನಿದು ಟ್ಟೀಟ್‌? ಹೀಗೆ ಮಾಡಿಸಿದವರು ಯಾರು?

ಹೇಗಿದ್ದರು ನೋಡಿ ಬಾಲಿವುಡ್‌ನ ಈ ಸ್ಟಾರ್‌ಗಳು - ಥ್ರೋಬ್ಯಾಕ್‌ ಫೋಟೋಗಳು

ಟ್ಟೀಟ್‌ ವೈರಲ್:
ಟ್ಟಿಟರ್‌ನಲ್ಲಿ ಸಕ್ರಿಯರಾಗಿರುವ ಬಿ-ಟೌನ್‌ ಬಗ್ಗೆ ಒಂದಲ್ಲಾ ಒಂದು ಮಾಹಿತಿ ನೀಡುತ್ತಿರುವ ಪ್ರಕಾಶ್‌, ಜುಲೈ 23ರಂದು ಮಾಡಿದ ಟ್ಟೀಟ್‌ ಎಲ್ಲೆಡೆ ವೈರಲ್ ಆಗುತ್ತಿದೆ. 'ನಾನು ನಾಲ್ಕು ಪೆಗ್ ಎಣ್ಣೆ ಕುಡಿದಿದ್ದೀನಿ. ಖಂಡಿತವಾಗಿಯೂ ಸುಳ್ಳು ಹೇಳುವುದಿಲ್ಲ. ನನ್ನ 5 ವರ್ಷದ ಸಿನಿಮಾ ಜರ್ನಿಯಲ್ಲಿ ನಾನು ಕಂಡ  ದೊಡ್ಡ ಸ್ವಾರ್ಥಿ ಅಂದ್ರೆ ಅಕ್ಷಯ್ ಕುಮಾರ್. ಆ ವ್ಯಕ್ತಿಗೆ ಹಣ ಮಾಡುವುದಷ್ಟೇ ಮುಖ್ಯ,' ಎಂದು ಬರೆದುಕೊಂಡಿದ್ದರು.

ಪ್ರಕಾಶ್‌ ಟ್ಟೀಟ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಡಿಲೀಟ್‌ ಮಾಡಿದ್ದಾರೆ. ಈ ಸಣ್ಣ ಅವಧಿಯಲ್ಲಿಯೇ ಅನೇಕರು ಸ್ಕ್ರೀನ್‌ ಶಾಟ್‌ ತೆಗೆದುಕೊಂಡಿದ್ದು ವೈರಲ್ ಆಗುತ್ತಿದೆ.

ಪ್ರಿಯಾಂಕ ಮಾನೇಜರ್:
ನಟಿ ಪ್ರಿಯಾಂಕ ಚೋಪ್ರಾಗೂ ಮ್ಯಾನೇಜರ್‌ ಆಗಿದ್ದ ಪ್ರಕಾಶ್‌ ಜಾಜು 2004ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಲಿಟಿಗೇಷನ್‌ ಫೈಲ್ ಮಾಡಿದ್ದರು.  ತಮ್ಮ ಕಾರ್ಯದಲ್ಲಿ ಕೆಲವೊಂದು ನಿಯಮಗಳು ಪ್ರಿಯಾಂಕ ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ  ಇದಕ್ಕೊಂದು ಅಂತ್ಯ ಸಿಕ್ಕಿರಲಿಲ್ಲ. ಪ್ರಿಯಾಂಕಾ- ನಿಕ್‌ ಮದುವೆಯಾಗುವ ಮುನ್ನ ಈ ಕೇಸನ್ನು ಪ್ರಕಾಶ್‌ ಹಿಂಪಡೆದಿದ್ದಾರೆ.

ಇತ್ತೀಚೆಗೆ ಲಾಕ್‌ಡೌನ್ ಆದ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲಿಯೂ ಬಿ ಟೌನ್‌ನಲ್ಲಿ ನಡೆದ ಅನೇಕ ಹಿಂದಿನ ಘಟನೆಗಳು ಬಹಿರಂಗಗೊಳ್ಳುತ್ತಿವೆ. ನಟ, ನಟಿಯರು ಶೇರ್ ಮಾಡಿಕೊಳ್ಳುತ್ತಿರುವ ಥ್ರೋ ಬ್ಯಾಕ್ ಫೋಟೋಗಳು ಅನೇಕ ಕಥೆಗಳನ್ನು ಹೇಳುತ್ತಿವೆ. ವಿಶೇಷವಾಗಿ ಬಾಲಿವುಡ್‍‌ನ ಅನೇಕ ಅಫೇರ್ಸ್ ಬಹಿರಂಗಗೊಳ್ಳುತ್ತಿವೆ. ಅದರಲ್ಲಿ ಅಕ್ಷಯ್ ಕುಮಾರ್ ಅವರಿಗೆ ರವೀನಾ ಟಂಡನ್, ಶಿಲ್ಪಾ ಶೆಟ್ಟಿ ಅವರೊಂದಿಗಿನ ಅಫೇರ್ಸ್ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ಅವರು ಟ್ವಿಂಕಲ್ ಖನ್ನಾ ಅವರೊಂದಿಗೆ ಮದುವೆಯಾದ ನಂತರ ಪ್ರಿಯಾಂಕಾ ಚೋಪ್ರಾ ಅವರಿಗೆ ಅತೀವ ಹತ್ತಿರವಾದ ಸುದ್ದಿಯೂ ಕಾಡ್ಗಿಚ್ಚಿನಿಂತೆ ಹರಡಿತ್ತು. 

ತನ್ನನ್ನು ದ್ವೇಷಿಸುತ್ತಿದ್ದರೂ ಕರೀಷ್ಮಾಗೆ ಹೆಲ್ಪ್‌ ಮಾಡಿದ ನಟ ಅಕ್ಷಯ್‌ ಕುಮಾರ್‌

ದೇಶಕ್ಕೆ ಏನೇ ಕಷ್ಟ ಬರಲಿ, ಸೈನಿಕರ ಸಂಕಷ್ಟದಲ್ಲಿ ಮನ ಮಿಡಿಯುವ ಅಕ್ಷಯ್ ಕುಮಾರ್ ಅವರ ಇನ್ನೊಂದು ಮುಖದ ಬಗ್ಗೆ ಹೀಗೆ ಕೆಲವರು ಮಾತನಾಡಲು ಆರಂಭಿಸಿದ್ದಾರೆ. ಬಾಲಿವುಡ್‌ನಲ್ಲಿ ಹೆಚ್ಚು ಸಂಭಾವನೆ ಪಡೆಯುವ, ತಮ್ಮ ದುಡಿಮೆಗೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಕೆಲವೇ ಕೆಲವು ಬಾಲಿವುಡ್ ನಟರಲ್ಲಿ ಅಕ್ಷಯ್ ಕುಮಾರ್ ಮೊದಲಿಗರು. ಇಂಥವರ ಬಗ್ಗೆ ಈ ರೀತಿಯ ಹೇಳಿಕೆಗಳು ವ್ಯಕ್ತವಾಗುತ್ತಿರುವುದು ಅಕ್ಷಯ್ ಅಭಿಮಾನಿಗಳಿಗೆ ಆಶ್ಚರ್ಯ ತರುತ್ತಿದೆ.