ನಿಕ್ ಜೋನಸ್ ಕಾನ್ಸರ್ಟ್​ ವೇದಿಕೆಯಿಂದ ಓಡಿ ಹೋಗಿರೋ ವಿಡಿಯೋ ವೈರಲ್ ಆಗಿದೆ. ಅವರ ತಲೆಯ ಮೇಲೆ ಕೆಂಪು ಲೇಸರ್ ಬೆಳಕು ಬಿದ್ದ ನಂತರ, ಶಾರ್ಪ್ ಶೂಟರ್​ಗಳು ಗುರಿಯಿಟ್ಟಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಪತಿ ನಿಕ್ ಜೋನಸ್ (Nick Jonas) ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಿಯಾಂಕಾ ಪತಿ ಕಾನ್ಸರ್ಟ್​ನಲ್ಲಿ ಪರ್ಫಾರ್ಮ್ ಮಾಡುತ್ತಿರುವುದನ್ನು ಕಾಣಬಹುದು. ಪರ್ಫಾರ್ಮೆನ್ಸ್​ ವೇಳೆ ನಿಕ್ ಅವರ ತಲೆಯ ಮೇಲೆ ಕೆಂಪು ಬಣ್ಣದ ಲೇಸರ್ ಬೆಳಕು ಬೀಳುತ್ತದೆ. ತಮ್ಮ ತಲೆಯ ಮೇಲೆ ಲೇಸರ್ ಬೆಳಕು ಬಿದ್ದ ತಕ್ಷಣ ನಿಕ್ ತುಂಬಾ ಗಾಬರಿಗೊಂಡು, ಏನೂ ಯೋಚಿಸದೆ ಕಾನ್ಸರ್ಟ್​ನಿಂದ ಓಡಿ ಹೋಗುತ್ತಾರೆ. ಈ ವಿಡಿಯೋ ವೈರಲ್ ಆಗಿರುವುದರಿಂದ ಮತ್ತು ನಿಕ್ ಅವರ ತಲೆಯ ಮೇಲೆ ಕೆಂಪು ಲೇಸರ್ ಬೆಳಕು ಕಂಡು ಬಂದಿರುವುದರಿಂದ ಶಾರ್ಪ್ ಶೂಟರ್​ಗಳು ನಿಕ್ ಅವರನ್ನು ಗುರಿಯಾಗಿಸಿಕೊಂಡಿದ್ದರು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಟ್ವಿಟರ್ ಖಾತೆಯಲ್ಲಿ ನಿಕ್ ಅವರ ಕಾನ್ಸರ್ಟ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಸಂಚಲನ ಮೂಡಿಸಿದೆ.

Scroll to load tweet…

ಎರಡನೇ ಮದುವೆ ಸುದ್ದಿ ಬೆನ್ನಲ್ಲೇ ಟರ್ಕಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಸಾನಿಯಾ, ಜತೆಯಲ್ಲಿರೋರು ಯಾರು?

ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಒಬ್ಬ ಅದ್ಭುತ ಗಾಯಕ ಮತ್ತು ಆಗಾಗ್ಗೆ ತಮ್ಮ ಸಹೋದರನೊಂದಿಗೆ ಲೈವ್ ಪರ್ಫಾರ್ಮೆನ್ಸ್​ಗಳನ್ನು ನೀಡುತ್ತಿರುತ್ತಾರೆ. ನಿಕ್​ಗೆ ಅಭಿಮಾನಿಗಳ ಬಳಗ ದೊಡ್ಡದಿದೆ. ಇತ್ತೀಚೆಗೆ ನಿಕ್ ಒಂದು ಲೈವ್ ಕಾನ್ಸರ್ಟ್​ನಲ್ಲಿ ತಮ್ಮ ಸಹೋದರನೊಂದಿಗೆ ಪರ್ಫಾರ್ಮ್ ಮಾಡುತ್ತಿದ್ದರು. ಹಾಡು ಹಾಡುತ್ತಿರುವಾಗ ಯಾರೋ ತಮ್ಮ ತಲೆಗೆ ಕೆಂಪು ಬಣ್ಣದ ಲೇಸರ್ ಬೆಳಕನ್ನು ಹಾಯಿಸಿರುವುದು ನಿಕ್​ಗೆ ಅರಿವಾಯಿತು. ತಮ್ಮ ತಲೆಯ ಮೇಲೆ ಕೆಂಪು ಲೇಸರ್ ಬೆಳಕು ಕಂಡ ತಕ್ಷಣ ನಿಕ್ ಗಾಬರಿಗೊಂಡು ವೇದಿಕೆಯಿಂದ ಓಡಿ ಹೋದರು. ನಿಕ್ ಇದ್ದಕ್ಕಿದ್ದಂತೆ ಕಾನ್ಸರ್ಟ್​ ಬಿಟ್ಟು ಹೋದ ಕಾರಣ ಅಲ್ಲಿನ ಪ್ರೇಕ್ಷಕರು ದಂಗಾದರು. ನಿಕ್ ಹೋದ ನಂತರ ಆಯೋಜಕರು ಅವರ ಸಹೋದರ ಕೆವಿನ್​ಗೂ ವೇದಿಕೆಯಿಂದ ಕೆಳಗೆ ಬರಲು ಹೇಳಿದರು. ಯಾರೋ ಶಾರ್ಪ್ ಶೂಟರ್ ತಮ್ಮನ್ನು ಗುರಿಯಾಗಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ನಿಕ್​ಗೆ ಅನಿಸಿ, ಕಾರ್ಯಕ್ರಮ ಬಿಟ್ಟು ಓಡಿ ಹೋದರು ಎನ್ನಲಾಗಿದೆ. ನಿಕ್ ಜೋನಾಸ್, ಜೋ ಜೊನಾಸ್ ಮತ್ತು ಕೆವಿನ್ ಜೊನಾಸ್ ಅವರನ್ನು ಒಳಗೊಂಡ ಜೋನಾಸ್ ಬ್ರದರ್ಸ್ ಮಂಗಳವಾರ ಪ್ರೇಗ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಘಟನೆ ಸಂಭವಿಸಿದೆ.

ಬಿಗ್‌ಬಾಸ್‌ನಲ್ಲಿ ಕೈಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು! ಜಗಳದ ಕಿಚ್ಚು ಹೊತ್ತಿಕೊಳ್ಳಲು ಕ್ಯಾಪ್ಟನ್ ಫೇವರಿಸಂ ಕಾರಣನಾ?

ನಿಕ್ ಜೋನಸ್​ರನ್ನು ಗುರಿಯಾಗಿಸಿಕೊಂಡ ವ್ಯಕ್ತಿ ಬಂಧನ

ನಿಕ್ ಜೋನಸ್ ಕಾನ್ಸರ್ಟ್​ನಿಂದ ಹೋದ ನಂತರ ಅಲ್ಲಿ ತನಿಖೆ ನಡೆಸಲಾಯಿತು. ಲೇಸರ್ ತೋರಿಸಿದ ವ್ಯಕ್ತಿಯನ್ನು ಹಿಡಿದು ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಯಿತು. ಈ ವ್ಯಕ್ತಿಯನ್ನು ಹಿಡಿದ ನಂತರ ನಿಕ್ ಮತ್ತೆ ವೇದಿಕೆಗೆ ಬಂದು ತಮ್ಮ ಪರ್ಫಾರ್ಮೆನ್ಸ್​ ಪೂರ್ಣಗೊಳಿಸಿದರು ಎನ್ನಲಾಗಿದೆ. ಆದರೆ, ಈ ಘಟನೆ ಕುರಿತು ಪ್ರಿಯಾಂಕಾ ಚೋಪ್ರಾ ಅವರ ಪತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಅವರ ಅಭಿಮಾನಿಗಳು ತುಂಬಾ ಚಿಂತಿತರಾಗಿದ್ದಾರೆ. ನಿಕ್ ಜೀವ ಅಪಾಯದಲ್ಲಿದೆ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ದಿಗಿಲು ವ್ಯಕ್ತಪಡಿಸಿದ್ದಾರೆ.

2018 ರಲ್ಲಿ ಪ್ರಿಯಾಂಕಾ ಅವರನ್ನು ವಿವಾಹವಾದರು ಮತ್ತು ಜನವರಿ 2022 ರಲ್ಲಿ, ದಂಪತಿಗಳು ತಮ್ಮ ಮಗಳು ಮಾಲ್ಟಿ ಮೇರಿಯನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು.