ಬಾಲಿವುಡ್ ಕ್ಯೂಟ್ ಪಿಗ್ಗಿ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮೊದಲ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಚರಿಸಿಕೊಂಡಿದ್ದಾರೆ. ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದ್ದಾರೆ. 

ಗಂಡ- ಹೆಂಡತಿ ಜೊತೆಗಿರುವ  ಫೋಟೋವನ್ನು ಪ್ರಿಯಾಂಕ ಶೇರ್ ಮಾಡಿಕೊಂಡಿದ್ದಾರೆ.  ಜತೆಗೆ 'ಅಂದಿಗೂ, ಇಂದಿಗೂ, ಎಂದೆಂದಿಗೂ ನೀನೇ ನನ್ನ ಪ್ರಾಮಿಸ್.  ನನ್ನ ಜೀವನದಲ್ಲಿ ಖುಷಿಯ ಬಣ್ಣ ತುಂಬಿದವನು ನೀನು.  ಪ್ರತಿ ಕ್ಷಣವನ್ನು ಜೀವಂತವಾಗಿಸಿದ್ದೀಯಾ. ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ಹಸ್ಬೆಂಡ್ ಎಂದು ಬರೆದುಕೊಂಡಿದ್ದಾರೆ. 

 

ನಿಕ್ ಕೂಡಾ ಪತ್ನಿ ಮೇಲಿನ ಪ್ರೀತಿಯನ್ನು ಮಧುರವಾಗಿ ವ್ಯಕ್ತಪಡಿಸಿದ್ದಾರೆ.  'ಕಳೆದ ವರ್ಷ ಇದೇ ದಿನದಿಂದ ನಾವು ಜೊತೆಯಾಗಿರೋಣ ಎಂದು ಪ್ರಾಮಿಸ್ ಮಾಡಿದ್ದೆವು.  ಎಂದೆಂದಿಗೂ ನಿನ್ನನ್ನೇ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. 

ಪ್ರಿಯಾಂಕ- ನಿಕ್ ಮೊದಲ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದರೆ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಕಿಡಿಗೇಡಿಗಳು ಫೋಟೋಶಾಪ್ ಮಾಡಿದ್ದಾರೆ.  ಪ್ರಿಯಾಂಕ- ನಿಕ್ ತೋಳಿನಲ್ಲಿ ಪುಟ್ಟ ಕಂದಮ್ಮ ಇರುವಂತೆ ಫೋಟೋಶೂಟ್ ಮಾಡಿದ್ದಾರೆ.