ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಪ್ಯಾನ್ ವರ್ಲ್ಡ್ ಸಿನಿಮಾದ ಗುಟ್ಟನ್ನು ನಟ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ ಮಲ್ಲಿಕಾ ಬಿಚ್ಚಿಟ್ಟಿದ್ದಾರೆ.
ಭಾರತದಲ್ಲಿ ಬರೋಬ್ಬರಿ 1000 ಕೋಟಿ ಬಜೆಟ್‌ನಲ್ಲಿ ರಾಜಮೌಳಿ ಮತ್ತು ಮಹೇಶ್ ಬಾಬು ಸೇರಿ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಮಾಡಲಾಗುತ್ತಿರುವ ಎಸ್‌ಎಸ್‌ಎಂಬಿ-29 ಸಿನಿಮಾ ಗುಟ್ಟನ್ನು ನಟ ಮತ್ತು ನಿರ್ದೇಶಕ ಪೃಥ್ವೀರಾಜ್ ಸುಕುಮಾರನ್ ಅವರ ತಾಯಿ ಮಲ್ಲಿಕಾ ಬಿಚ್ಚಿಟ್ಟಿದ್ದಾರೆ. ಯಾವಾಗಲೂ ಗಡ್ಡವನ್ನು ಬಿಟ್ಟಿರುವ ಪೃಥ್ವೀರಾಜ್ ಸುಕುಮಾರನ್ ಗಡ್ಡ ಕ್ಲೀನ್ ಶೇವ್ ಮಾಡಿದ ಫೋಟೋದ ಬಗ್ಗೆ ಮಾತನಾಡುತ್ತಾ ಸಿನಿಮಾದ ಒಂದು ರಹಸ್ಯ ರಿವೀಲ್ ಮಾಡಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ಬೇರೆ ಭಾಷೆಯ ಪ್ರೇಕ್ಷಕರಿಗೂ ಚಿರಪರಿಚಿತರಾದ ಮಲಯಾಳಂ ನಟ. ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿರುವ ಇವರು, ಇತ್ತೀಚೆಗೆ ದೊಡ್ಡ ಬಜೆಟ್‌ನ ತೆಲುಗು ಮತ್ತು ಹಿಂದಿ ಚಿತ್ರಗಳಾದ (ಸಲಾರ್ 1, ಬಡೇ ಮಿಯಾನ್ ಛೋಟೇ ಮಿಯಾನ್) ಭಾಗವಾಗಿದ್ದರು. ನಿರ್ದೇಶಕರಾಗಿ ವೃತ್ತಿ ಜೀವನದ ಅತೀ ದೊಡ್ಡ ಚಿತ್ರ ಎನಿಸಿಕೊಂಡ ಎಂಪುರಾನ್ ಮತ್ತು ಬಹಳ ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದ ವಿಲಾಯತ್ ಬುದ್ಧ ಸಿನಿಮಾಗಳನ್ನು ಪೃಥ್ವಿರಾಜ್ ಸುಕುಮಾರನ್ ಪೂರ್ಣಗೊಳಿಸಿದ್ದಾರೆ. ಗಡ್ಡ ತೆಗೆದ ಗೆಟಪ್‌ನ ಫೋಟೋವನ್ನು ಹಂಚಿಕೊಂಡು, ಮುಂದಿನದು ಬೇರೆ ಭಾಷೆಯ ಚಿತ್ರ ಎಂದು ನಿನ್ನೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆ ಚಿತ್ರ ಯಾವುದು ಎಂದು ಆಗಲೇ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿತ್ತು. ಈಗ ಅವರ ತಾಯಿ ಮತ್ತು ನಟಿಯಾದ ಮಲ್ಲಿಕಾ ಸುಕುಮಾರನ್, ಆ ಗೆಟಪ್ ಯಾವ ಚಿತ್ರಕ್ಕೋಸ್ಕರ ಎಂದು ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಲೀಕ್ ಆಯ್ತು SSMB 29 ಚಿತ್ರದ ಮಹೇಶ್ ಬಾಬು ಫೈನಲ್ ಲುಕ್: ಸಿಂಹ ತರ ಕಾಣ್ತಿದ್ದಾರೆ ಟಾಲಿವುಡ್ ಪ್ರಿನ್ಸ್!
ಪೃಥ್ವಿರಾಜ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗೆ ಉತ್ತರಿಸುವಾಗ ಮಲ್ಲಿಕಾ ಸುಕುಮಾರನ್ ಈ ವಿಷಯ ತಿಳಿಸಿದ್ದಾರೆ. ಇದನ್ನೆಲ್ಲಾ ಎಐ ಮಾಡಿದೆ, ಯಾರೂ ನಂಬಬೇಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದರು. ಅದಕ್ಕೆ ಮಲ್ಲಿಕಾ ಸುಕುಮಾರನ್, ಅಲ್ಲ, ಮುಂದಿನ ಸಿನಿಮಾ ರಾಜಮೌಳಿ ಸಿನಿಮಾ ಎಂದು ಹೇಳಿದ್ದಾರೆ. ಅವನು ಇವತ್ತು ರಾತ್ರಿ ಚಿತ್ರತಂಡ ಇರುವಲ್ಲಿಗೆ ಹೋಗಲು ವಿಮಾನದಲ್ಲಿ ಹೋಗುತ್ತಿದ್ದಾನೆ ಎಂದು ಬರೆದಿದ್ದಾರೆ. ಈ ಮೂಲಕ ಎಸ್‌ಎಸ್‌ಎಂಬಿ-29 ಸಿನಿಮಾದ ಒಳಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಮಲ್ಲಿಕಾ ಸುಕುಮಾರನ್ ಹೇಳಿರುವ ಹಾಗೆ, ರಾಜಮೌಳಿ ಅವರು ಆರ್ಆರ್‌ಆರ್ ನಂತರ ಮಹೇಶ್ ಬಾಬು ಅವರನ್ನು ನಾಯಕನನ್ನಾಗಿ ಇಟ್ಟುಕೊಂಡು ಸಿನಿಮಾ ಮಾಡಲಿದ್ದಾರೆ. ಇದು 1000 ಕೋಟಿಗೂ ಹೆಚ್ಚು ಬಜೆಟ್‌ನ ಸಿನಿಮಾ. ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಪೃಥ್ವಿರಾಜ್ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಎಂಪುರಾನ್ ಪ್ರಮೋಷನ್‌ನಲ್ಲೂ ಪೃಥ್ವಿರಾಜ್ ಅವರಿಗೆ ಈ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಚರ್ಚೆಗಳು ನಡೆಯುತ್ತಿವೆ ಎಂದು ಅವರು ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಕಾಡಿನಲ್ಲಿ SSMB 29 ಚಿತ್ರೀಕರಣ; ಮಹೇಶ್ ಬಾಬು ಇನ್ ಡೇಂಜರಸ್ ಪ್ಲೇಸ್!
ಇದು ಆಫ್ರಿಕನ್ ಜಂಗಲ್ ಅಡ್ವೆಂಚರ್ ಸಿನಿಮಾ ಎಂದು ವರದಿಯಾಗಿದೆ. ಸದ್ಯಕ್ಕೆ ಈ ಚಿತ್ರಕ್ಕೆ ಎಸ್ಎಸ್ಎಂಬಿ 29 (ಎಸ್ ಎಸ್ ರಾಜಮೌಳಿ- ಮಹೇಶ್ ಬಾಬು ಎಂಬುದರ ಚಿಕ್ಕ ರೂಪ) ಎಂದು ಹೆಸರಿಡಲಾಗಿದೆ. ರಾಜಮೌಳಿ ಈ ಚಿತ್ರವನ್ನು ವಿದೇಶಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
