Asianet Suvarna News Asianet Suvarna News

IVF ಬಿಟ್ಟು ಸರೋಗಸಿಯಿಂದ ಮಗು ಪಡೆದಿದ್ಯಾಕೆಂದು ಬಹಿರಂಗಪಡಿಸಿದ ನಟಿ ಪ್ರೀತಿ ಜಿಂಟಾ

ತಾಯ್ತನವನ್ನು ಸ್ವೀಕರಿಸಲು ಪಟ್ಟ ಕಷ್ಟಗಳ ಬಗ್ಗೆ ನಟಿ ಪ್ರೀತಿ ಜಿಂಟಾ ಮನಬಿಚ್ಚಿ ಮಾತನಾಡಿದ್ದಾರೆ. ಸರೋಗಸಿಯ ಮೂಲಕ ಅವಳಿ ಮಕ್ಕಳನ್ನು ಪಡೆಯುವ ಮೊದಲು ಐವಿಎಫ್ ಪ್ರಯತ್ನದಲ್ಲಿ ಅನುಭವಿಸಿದ ನೋವುಗಳನ್ನು ಬಹಿರಂಗಪಡಿಸಿದ್ದಾರೆ.

Preity Zinta reveals why she chose surrogacy over IVF gow
Author
First Published Sep 4, 2024, 1:50 PM IST | Last Updated Sep 4, 2024, 2:57 PM IST

ತಾಯ್ತನವನ್ನು ಸ್ವೀಕರಿಸಲು  ತಾನು ಪಟ್ಟ ಕಷ್ಟದ ಹಾದಿಯ ಬಗ್ಗೆ ಪ್ರೀತಿ ಜಿಂಟಾ ಮೊದಲ ಬಾರಿಗೆ ಮಾತನಾಡಿದ್ದಾರೆ. ಸರೋಗಸಿಯ (ಬಾಡಿಗೆ ತಾಯ್ತನ) ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೊದಲು ಐವಿಎಫ್ ಪ್ರಯತ್ನಿಸಿದ ನಂತರ  ಏನಾಯ್ತು ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ. 

ವೋಗ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಪೋಷಕತ್ವದ ಸಮಸ್ಯೆಗಳ ಬಗ್ಗೆ ಪ್ರೀತಿ ಮೊದಲ ಬಾರಿಗೆ ಮಾತನಾಡಿದ್ದಾರೆ.  ಪ್ರೀತಿ ತನ್ನ ಸಂತೋಷದ ದಿನಗಳನ್ನು ಚರ್ಚಿಸದಿರಲು ನಿರ್ಧರಿಸಿದರು. ಆದರೂ  ಸಂದರ್ಶಕರು ನಿಜ ಜೀವನದಲ್ಲಿ ಸನ್‌ಶೈನ್ ಹುಡುಗಿಯಂತಿರಲು  ಒತ್ತಡವನ್ನು ಅನುಭವಿಸಿದ್ದೀರಾ ಎಂದು ಪ್ರಶ್ನಿಸಿದಾಗ, ಪ್ರೀತಿ  ಮನಬಿಚ್ಷಿ ಮಾತನಾಡಿದರು.

ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ಎಲ್ಲರಂತೆ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ಎದುರಿಸಿದ್ದೇನೆ  ಎಂದು ಒಪ್ಪಿಕೊಂಡ ನಟಿ ಪ್ರೀತಿ ತಾನು ಕಷ್ಟಪಟ್ಟಿದ್ದೇನೆ ಮತ್ತು ಕಷ್ಟದ ಸಮಯವನ್ನು ಎದುರಿಸಿದ್ದೇನೆ. ತಾನು ಐವಿಎಫ್  ಸಮಯದಲ್ಲಿ, ಸಂತೋಷವಾಗಿರಲು ಹೆಣಗಾಡಿದೆ ಎಂದರು. 49 ವರ್ಷದ  ನಟಿ ಎಲ್ಲರಂತೆ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ಎದುರಿಸಿದ್ದೇನೆ ಎಂದು ಒಪ್ಪಿಕೊಂಡರು. ನಿಜ ಜೀವನದಲ್ಲಿ ಯಾವಾಗಲೂ ಹರ್ಷಚಿತ್ತದಿಂದ ಇರುವುದು ಕಷ್ಟ, ವಿಶೇಷವಾಗಿ ಕಷ್ಟದ ಕ್ಷಣವನ್ನು ಎದುರಿಸುವಾಗ, ಮತ್ತು ನನ್ನ ಐವಿಎಫ್ ಚಿಕಿತ್ಸೆಯ ಸಮಯದಲ್ಲಿ  ಎಂದರು. 

ಐವಿಎಪ್‌ ಫೇಲ್ ಆದ ಬಳಿಕ ಅಂತಿಮವಾಗಿ ಪ್ರೀತಿ ಸರೋಗಸಿಯನ್ನು ಆರಿಸಿಕೊಂಡರು ಮತ್ತು ನವೆಂಬರ್ 2021 ರಲ್ಲಿ ಅವಳಿ ಮಕ್ಕಳಾದ ಜಿಯಾ ಮತ್ತು ಜೈ ಅವರನ್ನು ಸ್ವಾಗತಿಸಿದರು. ಪ್ರೀತಿಯವರ ಐವಿಎಫ್ ಅನುಭವ ಸರಳವಾಗಿರಲಿಲ್ಲವಂತೆ. ಅತ್ಯಂತ ಕೆಟ್ಟ  ದಿನಗಳನ್ನು ಹೊಂದಿದ್ದ ಆ ಸಮಯದಲ್ಲಿ ಎಲ್ಲಾ ಸಮಯದಲ್ಲೂ ದಯೆ ತೋರುವುದು ಕಷ್ಟಕರವೆಂದು ನಾನು ಕಂಡುಕೊಂಡೆ.  ತನ್ನ ತಲೆಯನ್ನು ಗೋಡೆಗೆ ಹೊಡೆದು ಅತ್ತ ದಿನಗಳಿವೆ  ಎಂದಿದ್ದಾರೆ. ಯಾವಾಗಲೂ ಸಕಾರಾತ್ಮಕ ಮನೋಭಾವವನ್ನು ಹೊಂದಿರುವುದು ತುಂಬಾ ಕಷ್ಟಕರವಾಗಿತ್ತು. ಕೆಲವೊಮ್ಮೆ ನಾನು ಮಾಡಲು ಬಯಸಿದ್ದೆಲ್ಲವೂ ಫೇಲ್ ಆಗುತ್ತಿತ್ತು. ನನ್ನ ತಲೆಯನ್ನು ಗೋಡೆಗೆ ಹೊಡೆದುಕೊಂಡು ಅಳುವುದು ಅಥವಾ ಯಾರೊಂದಿಗೂ ಮಾತನಾಡದಿರುವುದು ಮಾಡುತ್ತಿದ್ದೆ  ಎಂದಿದ್ದಾರೆ.

ಕನ್ನಡಿಗ ಉದ್ಯಮಿ ನಿಖಿಲ್ ಜತೆ ಡೇಟಿಂಗ್ ನಲ್ಲಿರುವ ನಟಿ ರಿಯಾ ಚಕ್ರವರ್ತಿ ಮದುವೆಯಾಗೋದಿಲ್ಲವಂತೆ!

ಪ್ರೀತಿ ಜಿಂಟಾ ಮತ್ತು ಅವರ ಸಂಗಾತಿ ಜೀನ್ ಗುಡ್‌ಎನಫ್ ನವೆಂಬರ್ 2021 ರಲ್ಲಿ ತಮ್ಮ ಅವಳಿ ಮಕ್ಕಳನ್ನು ಸ್ವಾಗತಿಸಿದರು. ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದರು. ಅವರು ತಮ್ಮ ಮಕ್ಕಳ ಹೆಸರುಗಳನ್ನು ಸಹ ಪ್ರಕಟಿಸಿದರು ಮತ್ತು ಪ್ರೀತಿಯ ಪ್ರಯಾಣದಲ್ಲಿ ಭಾಗವಹಿಸಿದ್ದಕ್ಕಾಗಿ ಸರೋಗೇಟ್‌ಗೆ ಕೃತಜ್ಞತೆ ಸಲ್ಲಿಸಿದರು. 2022 ರ ತಾಯಂದಿರ ದಿನದಂದು ಪ್ರೀತಿ ತನ್ನ ಅವಳಿ ಮಕ್ಕಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios