ಬಾಲಿವುಡ್ ನಟಿ ಪ್ರತಿಭಾ ರಂತ ‌ ತಮ್ಮ ಪಿರಿಯಡ್ಸ್‌ ಹಾಗೂ ಬಾಯ್‌ ಫ್ರೆಂಡ್‌ ಇಟ್ಟ ಬೇಡಿಕೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪ್ರತಿಭಾ ರಂತ ಬಾಯ್‌ ಫ್ರೆಂಡ್‌ ಗೆ ಪಿರಿಯಡ್ಸ್‌ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲವಂತೆ. ಸ್ಯಾನಿಟರಿ ಪ್ಯಾಡ್‌ ಕೂಡ ಆತ ನೋಡಿರಲಿಲ್ಲ. ಅದನ್ನು ತೋರಿಸಿ, ಪಿಡಿಯಡ್ಸ್‌ ಬಗ್ಗೆ ಹೇಳಿದ್ದ ಪ್ರತಿಭಾ, ಪ್ರತಿ ತಾಯಿ ಇದ್ರ ಬಗ್ಗೆ ತನ್ನ ಮಗನಿಗೆ ತಿಳಿಸಬೇಕು ಎನ್ನುತ್ತಾರೆ. 

ಬಾಲಿವುಡ್ ನ ಲಾಪತಾ ಲೇಡೀಸ್ ಸಿನಿಮಾ (Bollywood laapataa-ladies movie) ಮೂಲಕ ಪ್ರಸಿದ್ಧಿಗೆ ಬಂದ ನಟಿ ಪ್ರತಿಭಾ ರಂತ (actress Pratibha Ranta) ಪಿರಿಯಡ್ಸ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಿರಿಯಡ್ಸ್ ಸಮಯದಲ್ಲಿ ಬಾಯ್ ಫ್ರೆಂಡ್ ಕೇಳಿದ್ದ ಪ್ರಶ್ನೆಯನ್ನು ಅವರು ಎಲ್ಲರ ಮುಂದಿಟ್ಟಿದ್ದಾರೆ. ಅವರ ಮಾತನ್ನು ಕೇಳಿ ವೀಕ್ಷಕರು ಅಚ್ಚರಿಗೊಳಗಾಗಿದ್ದಾರೆ. ಹಾಗೆಯೇ ಗಂಡು ಮಕ್ಕಳ ತಾಯಂದಿರಿಗೆ ಇದೊಂದು ಪಾಠವಾಗಿದೆ. ಪಿರಿಯಡ್ಸ್ (periods) ಹೆಣ್ಣು ಮಕ್ಕಳಿಗೆ ಸೀಮಿತ ಎಂಬ ನಂಬಿಕೆ ಈಗ್ಲೂ ಜನರಲ್ಲಿದೆ. ಜನರು ಪಿರಿಯಡ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡೋದಿಲ್ಲ. ಅದನ್ನು ನಿಷಿದ್ಧ ಎನ್ನುವಂತೆ ನೋಡೋದಲ್ಲದೆ ತಮ್ಮ ಗಂಡು ಮಕ್ಕಳಿಗೆ ಇದ್ರ ಬಗ್ಗೆ ಸೂಕ್ತ ಜ್ಞಾನ ನೀಡೋದಿಲ್ಲ. ಮಕ್ಕಳು ಟಿವಿ ಅಥವಾ ಲೇಖನ, ಸ್ನೇಹಿತರ ಸಹಾಯದಿಂದ ಅಷ್ಟೋ ಇಷ್ಟೋ ತಿಳಿದಿರ್ತಾರೆಯೇ ವಿನಃ ಅವರಿಗೆ ಅದ್ರ ಬಗ್ಗೆ ಸಂಪೂರ್ಣ ಮಾಹಿತಿ ಸಿಗೋದಿಲ್ಲ. ಅದಕ್ಕೆ ಪ್ರತಿಭಾ ರಂತ ಹಳೆ ಬಾಯ್ ಫ್ರೆಂಡ್ ಕೇಳಿದ್ದ ಪ್ರಶ್ನೆಯೇ ಉತ್ತಮ ನಿದರ್ಶನ.

ಪ್ರತಿಭಾ ರಂತ ಸಂದರ್ಶನವೊಂದರಲ್ಲಿ ಬಾಯ್ ಫ್ರೆಂಡ್ ಹಾಗೂ ಪಿರಿಯಡ್ಸ್ ಮಾತುಕತೆ ಬಗ್ಗೆ ವಿವರಿಸಿದ್ದಾರೆ. ಅವರಿಗೊಂದು ಬಾಯ್ ಫ್ರೆಂಡ್ ಇದ್ದನಂತೆ. ಒಂದು ದಿನ ಡಾನ್ಸ್ ಕ್ಲಾಸ್ ನಿಂದ ವಾಪಸ್ ಬರ್ತಿದ್ದ ವೇಳೆ ಪ್ರತಿಭಾ ರಂತ ತನ್ನ ಬಾಯ್ ಫ್ರೆಂಡ್ ಗೆ ಪಿರಿಯಡ್ಸ್ ಬಗ್ಗೆ ಹೇಳಿದ್ದಾರೆ. ನನಗೆ ಪಿರಿಯಡ್ಸ್ ಆಗಿದ್ದು, ನಡೆಯೋಕೆ ಆಗ್ತಿಲ್ಲ ಎಂದಿದ್ದಾರೆ. ಈ ಮಾತನ್ನು ಕೇಳಿದ ಬಾಯ್ ಫ್ರೆಂಡ್ ಅಚ್ಚರಿ ಉತ್ತರ ನೀಡಿದ್ದನಂತೆ.

ಅಪ್ಪು ಹಾಡಿಗೆ ನಾಚುತ್ತಲೇ ಹೆಜ್ಜೆ ಹಾಕಿದ ಅಶ್ವಿನಿ ಪುನೀತ್ ರಾಜಕುಮಾರ್… ವೀಡಿಯೋ ವೈರಲ್

ಪಿರಿಯಡ್ಸ್ ವಿಷ್ಯ ಕೇಳಿದ ಪ್ರತಿಭಾ ಬಾಯ್ ಫ್ರೆಂಡ್ ಅಚ್ಚರಿಗೊಳಗಾಗಿದ್ದನಂತೆ. ಇದೇ ಮೊದಲ ಬಾರಿ ಒಬ್ಬ ಹುಡುಗಿ ಆತನ ಮುಂದೆ ಪಿರಿಯಡ್ಸ್ ಬಗ್ಗೆ ಮಾತನಾಡಿದ್ದಳು ಎನ್ನುತ್ತಾರೆ ಪ್ರತಿಭಾ. ಆತನಿಗೆ ಸ್ಪಂದಿಸಿದ್ದ ಪ್ರತಿಭಾ ಜೈವಿಕ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ, ಸ್ಯಾನಿಟರಿ ಪ್ಯಾಡ್ ತೋರಿಸುವಂತೆ ಬಾಯ್ ಫ್ರೆಂಡ್ ನನ್ನನ್ನು ಕೇಳಿದ್ದ. ಆತನಿಗೆ ಸ್ಯಾನಿಟರಿ ಪ್ಯಾಡ್ ಹೇಗಿರುತ್ತೆ ಎನ್ನುವುದು ತಿಳಿದಿರಲಿಲ್ಲ. ಅಮ್ಮ ನನಗೆ ಇದನ್ನು ತೋರಿಸಿಲ್ಲ ಎಂದು ಬಾಯ್ ಫ್ರೆಂಡ್ ಹೇಳ್ತಿದ್ದ. ನನ್ನ ಬ್ಯಾಗ್ ನಲ್ಲಿದ್ದ ಪ್ಯಾಡ್ ತೆಗೆದು ತೋರಿಸಿದ್ದೆ. ಪ್ಯಾಡನ್ನು ನಿಧಾನವಾಗಿ ತೆಗೆದು ನೋಡವಂತೆ ಹೇಳಿದ್ದೆ ಎಂದು ಪ್ರತಿಭಾ ರಂತ ಹೇಳಿದ್ದಾರೆ.

ಪಿರಿಯಡ್ಸ್ ಮಹಿಳೆಯರಿಗಾದ್ರೂ ಅದನ್ನು ಪುರುಷರು ತಿಳಿಯಬೇಕು. ತಾಯಂದಿರ ಜವಾಬ್ದಾರಿ ಇದು. ಪಿರಿಯಡ್ಸ್ ವಿಷ್ಯವನ್ನು ಮುಚ್ಚಿಡದೆ ಮಕ್ಕಳಿಗೆ ತಿಳಿಸಬೇಕು ಎಂದು ಪ್ರತಿಭಾ ರಂತ ಸಂದರ್ಶನದಲ್ಲಿ ಹೇಳಿದ್ದಾರೆ. ಕಿರಣ್ ರಾವ್ ಅವರ ಲಾಪತಾ ಲೇಡೀಸ್ ನಲ್ಲಿ ಪ್ರತಿಭಾ ನಟಿಸಿದ್ದಾರೆ. ಈ ಸಿನಿಮಾ 2025 ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ. ನಿತಾಂಶಿ ಗೋಯಲ್, ಪ್ರತಿಭಾ ರಂತ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ನಂತ್ರ ಪ್ರತಿಭಾ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಚಿತ್ರದಲ್ಲಿ ಜಯಾ ಪಾತ್ರವನ್ನು ನಿರ್ವಹಿಸಿದ ಪ್ರತಿಭಾ, ಸಂಜಯ್ ಲೀಲಾ ಬನ್ಸಾಲಿಯವರ ಹಿರಾಮಂಡಿಯಲ್ಲೂ ಕಾಣಿಸಿಡಿದ್ದಾರೆ. 

ಲೈಂಗಿಕ ಆಟಿಕೆ ಬಳಸೋ ಮುನ್ನ ತಿಳಿದುಕೊಳ್ಳಿ ಈ ಟಿಪ್ಸ್​: ಇಲ್ಲದಿದ್ರೆ ಪ್ರಾಣಕ್ಕೇ ಕುತ್ತು, ಜಾಗ್ರತೆ!

24 ವರ್ಷದ ಪ್ರತಿಭಾ ರಂತ ಹಿಮಾಚಲ ಪ್ರದೇಶದವರು. ಪ್ರತಿಭಾ ತಮ್ಮ ನಟನಾ ವೃತ್ತಿಜೀವನವನ್ನು ಕುರ್ಬಾನ್ ಹುವಾ (2020-2021) ಎಂಬ ಟಿವಿ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆಧಾ ಇಷ್ಕ್‌ನಲ್ಲಿಯೂ ಪ್ರತಿಭಾ ನಟಿಸಿದ್ದರು. ಲಾಪತಾ ಲೇಡೀಸ್ ಅವರ ಮೊದಲ ಸಿನಿಮಾ. ಹಿಂದಿನ ವರ್ಷ ಮೇನಲ್ಲಿ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಅದಾದ್ಮೇಲೆ ಪ್ರತಿಭಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.