ಕಳಪೆ ಗ್ರಾಫಿಕ್ಸ್, ಹಿಗ್ಗಾಮುಗ್ಗಾ ಟ್ರೋಲ್; 'ಆದಿಪುರುಷ್' ಬಿಡುಗಡೆ ಮುಂದಕ್ಕೆ, ಹೊಸ ರಿಲೀಸ್ ಡೇಟ್ ಘೋಷಣೆ
ಎಲ್ಲವು ಅಂದುಕೊಂಡಂತೆ ಆಗಿದ್ದರೆ ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿಗೆ ರಿಲೀಸ್ ಆಗಬೇಕಿತ್ತು. ಆದರೀಗ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
ಎಲ್ಲವು ಅಂದುಕೊಂಡಂತೆ ಆಗಿದ್ದರೆ ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿಗೆ ರಿಲೀಸ್ ಆಗಬೇಕಿತ್ತು. ಆದರೀಗ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಆದಿಪುರುಷ್ ಸಂಕ್ರಾಂತಿ ರೇಸ್‌ನಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಆದರೀಗ ಈ ಬಗ್ಗೆ ಸಿನಿಮಾತಂಡವೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಆದಿಪುರುಷ್ ಜನವರಿಯಿಂದ ಜೂನ್‌ಗೆ ಮುಂದಕ್ಕೆ ಹೋಗಿದೆ.
ಆದಿಪುರುಷ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಹಾಕಿತ್ತು. ಆದರೆ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅಷ್ಟೇ ನಿರಾಸೆ ಮೂಡಿಸಿದೆ. ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಸೇರಿದಂತೆ ಅನೇಕ ವಿಚಾರಗಳಿಗೆ ಪ್ರಭಾಸ್ ಸಿನಿಮಾ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆ ಸಿನಿಮಾತಂಡಕ್ಕೆ ಭಯ ಹುಟ್ಟಿಸಿದ್ದು ರೀಶೂಟ್ ಮಾಡಲು ನಿರ್ಧರಿಸಿದೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾದ ಆದಿಪುರುಷ್ ಟ್ರೋಲ್ ಆದ ಪರಿಗೆ ಚಿತ್ರತಂಡ ರಿಲೀಸ್ ಡೇಟ್ ಅನ್ನೇ ಮುಂದಕ್ಕೆ ಹಾಕಿದೆ.
ಸದ್ಯ ಸಿನಿಮಾತಂಡ ಹೇಳಿಕೆ ಬಿಡುಗಡೆ ಮಾಡಿದ್ದು ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸಿನಿಮಾದ ಕೆಲಸ ಇನ್ನು ಬಾಕಿ ಇರುವ ಕಾರಣ ಆದಿಪುರುಷ್ ಮುಂದಿನ ವರ್ಷ ಜೂನ್ 16ರಂದು ರಿಲೀಸ್ ಆಗುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸಿನಿಮಾತಂಡ ದೀರ್ಘವಾದ ಪೋಸ್ಟ್ ರಿಲೀಸ್ ಮಾಡಿದೆ.
Prabhas: ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಟ್ರೋಲ್: 500 ಕೋಟಿ ಬಜೆಟ್‌ನ ಆದಿಪುರುಷ್ ರೀಶೂಟ್‌ಗೆ ನಿರ್ಧಾರ
'ಆದಿಪುರುಷ್ ಒಂದು ಸಿನಿಮಾ ಮಾತ್ರವಲ್ಲ. ಪ್ರಭು ಶ್ರೀರಾಮನ ಮೇಲಿನ ನಮ್ಮ ಭಕ್ತಿ ಮತ್ತು ಸಂಸ್ಕೃತಿ, ಇತಿಹಾಸದ ಮೇಲಿನ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವೀಕ್ಷಕರಿಗೆ ಸಂಪೂರ್ಣ ದೃಶ್ಯ ಅನುಭವವನ್ನು ನೀಡಲು ನಾವು ಚಿತ್ರದಲ್ಲಿ ಕೆಲಸ ಮಾಡುವ ತಂಡಗಳಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಆದಿಪುರುಷ್ ಈಗ ಜೂನ್ 16, 2023 ರಂದು ಬಿಡುಗಡೆಯಾಗಲಿದೆ. ಭಾರತವು ಹೆಮ್ಮೆ ಪಡುವಂತಹ ಚಲನಚಿತ್ರವನ್ನು ಮಾಡಲು ನಾವು ಬದ್ಧರಾಗಿದ್ದೇವೆ. ನಿಮ್ಮ ಬೆಂಬಲ, ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಮುಂದುವರಿಸಿಕೊಂಡು ಹೋಗುತ್ತಿದೆ' ಎಂದು ಹೇಳಿದ್ದಾರೆ.
ಈಗಾಗಲೇ ಸಿನಿಮಾಗೆ 500 ಕೋಟಿ ಸುರಿಯಲಾಗಿದೆ. ಟ್ರೋಲ್ ಆದ ಕಾರಣಕ್ಕೆ ಸಿನಿಮಾದ ಕೆಲವು ದೃಶ್ಯಗಳನ್ನು ರೀ ಶೂಟ್ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಚಿತ್ರದ ವಿಎಫ್‌ಎಕ್ಸ್ ಅನ್ನು ಉತ್ತಮ ರೀತಿಗೆ ಹೆಚ್ಚಿಸಲು ಸಿನಿಮಾತಂಡ ಇನ್ನು ಸಮಯ ತೆಗೆದುಕೊಂಡಿದೆ. ಹಾಗಾಗಿ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿದೆ. ಯಾವೆಲ್ಲ ದೃಶ್ಯಗಳನ್ನು ರೀ ಶೂಟ್ ಮಾಡಿ ಅಭಿಮಾನಿಗಳ ಮುಂದೆ ಹೇಗೆ ಬರಲಿದೆ ಎಂದು ನೋಡಲು ಜೂನ್ ವರೆಗೂ ಕಾಯಲೇ ಬೇಕು.
Adipurush; ಇಂದಿನ ರಾವಣ ಇರೋದೆ ಹೀಗೆ, ಸೈಫ್ ಪಾತ್ರ ಸಮರ್ಥಿಸಿಕೊಂಡ ನಿರ್ದೇಶಕ ಓಂ ರಾವುತ್
ಅಂದಹಾಗೆ ಆದಿಪುರುಷ್ ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ನಟಿಸಿದ್ದಾರೆ. ಸಾಕಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ ಆದಿಪುರುಷ್ ನೋಡಲು ಅಭಿಮಾನಿಗಳು ಜೂನ್ ವರೆಗೂ ಕಾಯಲೇ ಬೇಕು.