ಅಭಿಮಾನಿಗಳಿಗೆ ಖುಷ್ ಖಬರ್ ಕೊಟ್ಟ ಪ್ರಭಾಸ್; ಏನದು ವಿಚಾರ?
ಅಭಿಮಾನಿಗಳಿಗೆ ಖುಷ್ ಖಬರ್ ಕೊಟ್ಟ ಪ್ರಭಾಸ್ | ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರಭಾಸ್ | ಸಾಹೋ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಪ್ರಭಾಸ್
ಬೆಂಗಳೂರು (ಏ.13): ಬಾಹುಬಲಿ ಮೂಲಕ ಭಾರೀ ಅಲೆಯನ್ನೇ ಎಬ್ಬಿಸಿದ ಪ್ರಭಾಸ್ ಯಾವಾಗ ಬಾಲಿವುಡ್ ಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
#MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !
ಡಾರ್ಲಿಂಗ್ ಪ್ರಭಾಸ್ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ’ಸಾಹೋ’ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಡಲಿದ್ದಾರೆ. ಬಾಲಿವುಡ್ ಗೆ ಕಾಲಿಡುತ್ತಿದ್ದುದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಭಾಸ್, ಸಾಹೋ, ಸ್ಕ್ರೀನ್ ಪ್ಲೇ ಆಧಾರಿತ ಸಿನಿಮಾ. ಬಾಹುಬಲಿ ನಂತರ ಬರುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಸುಜೀತ್ ಹಾಗೂ ಅವರ ಟೀಂ ಮೂರು ವರ್ಷಗಳಿಂದ ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದೆ. ನನ್ನನ್ನು ಆ್ಯಕ್ಷನ್ ಚಿತ್ರಗಳಲ್ಲಿ ನೋಡಲು ಜನ ಇಷ್ಟಪಡುತ್ತಾರೆ ಎಂದು ಪ್ರಭಾಸ್ ಹೇಳಿದ್ದಾರೆ.
ಕಿರುತೆರೆಯ ಈ ನಟಿ ಅಮ್ಮನಾಗುತ್ತಿದ್ದಾರೆ!
ನಾನು ಇದುವರೆಗೂ ಬಾಲಿವುಡ್ ನಟರ ಜೊತೆ ನಟಿಸಿಲ್ಲ. ಶ್ರದ್ಧಾ ಕಪೂರ್ ಜೊತೆ ನಟಿಸುತ್ತಿರುವುದು ಖುಷಿಯ ವಿಚಾರ. ಹಾಡೊಂದರಲ್ಲಿ ಬಂದು ಹೋಗುವ ಸೀನ್ ಇದೆ. ಅದು ತುಂಬಾ ಪ್ರಮುಖವಾಗಿದ್ದು ಕಥೆಗೆ ಒಂದು ತೂಕ ಕೊಡುತ್ತದೆ ಎಂದಿದ್ದಾರೆ.