ಬೆಂಗಳೂರು (ಏ. 18): ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸಾಹೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ರೊಮ್ಯಾಂಟಿಕ್ ಫೋಟೋವೊಂದು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಈ ಫೋಟೋದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ರೊಮ್ಯಾಂಟಿಕ್ ಆಗಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಶ್ರದ್ಧಾ ಗುಲಾಬಿ ಬಣ್ಣದ ಉಡುಪಿನಲ್ಲಿ ಮುದ್ದಾಗಿ ಕಾ ಣಿಸುತ್ತಿದ್ದರೆ ಪ್ರಭಾಸ್ ಬಿಳಿ ಬಣ್ಣದ ಟೀ ಶರ್ಟ್ ನಲ್ಲಿ ಕಾಲೇಜು ಹುಡುಗನಂತೆ ಕಾಣಿಸುತ್ತಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 

ಸಾಹೋ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಹೈದರಾಬಾದ್, ಮುಂಬೈ, ದುಬೈ, ರೊಮಾನಿಯಾ ಹಾಗೂ ಯುರೋಪ್ ನ ಕೆಲವು ಭಾಗಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಆಗಸ್ಟ್ 15 ರಂದು ಸ್ವತಂತ್ರ ದಿನಾಚರಣೆಯಂದು ಸಾಹೋ ರಿಲೀಸ್ ಆಗಲಿದೆ.