ಗರ್ಭಕೋಶದ ಕ್ಯಾನ್ಸರ್​ನಿಂದ ಸತ್ತ ನಟಿ ಎದ್ದು ಬಂದಾಗ ಹೀಗೆಲ್ಲಾ ಆಯ್ತು ನೋಡಿ... ಅಷ್ಟಕ್ಕೂ ಯಾರೀ ನಟಿ? ನೆಟ್ಟಿಗರಿಗೆ ಕೋಪ ಯಾಕೆ?  

ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇರೋ ಬಾಲಿವುಡ್​​ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಕೆಲ ತಿಂಗಳ ಹಿಂದೆ ಎಲ್ಲೆಲ್ಲೂ ಬಾಲಿವುಡ್​ ನಟಿ ಪೂನಂ ಪಾಂಡೆಯ ವಿಷಯ ಸದ್ದು ಮಾಡಿತ್ತು. ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.

Add Asianetnews Kannada as a Preferred SourcegooglePreferred

 ಸಾವಿನ ಸುಳ್ಳು ಸುದ್ದಿ ಹರಡಿದ್ದ ಈಕೆಯ ವಿರುದ್ಧ ಇದಾಗಲೇ ಹಲವಾರು ಕೇಸ್​ ದಾಖಲಾಗಿದೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯೂ ದಾಖಲಾಗಿದೆ. ಆದರೆ ಸದ್ಯ ಯಾವ ಕೇಸ್​ಗಳದ್ದೂ ಸುದ್ದಿ ಇಲ್ಲ. ಎಲ್ಲವೂ ಸೈಲೆಂಟ್​ ಆಗಿದೆ. ಪೂನಂ ಸುಳ್ಳು ಸುದ್ದಿ ಹರಡಿದ್ದು ಗೊತ್ತಾಗುತ್ತಿದ್ದಂತೆಯೇ ಚಿತ್ರನಿರ್ಮಾಪಕ ಅಶೋಕ್​ ಪಂಡಿತ್​ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್​ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ. ಇದೇ ಹಿನ್ನೆಲೆಯಲ್ಲಿ ಕೇಸ್​ ದಾಖಲಾಗಿದ್ದರೂ ಇದುವರೆಗೆ ಏನೂ ಸುದ್ದಿಯಿಲ್ಲ.

ಊರ್ವಶಿ ಸ್ನಾನದ ವಿಡಿಯೋ ಲೀಕ್‌ ಬೆನ್ನಲ್ಲೇ ಮ್ಯಾನೇಜರ್‌ ಜೊತೆಗಿನ ಆಡಿಯೋನೂ ಬಹಿರಂಗ! ನಟಿ ಹೇಳಿದ್ದೇನು?

ಆದರೆ ನಟಿಯ ವರ್ಚಸ್ಸಿಗೆ ಏನೂ ಕಡಿಮೆ ಇಲ್ಲ. ಇವೆಲ್ಲಾ ಸುದ್ದಿಗಳ ಬಳಿಕವೂ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ. ಜಾಹೀರಾತು ಕಂಪೆನಿಗಳಿಂದಲೂ ಒಳ್ಳೆಯ ಆಫರ್​ಗಳು ಬರುತ್ತಲೇ ಇವೆ. ಇದೀಗ ನದಿ ತೀರದಲ್ಲಿ ಬಿಕಿನಿ ತೊಟ್ಟು ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಸತ್ತವಳು ಎದ್ದು ಬಂದಾಗ ಹೀಗೆಲ್ಲಾ ಆಗುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ನಟಿಯ ವಿರುದ್ಧ ಇನ್ನಿಲ್ಲದ ಕೆಟ್ಟ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಈಕೆ ಸತ್ತಿರುವ ಸುದ್ದಿ ಕೇಳಿದಾಗ ದುಃಖ ಪಟ್ಟವರೇ ನಟಿಯ ಇಂಥ ವಿಡಿಯೋಗಳನ್ನು ನೋಡಿ ಶಾಪ ಹಾಕುತ್ತಿದ್ದಾರೆ. 

ಆದರೆ ಇವೆಲ್ಲವೂ ಪೂನಂ ಪಾಂಡೆಯಂಥವರಿಗೆ ಹೊಸ ವಿಷಯವೇ ಅಲ್ಲ. ಅಷ್ಟಕ್ಕೂ ಹಲವು ನಟಿಯರಿಗೆ ಅದೊಂದು ರೀತಿ ಹುಚ್ಚೋ ಅಥವಾ ಟ್ರೆಂಡೋ ಗೊತ್ತಿಲ್ಲ. ಖಾಸಗಿ ಭಾಗಗಳನ್ನು ಚೂರುಪಾರು ಮುಚ್ಚಿಕೊಂಡು ಸಂಪೂರ್ಣ ದೇಹ ಪ್ರದರ್ಶನ ಮಾಡುತ್ತಾ ಬಂದರೂ ಬಟ್ಟೆಯನ್ನು ಎಳೆದುಕೊಳ್ಳುತ್ತಾ ವೇದಿಕೆಗೆ ಹೋಗುತ್ತಾರೆ. ಎಲ್ಲವೂ ಕಾಣಿಸುತ್ತಿದ್ದರೂ ಇನ್ನೇನೂ ಕಾಣಬಾರದು ಎಂದೋ ಅಥವಾ ಜನರ ಗಮನವನ್ನು ತಮ್ಮೆಡೆ ಹರಿಸಿಕೊಳ್ಳುವುದಕ್ಕೋ ಏನೋ ಒಟ್ಟಿನಲ್ಲಿ ಬಹುತೇಕ ನಟಿಯರು ಇಂಥದ್ದೊಂದು ಹವ್ಯಾಸ ರೂಢಿಸಿಕೊಂಡಿದ್ದಾರೆ. ಇನ್ನು ಟ್ರೋಲ್​ ಆಗುವುದರಿಂದ ತಮ್ಮ ಖ್ಯಾತಿ (ಕುಖ್ಯಾತಿ) ಆಗುತ್ತದೆ ಎನ್ನುವ ಖುಷಿ ಅವರದ್ದು. ಆದ್ದರಿಂದ ಇಂಥವರಿಗೆ ಏನೂ ಹೇಳಿಪ್ರಯೋಜನ ಇಲ್ಲ ಎನ್ನುತ್ತಲೇ ಕಮೆಂಟ್​ ಮಾಡುವ ಮೂಲಕ ನಟಿಗೆ ಇನ್ನಷ್ಟು ಪ್ರಚಾರ ಸಿಗುತ್ತಲೇ ಇದೆ. 

ಧರಿಸಿರೋ ತುಂಡು ಬಟ್ಟೆ ಬಿಚ್ಚುತ್ತಲೇ ಕೈಕಾಲಿಗೆ ಮಸಾಜ್​ ಮಾಡುವ ಆಫರ್​ ಕೊಟ್ಟ ಶೆರ್ಲಿನ್​: ವಿಡಿಯೋ ವೈರಲ್​

View post on Instagram